ನಾಳೆಯೂ ಭಾರಿ ಮಳೆ ಮುನ್ನೆಚ್ಚರಿಕೆ

NDRF-team
Published on

ಕಾರವಾರ: ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿದಿದ್ದು, ಜು.6 ರಂದು ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳ ಎಲ್ಲ ಶಾಲೆ, ಕಾಲೇಜ್‌ಗಳಿಗೆ ರಜೆ ಘೋಷಿಸಲಾಗಿದೆ.
ಮಳೆಯಿಂದ ಉಂಟಾಗುವ ಹಾನಿ ತಪ್ಪಿಸುವ ಸಲುವಾಗಿ ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡ ಆಗಮಿಸಿದೆ. ಬೆಳಗಾವಿಯಿಂದ 29 ಜನರ ತಂಡ ಆಗಮಿಸಿದ್ದು, ಹೊನ್ನಾವರ ಮಂಕಿ ಪ್ರಕೃತಿ ವಿಕೋಪ ಕೇಂದ್ರದಲ್ಲಿ ಬೀಡು ಬಿಟ್ಟಿದೆ. ಶುಕ್ರವಾರ ಬೆಳಗ್ಗೆ ಮಳೆ ಇಳಿಮುಖವಾಗಿದೆ. ಆದರೂ ತಗ್ಗು ಪ್ರದೇಶದಲ್ಲಿರುವ ಒಟ್ಟು 128 ಕುಟುಂಬಗಳ 255 ಜನರನ್ನು ಕಾಳಜಿ ಕೇಂದ್ರಗಳಲ್ಲೇ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಹೊನ್ನಾವರದಲ್ಲಿ 6 ಮತ್ತು ಕುಮಟಾದಲ್ಲಿ 1 ಕಾಳಜಿ ಕೇಂದ್ರಗಳಿವೆ. ಕಾರವಾರದಲ್ಲಿ ಶುಕ್ರವಾರ ಬೆಳಗಿನಿಂದ ಭಾರಿ ಮಳೆಯಾಯಿತು. ಬೆಳಗ್ಗೆ 8 ರಿಂದ ಸಾಯಂಕಾಲ 5.30 ರ ಅವಧಿಯಲ್ಲಿ ಒಟ್ಟು 61 ಮಿಲಿ ಮೀಟರ್ ಮಳೆಯಾಗಿದೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಒಟ್ಟು 108.2 ಮಿಮೀ ಮಳೆಯಾಗಿದೆ. ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಯ ಪ್ರಮಾಣ (ಮಿಮೀಗಳಲ್ಲಿ)

ಅಂಕೋಲಾ-86.2,ಭಟ್ಕಳ-58.7,ಹಳಿಯಾಳ-8.9,ಹೊನ್ನಾವರ-50.4,ಕಾರವಾರ-69.8,ಕುಮಟಾ-59.3,ಮುಂಡಗೋಡ-4.2,ಸಿದ್ದಾಪುರ-23.4,ಶಿರಸಿ-21.6,ಜೊಯಿಡಾ-52.9,ಯಲ್ಲಾಪುರ-25,ದಾಂಡೇಲಿ-20 ಮಿಮೀ ಮಳೆ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net