ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ, ಪೌಷ್ಟಿಕತಜ್ಞರ ಈ ಸಲಹೆಗಳನ್ನು ಪಾಲಿಸಿ! Weight loss

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Weight loss: ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಸುಲಭದ ಮಾತೇನಲ್ಲ, ಇದಕ್ಕೆ ಕಠಿಣ ಪರಿಶ್ರಮದ ಜೊತೆ ಪೌಷ್ಟಿಕಾಂಶಗಳ ಆಹಾರ ಸೇವನೆಯು ಮುಖ್ಯ. ತೂಕ ಇಳಿಸುವ ಯೋಜನೆಗಳು ಹೆಚ್ಚಾಗಿ ಕಾರ್ಯನಿರತ ಜೀವನ, ಒತ್ತಡ ಮತ್ತು ಹಬ್ಬದ ಋತುವಿನಿಂದ ಅಡ್ಡಿಯಾಗುತ್ತವೆ. ಹಾಗಾಗಿ ನೀವೇನಾದರೂ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇಂದೇ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಿ.
ಫಿಟ್​ನೆಸ್​ ತರಬೇತುದಾರರೊಬ್ಬರು 4 ತಿಂಗಳಲ್ಲಿ 25 ಕೆಜಿ ತೂಕ ಇಳಿಸಿಕೊಂಡ ಸ್ಪೂರ್ತಿದಾಯಕ ಮಾತುಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಇದು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಸಹಕಾರಿಯಾಗಿದೆ.
ಈ ಸಣ್ಣ ಅಭ್ಯಾಸಗಳು ದೊಡ್ಡ ವ್ಯತ್ಯಾಸವನ್ನುಂಟುಮಾಡುತ್ತವೆ ಎಂದು ಅಮಾಕಾ ತಿಳಿಸುತ್ತಾರೆ. ಹಾಗಾಗಿ ನೀವೇನಾದರೂ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿದರೆ, ಈ ಸರಳ ಪ್ರಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳಿ.

ಈ ಪಾನೀಯದೊಂದಿಗೆ ನಿಮ್ಮ ದಿನವನ್ನು ಆರಂಭಿಸಿ

ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಹಸಿರು ಡಿಟಾಕ್ಸ್ ಸ್ಮೂಥಿ ಮತ್ತು ಆಪಲ್ ಸೈಡರ್ ವಿನೆಗರ್ ಬೆರೆಸಿದ ಬೆಚ್ಚಗಿನ ನೀರಿನಿಂದ ದಿನವನ್ನು ಆರಂಭಿಸಿ ಎಂದು ಅಮಾಕಾ ಶಿಫಾರಸು ಮಾಡುತ್ತಾರೆ. ಇದನ್ನು ಆರೋಗ್ಯಕರ ಆಹಾರದೊಂದಿಗೆ ಸೇರಿಸುವುದರಿಂದ ಇದು ಹೊಟ್ಟೆಯನ್ನು ಉಬ್ಬುವುದು, ಗ್ಯಾಸ್​, ಅಜೀರ್ಣ, ಸಕ್ಕರೆ ಹಂಬಲವನ್ನು ನಿಯಂತ್ರಿಸುವಂತಹ ಕೆಲಸವನ್ನು ಮಾಡುತ್ತದೆ.

ಕಡಿಮೆ ಊಟ ಮಾಡಿ

ಅವರು ಪ್ರೊಟೀನ್​ ಭರಿತ ಮೆಣಸಿನ ಸೂಪ್​ನ್ನು ಸೇವಿಸುವಂತೆ ಹೇಳುತ್ತಾರೆ. ಅದರ ಜೊತೆಗೆ ಮೀನು ಮತ್ತು ಕೋಳಿ ಮಾಂಸವನ್ನು ಸೇರಿಸಬಹುದು. ಸಸ್ಯಹಾರಿಗಳು ಅನ್ನ, ಬೇಯಿಸಿದ ಆಲೂಗಡ್ಡೆ ಮತ್ತು ಬಾಳೆಹಣ್ಣುಗಳಂತಹ ಸಣ್ಣ ಪ್ರಮಾಣದ ಆಹಾರಗಳನ್ನು ಸೇವಿಸುವುದರಿಂದ ಇದು ದೇಹಕ್ಕೆ ಕಾರ್ಬೋಹೈಡ್ರೇಟ್‌ ನೀಡುವುದರ ಜೊತೆಗೆ ಶಕ್ತಿಯನ್ನು ಒದಗಿಸುತ್ತದೆ.

