ಯಾವುದೇ ಭಯವಿಲ್ಲದೆ ತಿನ್ನಬಹುದಾದ ಆರೋಗ್ಯಕರ ಬೀದಿ ಆಹಾರಗಳು! Street Food

untitled-design-30-6888849b1e25c
Published on

Street Food : ಜನಜಂಗುಳಿಯಿಂದಲೇ ತುಂಬಿರುವಂತಹ ಭಾರತೀಯ ಮಾರುಕಟ್ಟೆಯಲ್ಲಿ ಜನರು ಗದ್ದಲ, ಚೌಕಾಶಿ ಮಾಡುತ್ತಾ ನಿಂತಿರುತ್ತಾರೆ. ಆ ಟ್ರಾಫಿಕ್​ ರಸ್ತೆಯಲ್ಲಿ ವಾಹನಗಳು ಜೋರಾಗಿ ಹಾರ್ನ್​ ಶಬ್ಧ ಮಾಡುತ್ತಿರುತ್ತವೆ. ಒಂದು ಮೂಲೆಯಲ್ಲಿ ಆಲೂ, ಟಿಕ್ಕಿ ಪುರಿಗಳ ಗಮ ಜನರನ್ನು ಸೆಳೆಯುತ್ತಿರುವಾಗ, ಮತ್ತೊಂದು ಮೂಲೆಯಿಂದ ಯಾರೋ ಅಣ್ಣಾ ಒಂದು​ ಪ್ಲೇಟ್ ಪಾನಿಪುರಿ ಕೊಡು ಎಂದು ಕೇಳುವುದನ್ನು ನೋಡಿರಬಹುದು.

ಅಂದಹಾಗೆ, ಶಾಪಿಂಗ್​ ಸಮಯದಲ್ಲಿ ಯಾರು ತಾನೇ ಬೀದಿ ಆಹಾರ ಇಷ್ಟಪಡುವುದಿಲ್ಲ ಹೇಳಿ, ಆದರೆ ಎಲ್ಲಾ ಆಹಾರ ಕ್ಯಾಲೋರಿಗಳಿಂದ ತುಂಬಿರುವುದಿಲ್ಲ. ಸಹಜವಾಗಿ ಸಮೋಸ, ಕಚೋರಿ ಈ ರೀತಿಯ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಎಷ್ಟು ಶುಚಿಯಾಗಿ ಮಾಡಿರುತ್ತಾರೆ ಅನ್ನೋದೆ ಇಲ್ಲಿನ ಪ್ರಶ್ನೆಯಾಗಿರುತ್ತದೆ. ಎಣ್ಣೆಯಲ್ಲಿ ಕರಿದ ತಿನಿಸುಗಳಿಂದ ಆದಷ್ಟು ದೂರ ಇದ್ದರೆ ಒಳ್ಳೆಯದು. ಹೀಗಾಗಿ ಆರೋಗ್ಯ ಹಾಗೂ ರುಚಿ ನೀಡುವಂತಹ ಬೀದಿ ಆಹಾರಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ಭೇಲ್ ಪುರಿ

ಈ ಜನಪ್ರಿಯ ಭಾರತೀಯ ತಿಂಡಿಯನ್ನು ಮರ್ಮುರ್ ಎಂದು ಕರೆಯಲಾಗುತ್ತದೆ. ತರಕಾರಿಗಳನ್ನು ಕತ್ತರಿಸಿ, ಸ್ವಲ್ಪ ಹುಣಸೆಹಣ್ಣು ಹಾಗೂ ಕೆಲವು ಮಸಾಲೆ ಪದಾರ್ಥಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಈ ಪುರಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದರೆ, ತರಕಾರಿಗಳು ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಇದು ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಕಡಲೆಕಾಳು ಉಸುಳಿ

ಕಡಲೆಕಾಳು ಹೆಚ್ಚು ಪ್ರೊಟೀನ್​ ಹೊಂದಿರುತ್ತವೆ. ಬೇಯಿಸಿದ ಕಡಲೆ ಕಾಳಿಗೆ ಕೆಲವು ಮಸಾಲೆಗಳು, ಟೊಮ್ಯಾಟೊ, ಈರುಳ್ಳಿ, ಸೌತೆಕಾಯಿ ಮತ್ತು ಮೆಣಸಿನಕಾಯಿಯನ್ನು ಸೇರಿಸಿ ಸೇವಿಸುವುದರಿಂದ ಪೌಷ್ಟಿಕಾಂಶವನ್ನು ನೀಡಲು ಸಹಾಯ ಮಾಡುತ್ತದೆ.

