ಬೆಂಗಳೂರು: ನಾವು ಸಾಮಾನ್ಯವಾಗಿ ಹಲ್ಲುಗಳನ್ನು(DentalHealth ) ದಿನಕ್ಕೆ ಎರಡು ಬಾರಿ ಉಜ್ಜಿದರೆ ಸಾಕು, ಅವು ಆರೋಗ್ಯವಾಗಿರುತ್ತವೆ ಎಂದು ಭಾವಿಸುತ್ತೇವೆ. ಆದರೆ ನಮಗೆ ಅರಿವಿಲ್ಲದಂತೆ ನಾವು ಮಾಡುವ ಕೆಲವು ದೈನಂದಿನ ಸಣ್ಣ ತಪ್ಪುಗಳು ಹಲ್ಲಿನ ಮೇಲ್ಪದರವಾದ 'ಎನಾಮೆಲ್' ಅನ್ನು ಶಾಶ್ವತವಾಗಿ ನಾಶಪಡಿಸುತ್ತಿವೆ. ದಂತ ವೈದ್ಯರ ಪ್ರಕಾರ, ಶೇ. 70 ರಷ್ಟು ಜನರು ಈ ಕೆಳಗಿನ 5 ಅಭ್ಯಾಸಗಳಿಂದಾಗಿ ಚಿಕ್ಕ ವಯಸ್ಸಿನಲ್ಲೇ ಹಲ್ಲು ನೋವು ಮತ್ತು ಹಲ್ಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.