ನಾಯಿಯ ಆ 'ಮುತ್ತು' ನಿಮ್ಮ ಜೀವಕ್ಕೆ ಅಪಾಯ ತರಬಹುದು: ನೆಕ್ಕುವ ಅಭ್ಯಾಸದ ಹಿಂದಿದೆ ಭಯಾನಕ ಸತ್ಯ! Dog licking

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿವೆ. ಇದರಿಂದ ಅನೇಕರು ಮೃತಪಟ್ಟಿದ್ದಾರೆ
  • ಈ ಎಲ್ಲದರ ನಡುವೆ ನಾಯಿ ಪ್ರಿಯರು ಬೀದಿ ನಾಯಿಗಳ ಸುರಕ್ಷತೆಯ ಬಗ್ಗೆ ಮಾತನಾಡುತ್ತಾರೆ
  • ಪ್ರಾಣಿಗಳನ್ನು ನೋಡಿಕೊಳ್ಳುವುದು ಒಳ್ಳೆಯದು. ಆದರೆ, ಅವುಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು
Dog licking: ದೇಶಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿವೆ. ಇದರಿಂದ ಅನೇಕರು ಗಾಯಗೊಂಡರೆ, ಇನ್ನೂ ಕೆಲವರು ಮೃತಪಡುತ್ತಿರುವುದನ್ನು ನಾವು ಗಮನಿಸಬಹುದು. ಈ ಎಲ್ಲದರ ನಡುವೆ ನಾಯಿ ಪ್ರಿಯರು ಬೀದಿ ನಾಯಿಗಳ ಸುರಕ್ಷತೆಯ ಬಗ್ಗೆ ಮಾತನಾಡುತ್ತಾರೆ. ಪ್ರಾಣಿಗಳನ್ನು ನೋಡಿಕೊಳ್ಳುವುದು ಒಳ್ಳೆಯದು. ಆದರೆ, ಅವುಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು. ಏಕೆಂದರೆ, ರೇಬಿಸ್​ ರೋಗ ಎಂಬುದು ನಾಯಿ ಕಡಿತದಿಂದ ಮಾತ್ರ ಉಂಟಾಗುವುದಿಲ್ಲ. ಬದಲಿಗೆ ನಾಯಿ ನೆಕ್ಕುವುದರಿಂದಲೂ ಸಂಭವಿಸುತ್ತದೆ ಎನ್ನಲಾಗುತ್ತಿದೆ.
ಭಾರತ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನಾಯಿ ಕಚ್ಚುವಿಕೆಯಿಂದ ಅನೇಕರು ಮೃತಪಟ್ಟಿದ್ದಾರೆ. ಇದು ನಾಯಿ ಕಚ್ಚುವುದರಿಂದ ಮಾತ್ರವಲ್ಲ. ನಾಯಿ ನೆಕ್ಕುವುದರಿಂದಲೂ ಸಂಭವಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಜನರು ರೇಬೀಸ್‌ನಿಂದ ಸಾಯುತ್ತಾರೆ. ಹಾಗಾಗಿ ನಿಮ್ಮ ಮನೆಯ ನಾಯಿ ಕಚ್ಚಿದರೆ ಅಥವಾ ನೆಕ್ಕಿದರೆ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಕೆಲವು ಗಂಟೆಗಳ ಒಳಗೆ ರೇಬಿಸ್​ ಲಸಿಕೆಯನ್ನು ಪಡೆಯದೇ ಇದ್ದರೆ, ಈ ವೈರಸ್​ ದೇಹಾದ್ಯಂತ ಹರಡುತ್ತದೆ. ರೇಬೀಸ್ ಮೆದುಳು, ನರಮಂಡಲ ಮತ್ತು ಹೃದಯದ ಮೇಲೆ ನೇರವಾಗಿ ಪರಿಣಾಮ ಬಿದ್ದು ಸಾವಿಗೆ ಕಾರಣವಾಗಬಹುದು.
ವೈದ್ಯರ ಸೂಚಿಸುವಂತೆ ನಾಯಿ ಕಚ್ಚುವುದರಿಂದ ಮಾತ್ರವಲ್ಲದೆ ನಾಯಿ ನೆಕ್ಕುವ ಮೂಲಕವೂ ರೇಬಿಸ್​ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ನಾಯಿಯ ಲಾಲಾರಸದಲ್ಲಿ ಸೋಂಕನ್ನು ಹರಡುವ ಬ್ಯಾಕ್ಟೀರಿಯಾಗಳು ಇರುತ್ತವೆ. ಇದು ಗಾಯಗೊಂಡ ವ್ಯಕ್ತಿಯನ್ನು ನೆಕ್ಕುವುದು, ಕಚ್ಚುವುದು, ಕಣ್ಣು, ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸಿದರೆ ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ರೇಬಿಸ್​ಗೆ ತುತ್ತಾಗಬೇಕಾಗುತ್ತದೆ.

ಸೆಪ್ಸಿಸ್ ಲಕ್ಷಣಗಳು

ಸೆಪ್ಸಿಸ್ ಅತಿಯಾದ ಜ್ವರ ಅಥವಾ ಕೆಲವೊಮ್ಮೆ ದೇಹದ ಉಷ್ಣತೆ ಸಾಮಾನ್ಯಕ್ಕಿಂತ ತುಂಬಾ ಕಡಿಮೆಯಾಗಬಹುದು. ಇದರ ಲಕ್ಷಣಗಳು ವೇಗದ ಹೃದಯ ಬಡಿತ, ಉಸಿರಾಟದ ತೊಂದರೆ, ಕಡಿಮೆ ಮೂತ್ರ ವಿಸರ್ಜನೆ, ತೀವ್ರ ಆಯಾಸ, ಚರ್ಮದ ಮೇಲೆ ಕೆಂಪು ಅಥವಾ ಕಪ್ಪು ಕಲೆಗಳು, ಕಡಿಮೆ ರಕ್ತದೊತ್ತಡ, ಮೂರ್ಛೆ ಹೋಗುವುದು, ನಡುಗುವುದು ಮತ್ತು ತೀವ್ರ ನೋವು ಅಥವಾ ಅಸ್ವಸ್ಥತೆ ಉಂಟಾಗುತ್ತದೆ.

ನಾಯಿಗಳ ಬಗ್ಗೆ ಎಚ್ಚರದಿಂದಿರಿ

ನಿಮ್ಮ ಮನೆಯಲ್ಲಿ ನಾಯಿ ಇದ್ದರೆ ಅವುಗಳನ್ನು ಆದಷ್ಟು ನಿಮ್ಮ ಬಾಯಿ, ಮೂಗು ಮತ್ತು ಕಣ್ಣುಗಳಿಂದ ದೂರವಿಡಿ. ನಾಯಿಯನ್ನು ಮುಟ್ಟಿದ ನಂತರ ಸ್ವಚ್ಛವಾಗಿ ಕೈಯನ್ನು ತೊಳೆಯಿರಿ. ಹಾಗಾಗಿ ನೀವು ಎಷ್ಟೇ ಪ್ರೀತಿಯಿಂದ ನಾಯಿ ಸಾಕಿದರೂ ಕೂಡ, ಅವುಗಳು ಗೀಚಿದರೆ, ನೆಕ್ಕಿದರೆ ಅಥವಾ ಕಚ್ಚಿದರೆ ಚಿಕಿತ್ಸೆ ಪಡೆಯುವುದು ಉತ್ತಮ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net