ವ್ಯಾಯಾಮ ಅಭ್ಯಾಸ ಮಾಡಿ

ತೂಕ ಇಳಿಸಿಕೊಳ್ಳಲು ಸ್ಥಿರತೆ ಮುಖ್ಯ. ಹಾಗಾಗಿ ಪ್ರತಿದಿನ 30 ನಿಮಿಷಗಳ ವ್ಯಾಯಾಮ ಬಹಳ ಮುಖ್ಯವಾಗಿರುತ್ತದೆ. ಇದನ್ನು ಅಭ್ಯಾಸ ಮಾಡುವುದರಿಂದ ದೇಹದಲ್ಲಿರುವ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ನಿಮ್ಮ ದೇಹವು ಆಯಾಸಗೊಳ್ಳದಂತೆ ತಡೆಯಲು ಶಕ್ತಿ ತರಬೇತಿ ಮತ್ತು ಲಘು ಕಾರ್ಡಿಯೋಗಳ ಅಭ್ಯಾಸವನ್ನು ಮಾಡಿ.

ಜೀವನಶೈಲಿಯ ಬಗ್ಗೆ ಗಮನ ಹರಿಸಿ

ಆಹಾರ ಪದ್ಧತಿ ಮತ್ತು ವ್ಯಾಯಾಮ ಮಾತ್ರವಲ್ಲ, ಒಟ್ಟಾರೆ ಜೀವನಶೈಲಿಯ ಸಮತೋಲನವೂ ಮುಖ್ಯ. ಹಾಗಾಗಿ ಪ್ರತಿದಿನ ಬೇಗ ಏಳುವುದು, ಬೇಗ ಮಲಗುವುದು, ತಡರಾತ್ರಿ ಊಟವನ್ನು ಮಾಡುವುದು, ಅತಿಯಾದ ಮೊಬೈಲ್​, ಸ್ಕ್ರೀನ್​ಗಳನ್ನು ಮಿತಗೊಳಿಸುವ ಅಭ್ಯಾಸವನ್ನು ಮಾಡಿದಾಗ ಇದು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಸ್ಮಾರ್ಟ್ ಸ್ನ್ಯಾಕಿಂಗ್ ಅಳವಡಿಸಿಕೊಳ್ಳಿ

ನೀವು ಆಗಾಗ ಸಿಹಿ ತಿನ್ನಲು ಬಯಸುತ್ತಿದ್ದರೆ, ಕಡಿಮೆ ಕ್ಯಾಲೋರಿ ಹೊಂದಿರುವ ಹಣ್ಣಿನ ಬಟ್ಟಲು ಉತ್ತಮ ಆಯ್ಕೆ ಮಾಡಿಕೊಳ್ಳಿ. ಪಪ್ಪಾಯಿ, ಸೇಬು ಮತ್ತು ಕಲ್ಲಂಗಡಿ ಮುಂತಾದ ಹಣ್ಣುಗಳು ಕಡುಬಯಕೆಗಳನ್ನು ಪೂರೈಸುವುದಲ್ಲದೆ, ಹೆಚ್ಚಿನ ಕ್ಯಾಲೋರಿಗಳನ್ನು ಸೇರಿಸುವುದಿಲ್ಲ.

ರಾತ್ರಿಯಲ್ಲಿ ಗ್ರೀನ್ ಟೀ ಕುಡಿಯಿರಿ

ತೂಕ ಇಳಿಸಿಕೊಳ್ಳಲು ಬಯಸಿದರೆ, ಆದಷ್ಟು ರಾತ್ರಿ ವೇಳೆಯಲ್ಲಿ ಹಸಿರು ಚಹಾವನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಅತಿಯಾಗಿ ತಿನ್ನುವುದರ ಅಭ್ಯಾಸವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಲಗುವ ಮುನ್ನ ಒಂದು ಕಪ್​ ಗ್ರೀನ್​ ಟೀ ಕುಡಿಯಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net