ಜೋಳ

ಕಡಿಮೆ ಹಣ ಹಾಗೂ ಅತಿಯಾದ ರುಚಿಯಲ್ಲಿ ಸಿಗುವಂತಹ ಒಂದು ಬೀದಿ ಆಹಾರವಾಗಿದೆ. ಇದನ್ನು ಬೆಂಕಿಯ ಮೇಲೆ ಹುರಿದು ನಿಂಬೆ ರಸ ಹಾಗೂ ಉಪ್ಪಿನೊಂದಿಗೆ ಸವರಿ ಜನರಿಗೆ ತಿನ್ನಲು ಕೊಡಲಾಗುತ್ತದೆ. ಇದು ಬೀದಿ ಆಹಾರವನ್ನು ಆನಂದಿಸಲು ಸಹಾಯ ಮಾಡುತ್ತದೆ.

ಇಡ್ಲಿ

ದಕ್ಷಿಣ ಭಾರತದ ಖಾದ್ಯದಲ್ಲೊಂದಾದ ಇಡ್ಲಿಯನ್ನು ಅಕ್ಕಿ ಹಾಗೂ ಉದ್ದಿನ ಬೇಳೆಯಿಂದ ಮಾಡಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು, ಅಧಿಕ ಫೈಬರ್​ ಹೊಂದಿರುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ.

ಹಣ್ಣುಗಳು

ಬೀದಿಗಳಲ್ಲಿ ಹಣ್ಣುಗಳನ್ನು ಮರಾಟ ಮಾಡುವುದನ್ನು ನೋಡಿರಬಹುದು. ಹಣ್ಣುಗಳಲ್ಲಿ ಅಧಿಕ ಪ್ರೋಟೀನ್​ ಇರುವುದರಿಂದ ಇವು ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಇಲ್ಲಿ ಎಲ್ಲಾ ರಿತಿಯ ಹಣ್ಣುಗಳನ್ನು ತುಂಡು ಮಾಡಿ, ಅವುಗಳಿಗೆ ಸ್ವಲ್ಪ ಜೇನುತುಪ್ಪ ಅಥವಾ ಉಪ್ಪು ಸೇರಿಸಿ ತಿನ್ನಲು ನೀಡುತ್ತಾರೆ ಇದರಿಂದ ಅಧಿಕವಾದ ಪ್ರೋಟೀನ್​ ದೊರೆಯುತ್ತದೆ.

ಬೇಯಿಸಿದ ಮೊಟ್ಟೆಗಳು

ಮೊಟ್ಟೆಗಳಲ್ಲಿ ಪ್ರೋಟೀನ್​ ಅಧಿಕವಾಗಿರುವುದರಿಂದ ಈ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಬೇಯಿಸಿದ ಮೊಟ್ಟೆಗಳಿಗೆ ಮಸಾಲೆಗಳನ್ನು ಹಾಕಿ ನೀಡುತ್ತಾರೆ. ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ಉತ್ತಮ ಲಾಭ ಸಿಗುತ್ತದೆ.

ಹೆಸರುಬೇಳೆ

ಇದು ಬೀದಿ ಬದಿಯಲ್ಲಿ ಮಾಡುವಂತಹ ಆಹಾರ. ಬೇಯಿಸಿದ ಹೆಸರುಬೇಳೆಗೆ ಮಸಾಲೆಗಳನ್ನು ಹಾಕುವುದರಿಂದ ಅಧಿಕ ಪ್ರೋಟೀನ್​ಗಳು ಸಿಗುತ್ತವೆ. ಹಾಗೆ ತಿನ್ನಲು ಕೂಡ ರುಚಿಯಾಗಿರುತ್ತದೆ.

ಜನರು ಪ್ರತಿನಿತ್ಯ ಬೀದಿ ಆಹಾರಗಳ ಮೇಲೆ ಅವಲಂಬಿತರಾದರೆ ಅವುಗಳಿಂದ ಆರೋಗ್ಯದ ಮೇಲೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಆದರಿಂದ ಆಹಾರ ಪ್ರಿಯರು ಮನೆಯಲ್ಲಿಯೇ ತಯಾರಿಸಿ ತಿನ್ನುವುದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net