

ಕಾರವಾರ: ಒಂದು ವರ್ಷವಾಗುವುದರೊಳಗೇ ಉತ್ತರ ಕನ್ನಡ ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ಎತ್ತಂಗಡಿಯಾಗಿದೆ. ನೂತನ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ಕೆ.ಲಕ್ಷ್ಮೀಪ್ರಿಯಾ ನೇಮಕಗೊಂಡಿದ್ದಾರೆ.
2023 ರ ಜುಲೈ 25 ರಂದು ಗಂಗೂಬಾಯಿ ರಮೇಶ ಮಾನಕರ್ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದರು. ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಅಲ್ಲದೇ ಹಲವು ಜನಪರ ಕಾರ್ಯಗಳನ್ನು ಜಾರಿಗೆ ತಂದಿದ್ದರು. ಆದರೆ, ವರ್ಷ ಕಳೆಯುವುದರೊಳಗೇ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಆಯೋಗದಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು, ಕರ್ನಾಟಕ ರಾಜ್ಯಪತ್ರದ ಮುಖ್ಯ ಸಂಪಾದರಕನ್ನಾಗಿ ನೇಮಿಸಲಾಗಿದೆ.
ಕೆ.ಲಕ್ಷ್ಮೀಪ್ರಿಯಾ 2015 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ. ಕುಮಟಾದ ಉಪವಿಭಾಗಾಧಿಕಾರಿಯಾಗಿ ಅವರು ತಮ್ಮ ಪ್ರೊಬೇಷನರಿ ಅವಧಿ ಮುಗಿಸಿದ್ದರು. ನಂತರ ಎಂಒಇಎಫ್ ಸಹಾಯಕ ಕಾರ್ಯದರ್ಶಿಯಾಗಿ 2017 ರಲ್ಲಿ ನೇಮಕಗೊಂಡಿದ್ದರು. ಸದ್ಯ ಅವರು ಮೈಸೂರಿನ ಅಬ್ದುಲ್ ನಜೀರ್ ಸಾಬ್ ಪಂಚಾಯತ್‌ರಾಜ್ ತರಬೇತಿ ಸಂಸ್ಥೆಯ ನಿರ್ದೇಶಕರಾಗಿದ್ದರು.