ಮೆಂತ್ಯ ತಲೆಹೊಟ್ಟು ಸಮಸ್ಯೆಗೆ ಒಂದು ಅತ್ಯುತ್ತಮ ನೈಸರ್ಗಿಕ ಔಷಧವಾಗಿದೆ. ಇದರಲ್ಲಿ ಆಂಟಿ-ಫಂಗಲ್, ಆಂಟಿ-ಬ್ಯಾಕ್ಟೀರಿಯಲ್, ಆಂಟಿ-ಇನ್‌ಫ್ಲಮೇಟರಿ ಗುಣಗಳಿದ್ದು, ಇದರ ಬಳಕೆಯು ತಲೆಹೊಟ್ಟು ಉಂಟುಮಾಡುವ ಶಿಲೀಂದ್ರ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಹಾಗಾಗಿ ಕೆಲವು ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿಟ್ಟು, ಬೆಳಿಗ್ಗೆ ಪೇಸ್ಟ್ ಮಾಡಿ ನಿಮ್ಮ ನೆತ್ತಿಗೆ ಹಚ್ಚಿ ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ.