ಹೊಟ್ಟೆಯಲ್ಲಿ ಕಿರಿಕಿರಿ, ಮಲಬದ್ಧತೆ ಕಾಡ್ತಿದ್ಯಾ?; ಬೇಸಿಗೆಯಲ್ಲಿ ಈ ಆಹಾರವನ್ನು ಮುಟ್ಟೋಕೆ ಹೋಗ್ಬೇಡಿ..Gut Health

Gut Health
Gut Health
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಶೇ. 20 ರಷ್ಟು ಏರಿಕೆ
  • ಬಿಸಿ ಗಾಳಿಯಿಂದಾಗಿ ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆ, ಕಾಪಾಡಿಕೊಳ್ಳೋದು ಹೇಗೆ?
  • ​ಮಲಬದ್ಧತೆ, ಮೂಲವ್ಯಾಧಿ ಮತ್ತು ಫುಡ್​ ಪಾಯಿಸನ್​ನಂತಹ ಘಟನೆ ಹೆಚ್ಚಳ
Heatwave gut health: ಬೇಸಿಗೆ ಸಂದರ್ಭದಲ್ಲೇ ಹೊಟ್ಟೆ ತುಂಬಿದಂತೆ ಭಾಸವಾಗೋದು, ಸಣ್ಣದಾಗಿ ಏನೇ ತಿಂದರೂ ಸಾಕು ಇನ್ನು ಊಟ ಬೇಡ ಎಂದು ಕೊಳ್ಳೋದು ಇದೆ. ಕರಿದ ತಿಂಡಿ, ಪಾನಿಪೂರಿ, ಇಷ್ಟದ ಗೋಬಿ, ಚಿಕನ್ ಕಂಡರೆ ಸಾಕು ವಾಕರಿಕೆ ಬಂದಂತಾಗುತ್ತದೆ. ತಾಪಮಾನ ಹೆಚ್ಚಿರೋ ಈ ಸಂದರ್ಭದಲ್ಲೇ ಜೀರ್ಣಾಂಗ ವ್ಯವಸ್ಥೆ ಮೇಲೆ ಹೀಗೆ ಪರಿಣಾಮ ಬೀರೋದ್ಯಾಕೆ, ಆರೋಗ್ಯಕರವಾಗಿ ಹೊಟ್ಟೆಯನ್ನು ಕಾಪಾಡಿಕೊಳ್ಳೋದು ಹೇಗೆ ಎಂದು ತಜ್ಞರು ಕೊಟ್ಟ ಸಲಹೆ ಹೀಗಿದೆ..
ಉತ್ತರ ಭಾರತದ ಹಲವು ರಾಜ್ಯದಲ್ಲಿ ಈಗಾಗಲೇ ಶೇ.45ರಷ್ಟು ಶಾಖ ಏರಿಕೆಯಾಗಿದೆ. ಇನ್ನು ದಕ್ಷಿಣ ಭಾರತದಲ್ಲಿ ಶೇ40ರಷ್ಟು ದಾಟುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಈ ಸಂದರ್ಭದಲ್ಲಿ ಬೀಸುವ ಬಿಸಿಗಾಳಿಯು ಸುಸ್ತು ಅಥವಾ ದಣಿವಿಗೆ ಮಾತ್ರವಲ್ಲದೇ, ನಿಮ್ಮ ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೇಸಿಗೆ ಸಮಯದಲ್ಲಿ ಕರುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಮಣಿಪಾಲ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮಾಹಿತಿ ಹಂಚಿಕೊಂಡಿದ್ದಾರೆ.

ಬೇಸಿಗೆಯಲ್ಲಿ ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಯಾಕೆ?

  • ಅಧಿಕ ತಾಪಮಾನ ಹೆಚ್ಚುವುದರಿಂದ ಆಹಾರ ಬೇಗನೆ ಕೆಟ್ಟು ಅದರಲ್ಲಿ ಬ್ಯಾಕ್ಟೀರಿಯಗಳು ಹೆಚ್ಚುತ್ತದೆ. ಇದರಿಂದ ಫುಡ್​ ಪಾಯಿಸನ್ ಸಂಭವಿಸುತ್ತದೆ.
  • ಟ್ಯಾಂಕರ್​ನಲ್ಲಿರುವ ನೀರು ಅಥವಾ ಶುದ್ಧೀಕರಣವಾಗದ ನೀರನ್ನು ಕುಡಿಯುವುದಿರಂದ ದೇಹದಲ್ಲಿ ಅತಿಸಾರ, ವಾಂತಿಯಾಗುವಂತೆ ಮಾಡುತ್ತದೆ.
  • ದೇಹದಲ್ಲಿ ನೀರಿನಾಂಶ ಮತ್ತು ನಾರಿನಾಂಶ ಕಡಿಮೆಯಾಗಿ ಜೀರ್ಣಕ್ರಿಯೆ ಮಂದಗತಿಯಲ್ಲಿ ಸಾಗುತ್ತದೆ, ಇದು ಮಲಬದ್ಧತೆ ಮತ್ತು ಮೂಲವ್ಯಾಧಿಯಂತಹ ಸಮಸ್ಯೆಗಳನ್ನು ಉಲ್ಬಣಿಸುವಂತೆ ಮಾಡುತ್ತದೆ.
  • ರಸ್ತೆ ಬದಿ ಕತ್ತರಿಸಿದ ಆಹಾರ, ಐಸ್ ಬೆರೆಸಿದ ಪಾನೀಯಗಳು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ.

​ವೈದ್ಯರ ಸಲಹೆ ಏನು?

  • ​ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ಸ್ವಚ್ಛವಾದ ನೀರನ್ನು ಕುಡಿಯಿರಿ.
  • ರಸ್ತೆ ಬದಿಯ ಹಸಿ ಸಲಾಡ್‌ಗಳು ಮತ್ತು ಕತ್ತರಿಸಿದ ಹಣ್ಣುಗಳಿಂದ ದೂರವಿರಿ. ಪಾನಿಪೂರಿ, ಗೋಬಿ ಮಂಜೂರಿಯನ್​ ಅವಾಯ್ಡ್ ಮಾಡಿ
  • ದೇಹದಲ್ಲಿ ಉಂಟಾಗಿರುವ ಮಲಬದ್ಧತೆ ಕಡಿಮೆಯಾಗಲು ನಾರಿನಾಂಶವಿರುವ ತರಕಾರಿ ಹಣ್ಣನ್ನು ಸೇವಿಸಿ
  • ವೈದ್ಯರ ಸಲಹೆ ಇಲ್ಲದೆ ಯಾವುದೇ ಟ್ಯಾಬ್ಲೇಟ್​ಗಳನ್ನು ನುಂಗದಿರಿ, ವಿಪರೀತ ಜ್ವರ, ಮಲದಲ್ಲಿ ರಕ್ತ ಕಾಣಿಸಿಕೊಂಡರೆ, ವಿಪರೀತ ವಾಂತಇಯಾದರೆ ವೈದ್ಯರನ್ನು ಸಂಪರ್ಕಿಸಲು ಸಲಹೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net