ಬೆಂಗಳೂರು: ಮಧ್ಯಾಹ್ನ ಅಥವಾ ರಾತ್ರಿ ಊಟವಾದ(Sleep after meals) ತಕ್ಷಣ ಕಣ್ಣು ತೂಗುವುದು, ಮೈ ಕೈ ಸೋಲುವಂತಾಗಿ ನಿದ್ರೆ ಆವರಿಸುವುದು ನಮ್ಮಲ್ಲಿ ಬಹುತೇಕರಿಗೆ ಅಭ್ಯಾಸವಾಗಿಬಿಟ್ಟಿದೆ. ಇದನ್ನು 'ಫುಡ್ ಕೋಮಾ' (Food Coma) ಎಂದು ಕರೆಯಲಾಗುತ್ತದೆ. ಆದರೆ, ಪ್ರತಿದಿನ ಊಟದ ನಂತರ ಹೀಗೆ ನಿದ್ರೆ ಬರುವುದು ಕೇವಲ ಆಲಸ್ಯದ ಲಕ್ಷಣವಲ್ಲ, ಇದರ ಹಿಂದೆ ನಿಮ್ಮ ಆರೋಗ್ಯದ ರಹಸ್ಯ ಅಡಗಿರಬಹುದು! ಹೌದು, ತಜ್ಞರ ಪ್ರಕಾರ ಊಟದ ನಂತರ ಬರುವ ನಿದ್ರೆಯನ್ನು ನಿರ್ಲಕ್ಷಿಸುವುದು ಅಪಾಯಕಾರಿಯಾಗಬಹುದು.