ಮೊಬೈಲ್​ಗೆ ಅಡಿಕ್ಟ್​ ಆಗಿದ್ದೀರಾ? ಈ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು 60 ಸೆಕೆಂಡುಗಳಲ್ಲಿ ಬಿಟ್ಟುಬಿಡಬಹುದು! Phone Addiction

ಮೊಬೈಲ್​ಗೆ ಅಡಿಕ್ಟ್​ ಆಗಿದ್ದೀರಾ? ಈ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು 60 ಸೆಕೆಂಡುಗಳಲ್ಲಿ ಬಿಟ್ಟುಬಿಡಬಹುದು! Phone Addiction
ಮೊಬೈಲ್​ಗೆ ಅಡಿಕ್ಟ್​ ಆಗಿದ್ದೀರಾ? ಈ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು 60 ಸೆಕೆಂಡುಗಳಲ್ಲಿ ಬಿಟ್ಟುಬಿಡಬಹುದು! Phone Addiction
Published on

ಪ್ರಮುಖ ಮುಖ್ಯಾಂಶಗಳು

  • ಬದಲಾದ ಸನ್ನಿವೇಶದಲ್ಲಿ ಮೊಬೈಲ್ ಎಂಬ ಮಾಯಾಂಗನೆಯ ಪ್ರಭಾವ ಎಲ್ಲೆ ಮೀರಿದೆ
  • ಕ್ಷಣಾರ್ಧದಲ್ಲಿ ಬೆರಳುತುದಿಯಲ್ಲಿ ಇಡೀ ಜಗತ್ತಿನ ಆಗುಹೋಗುಗಳನ್ನು ಅರಿಯುವ ಸೌಲಭ್ಯ ನಮ್ಮದಾಗಿದೆ
  • ಇದರ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಿರುವುದು ಕಳವಳಕಾರಿ ಸಂಗತಿ
  • ದಿನದಿಂದ ದಿನಕ್ಕೆ ಮೊಬೈಲ್ ಗೀಳು ಮಿತಿಮೀರಿ ಸಂಬಂಧಗಳು ಕಳಚುತ್ತಿವೆ
Phone Addiction : ಬದಲಾದ ಸನ್ನಿವೇಶದಲ್ಲಿ ಮೊಬೈಲ್ ಎಂಬ ಮಾಯಾಂಗನೆಯ ಪ್ರಭಾವ ಎಲ್ಲೆ ಮೀರಿದೆ. ಕ್ಷಣಾರ್ಧದಲ್ಲಿ ಬೆರಳುತುದಿಯಲ್ಲಿ ಇಡೀ ಜಗತ್ತಿನ ಆಗುಹೋಗುಗಳನ್ನು ಅರಿಯುವ ಸೌಲಭ್ಯ ನಮ್ಮದಾಗಿದೆ. ಇದರ ಫಲಾನುಭವಿಗಳು ದೊಡ್ಡವರಷ್ಟೇ ಅಲ್ಲ ಮಕ್ಕಳೂ ಇದ್ದಾರೆ. ಇದರ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಿರುವುದು ಕಳವಳಕಾರಿ ಸಂಗತಿ. ದಿನದಿಂದ ದಿನಕ್ಕೆ ಮೊಬೈಲ್ ಗೀಳು ಮಿತಿಮೀರಿ ಸಂಬಂಧಗಳು ಕಳಚುತ್ತಿವೆ.
ಒಂದು ಹೊತ್ತು ಊಟವಿಲ್ಲದಿದ್ದರೂ ಪರವಾಗಿಲ್ಲ ಆದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ಸುತ್ತು ಹಾಕಿ ಬರಲೇಬೇಕು. ಕೈಯಲ್ಲಿ ಮೊಬೈಲ್ ಇದ್ದಾಗ ವಾಸ್ತವ ಜಗತ್ತನ್ನೇ ಮರೆತು, ಭ್ರಮಾ ಲೋಕದಲ್ಲಿ ಮುಳುಗಿರುತ್ತಾರೆ. ಎಲ್ಲ ಯುವ ಸಮುದಾಯ ಮೊಬೈಲ್​ ಮೋಡಿಯಲ್ಲಿ ಬಿದ್ದಿದೆ. ಮೊಬೈಲ್​ ಬಳಸುವುದನ್ನು ಕಡಿಮೆ ಮಾಡಬೇಕೆಂದು ಬಯಸಿದರು ಕೂಡ ಬಹುತೇಕ ಮಂದಿಯಿಂದ ಇದು ಸಾಧ್ಯವಾಗುತ್ತಿಲ್ಲ. ಆದರೆ, ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಮೊಬೈಲ್​ ವ್ಯಸನದಿಂದ ಹೊರಬರಬಹುದು. ಅದು ಹೇಗೆ ಎಂದು ತಿಳಿಯಲು ಬಯಸುವುದಾದರೆ ಮುಂದೆ ಓದಿ.
ಸಮಗ್ರ ಜೀವನಶೈಲಿ ತಜ್ಞ ಲ್ಯೂಕ್ ಕೌಂಟಿನ್ಹೋ ಅವರ ಪ್ರಕಾರ, ಮೊಬೈಲ್ ಫೋನ್‌ನಲ್ಲಿ ಸ್ಕ್ರೋಲ್ ಮಾಡುವಾಗ ಮೆದುಳು ಅತಿಯಾಗಿ ಪ್ರಚೋದಿಸಲ್ಪಡುತ್ತದೆ. ಹೀಗಾಗಿ, ಈ ಸಮಸ್ಯೆಯನ್ನು ನಿವಾರಿಸಲು, ನಿಮ್ಮ ಫೋನ್ ಅನ್ನು 60 ಸೆಕೆಂಡುಗಳ ಕಾಲ ಒಂದು ಕಡೆ ಇರಿಸಿ. ಒಂದು ಕಡೆ ಸುಮ್ಮನೇ ಇಟ್ಟರೆ ಸಾಲದು, ನಿಮ್ಮ ಫೋನ್ ಹೊರತುಪಡಿಸಿ ಏನನ್ನಾದರೂ ಒಂದು ಚಟುವಟಿಕೆಯನ್ನು ಮಾಡಬೇಕಾಗುತ್ತದೆ. ಯಾವುದಾದರೂ ಒಂದು ಸುಲಭ ಕೆಲಸವನ್ನು ಆರಿಸಿ, ಅದನ್ನು 60 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ. ನಂತರ ನೀವು ಮತ್ತೆ ಸ್ಕ್ರೋಲ್ ಮಾಡಲು ಬಯಸುವುದಿಲ್ಲ ಎಂದು ಲ್ಯೂಕ್ ಹೇಳಿದ್ದಾರೆ. ಇದನ್ನು ನಿಧಾನಗತಿಯ ಹರಿವು ಎಂದು ಲ್ಯೂಕ್​ ಕರೆದಿದ್ದಾರೆ. 

