ಭಾರಿ ಮಳೆಯಿಂದ ವಾಹನ ಸಂಚಾರಕ್ಕೆ ಅಡ್ಡಿ

New Project (30)
Published on

ಉಪ್ಪಿನಂಗಡಿ: ಬುಧವಾರ ದಿನವಿಡೀ ಸುರಿದ ಮಳೆಯಿಂದಾಗಿ ದೀಪಾವಳಿ ಸಂಭ್ರಮಕ್ಕೆ ಅಡ್ಡಿಯುಂಟಾಗಿದ್ದು, ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಾ.ಹೆ.75ರ ಕಾಂಚನ ಕ್ರಾಸ್ ಬಳಿ ಜಲಪ್ರವಾಹವುಂಟಾಗಿ ವಾಹನ ಸಂಚಾರಕ್ಕೆ ಅರ್ಧ ಗಂಟೆ ತಡೆಯುಂಟಾಯಿತು.

ಬುಧವಾರ ದಿನವಿಡೀ ಮೋಡ ಆವರಿಸಿದ ವಾತಾವರಣವಿದ್ದು, ಮಧ್ಯಾಹ್ನದ ಬಳಿಕ ಮಳೆ ಬಿರುಸು ಪಡೆದಿತ್ತು. ರಾತ್ರಿಯಾಗುತ್ತಿದ್ದಂತೆ ಭಾರಿ ಮಳೆ ಸುರಿಯಲಾರಂಭಿಸಿದ ಪರಿಣಾಮ ತೋಡು, ಚರಂಡಿಗಳಲ್ಲಿ ನೀರು ದೊಡ್ಡ ಪ್ರಮಾಣದಲ್ಲಿ ಹರಿಯತೊಡಗಿತು. ಕಾಂಚನ ಕ್ರಾಸ್ ಬಳಿ ಮಳೆ ನೀರು ತೋಡಿನಲ್ಲಿ ಹರಿಯಲಾಗದೆ ರಾ.ಹೆ.75ರಲ್ಲೇ ಹರಿಯಲಾರಂಭಿಸಿದ ಪರಿಣಾಮ ಹೆದ್ದಾರಿ ಅಕ್ಷರಶಃ ನದಿಯಂತೆ ಕಂಡುಬಂದಿತ್ತು. ಹೆದ್ದಾರಿಯಲ್ಲಿ ಮೊಣಕಾಲುವರೆಗೆ ನೀರು ಹರಿಯಲಾರಂಭಿಸಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net