ಬೇರೆ ಕ್ರಮಗಳನ್ನು ಅನುಸರಿಸಬಹುದು

ನೀವು 5-5-5 ಎಂಬ ತಂತ್ರವನ್ನು ಸಹ ಬಳಸಬಹುದು. ಅಂದರೆ, ಐದು ಬಾರಿ ನಿಧಾನವಾಗಿ ಉಸಿರಾಡಿ ಮತ್ತು ಐದು ಬಾರಿ ನಿಧಾನವಾಗಿ ಉಸಿರನ್ನು ಬಿಡುವುದು. ಈ ಸಮಯದಲ್ಲಿ ನೀವು ನಿಮ್ಮ ಮೂಗಿನ ಮೂಲಕ ಮಾತ್ರ ಉಸಿರಾಡಬೇಕು. ಮತ್ತೊಂದು ತಂತ್ರವೆಂದರೆ ಸ್ವಲ್ಪ ಸೂರ್ಯನ ಬೆಳಕನ್ನು ಪಡೆಯುವುದು. ನಿಮ್ಮ ಫೋನ್ ಅನ್ನು ದೂರವಿಟ್ಟು, ಸೂರ್ಯನ ಬೆಳಕು ಬರುವ ಕಿಟಕಿಯ ಬಳಿ ಹೋಗಿ. ನೀವು ಅರವತ್ತು ಸೆಕೆಂಡುಗಳ ಕಾಲ ಪ್ರಕೃತಿಯಲ್ಲಿ ಕಳೆದರೆ, ನಿಮ್ಮ ವ್ಯಸನ ಕಡಿಮೆಯಾಗುವುದನ್ನು ನೀವು ನೋಡುತ್ತೀರಿ. 

ಇನ್ನು ಕೆಲ ಟೆಕ್ನಿಕ್​ ಇವೆ

ಮತ್ತೊಂದು ಟೆಕ್ನಿಕ್​ ಅಂದರೆ, ಮನೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ನಡೆದಾಡುವುದು. ಹೀಗೆ ನಡೆಯುವಾಗ, ನೀವು ಕೃತಜ್ಞರಾಗಿರುವ ಯಾರನ್ನಾದರೂ ಯೋಚಿಸಿ, ಇದರಿಂದ ನಿಮ್ಮ ಗಮನ ಬೇರೆಡೆಗೆ ಹೋಗುತ್ತದೆ. ಇನ್ನೊಂದು ಮಾರ್ಗವೆಂದರೆ ಸಂಗೀತ ಕೇಳುವುದು. ನಿಮ್ಮ ನೆಚ್ಚಿನ ಹಾಡನ್ನು ಕೇಳುವುದರಿಂದ ನಿಮ್ಮ ನರಮಂಡಲ ತಂಪಾಗುತ್ತದೆ. 

ಇನ್ನೂ ಬೇಕಾ?

ಮತ್ತೊಂದು ಮಾರ್ಗವಿದೆ. ಅದೇನೆಂದರೆ, ನೀವು ಫೋನ್ ವ್ಯಸನದಿಂದ ಬಳಲುತ್ತಿದ್ದರೆ, ಒಂದು ಕೈಯನ್ನು ನಿಮ್ಮ ಹೃದಯದ ಮೇಲೆ ಮತ್ತು ಇನ್ನೊಂದು ಕೈಯನ್ನು ನಿಮ್ಮ ಹೊಟ್ಟೆಯ ಮೇಲೆ ಇರಿಸಿ, 'ಎಲ್ಲವೂ ಚೆನ್ನಾಗಿದೆ' ಎಂದು ಹೇಳಿ. ನೀವು ಸುರಕ್ಷಿತರಾಗಿದ್ದೀರಿ ಅಂತಾನೂ ಹೇಳಿ. ಇದನ್ನು 30 ಸೆಕೆಂಡುಗಳ ಕಾಲ ಮುಂದುವರಿಸಬೇಕು. ಇದನ್ನು ನಿಧಾನವಾಗಿ ಮಾಡುವುದರಿಂದ, ನಮ್ಮ ದೇಹದ ರೋಗನಿರೋಧಕ ಶಕ್ತಿ ನಿಧಾನವಾಗಿ ಮರುಸ್ಥಾಪನೆಯಾಗುತ್ತದೆ ಎಂದು ಲ್ಯೂಕ್ ವಿವರಿಸುತ್ತಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net