Green Tea Vs Black Coffee; ಕರುಳಿನ ಆರೋಗ್ಯ, ತೂಕ ಇಳಿಕೆಗೆ ಯಾವುದು ಬೆಸ್ಟ್​?

Green Tea Vs Black Coffee
Green Tea Vs Black Coffee
Published on

ಪ್ರಮುಖ ಮುಖ್ಯಾಂಶಗಳು

  • ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು, ತೂಕ ಇಳಿಕೆಗೆ ಯಾವ ಪೇಯ ಬೆಸ್ಟ್​
  • ಬ್ಲಾಕ್​ ಕಾಫಿ ಅಥವಾ ಗ್ರೀನ್​ ಟೀ ಯಾವುದು ಕುಡಿದರೆ ಏನಾಗುತ್ತದೆ?
  • ಆರೋಗ್ಯಕರ ತೂಕ ಇಳಿಕಗೆ ಗ್ರೀನ್​ ಟೀ ಬೆಸ್ಟ್​ ಎನ್ನುತ್ತಿದ್ದಾರೆ ವೈದ್ಯ
Green Tea Vs Black Coffee: ದೇಹದ ಒಟ್ಟಾರೆ ಆರೋಗ್ಯಕ್ಕೆ ಕರುಳಿನ (Gutt Health) ಆರೋಗ್ಯ ಮುಖ್ಯ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಗಾಗ ಕಾಣಿಸಿಕೊಳ್ಳುವ ಹೊಟ್ಟೆ ನೋವಿಗೆ ನಾವು ತಿನ್ನುವ ಆಹಾರವೇ ಕಾರಣವಾಗುತ್ತದೆ. ಇನ್ನು ತೂಕ ಹೆಚ್ಚಾದರೆ ನಡೆದಾಡಲು, ಇಷ್ಟದ ಬಟ್ಟೆ ತೊಡಲು ಎಲ್ಲದಕ್ಕೂ ಸಮಸ್ಯೆ ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಹಲವರು ಸುಲಭವಾಗಿ ತೂಕ ಇಳಿಕೆ ಮಾಡಿಕೊಳ್ಳಲು ಗ್ರೀನ್​ ಟೀ ಕುಡಿಯುತ್ತಾರೆ. ಇನ್ನೂ ಕೆಲವರು ಕರುಳಿನ ಆರೋಗ್ಯಕ್ಕೆ ಕಾಫಿ ರಾಮಬಾಣ ಎಂದು ಅದನ್ನೇ ಹೀರುತ್ತಾರೆ.
ಹಾಗಾದ್ರೆ ಕರುಳಿನ ಆರೋಗ್ಯ ಕಾಪಾಡಿಕೊಳ್ಳೋದಕ್ಕೆ, ನಮ್ಮ ತೂಕ ಇಳಿಕೆ ಮಾಡಿಕೊಳ್ಳೋದಕ್ಕೆ ಉತ್ತಮ ವಾಗಿ ಕೆಲಸ ಮಾಡುವ ಪೇಯ ಯಾವುದು? ಯಾವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಗ್ರೀನ್​ ಟೀ

ಹಸಿರು ಚಹಾದಲ್ಲಿ ಕ್ಯಾಟೆಚಿನ್​ ಎನ್ನುವ ಅಂಶವಿದೆ. EGCG ಎನ್ನುವ ನೈಸರ್ಗಿಕ ಉತ್ಕರ್ಷಣವನ್ನು ಹೊಂದಿರುವ ಇದು, ದೇಹದ ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ. ಒಬೆಸಿಟಿ ರಿವ್ಯೂವ್​ನಲ್ಲಿ ಇತ್ತೀಚೆಗೆ ಪ್ರಕಟವಾದ ವರದಿ ಪ್ರಕಾರ, ಈ ಕ್ಯಾಟೆಚಿನ್​ ಮತ್ತು ಇಜಿಸಿಜಿ ಅಂಶವು ಒಟ್ಟಾಗಿ ದೇಹದ ಒಳಕ್ಕೆ ತೆರಳಿ ದೇಹದಲ್ಲಿರುವ ಕೊಬ್ಬನ್ನು ಪರಿಣಾಮಕಾರಿಯಾಗಿ ಒಡೆದು ಹಾಕಲು ಸಹಾಯ ಮಾಡುತ್ತದೆ. ನೆನಪಾದಾಗ ಅಥವಾ ಇಷ್ಟವಾದಾಗ ಗ್ರೀನ್​​ ಟೀ ಸೇವನೆ ಮಾಡುವ ಬದಲು ನಿಯಮಿತವಾಗಿ ಬಳಕೆ ಮಾಡಿದರೆ ನಿಜಕ್ಕೂ ದೇಹದಲ್ಲಿರುವ ಅನಗತ್ಯ ಕೊಬ್ಬನ್ನು ಹೊರಹಾಕಬಹುದು ಎನ್ನುತ್ತಾರೆ ವೈದ್ಯರು

ಗ್ರೀನ್​ ಟೀಯಿಂದಾಗುವ ಪ್ರಯೋಜನವೇನು?

ಗ್ರೀನ್​ ಟೀಯಲ್ಲಿ ಕೆಫೇನ್​ ಅಂಶ ಕಡಿಮೆ ಇದ್ದು ಎಲ್-ಥೈನೈನ್' ಎಂಬ ಅಮೈನೋ ಆಮ್ಲ ಯಥೇಚ್ಚವಾಗಿ ಉಳಿದಿದೆ. ಈ ಅಮೈನೋ ಆಮ್ಲ ದೇಹಕ್ಕೆ ಸೇರುವ ಕಾರಣ, ಶಾಂತವಾಗಿ ಇಡಲು ಯತ್ನಿಸುತ್ತದೆ ಎನ್ನಲಾಗಿದೆ.
ದೇಹದಲ್ಲಿ ಕೊಬ್ಬು ಹೆಚ್ಚಾಗುವುದನ್ನು ನಿಯಂತ್ರಿಸುತ್ತದೆ. ಗ್ರೀನ್​ ಟೀ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ನಿತ್ಯವೂ ಇದರ ಸೇವನೆ ಮಾಡುವುದರಿಂದ ಒಳ್ಳೆ ನಿದ್ರೆ ಬರುಬಂತೆ ಮಾಡುತ್ತದೆ. ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಬ್ಲಾಕ್​ ಕಾಫಿಯಲ್ಲಿರುವ ಅಂಶವೇನು, ಎಷ್ಟು ಸಹಕಾರಿ?

ಬ್ಲಾಕ್​ ಕಾಫಿಯಲ್ಲಿ ಯಥೇಚ್ಚವಾಗಿ ಕೆಫೇನ್​ ಅಂಶವಿದೆ. ಇದು ಥರ್ಮೋಜೆನೆಸಿಸ್ ಉತ್ಪಾದನೆಗೆ ಸಹಕಾರಿ ಅಂದರೆ, ದೇಹದಲ್ಲಿನ ಶಾಖವನ್ನು ಹೆಚ್ಚು ಉತ್ಪಾದಿಸಿ, ಕ್ಯಾಲೋರಿಗಳನ್ನು ಸುಟ್ಟು, ದೇಹದ ಉಷ್ಣತೆ ಕಾಪಾಡಿಕೊಳ್ಳಲು ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಎನ್ನಲಾಗಿದೆ.
ಕೆಫೇನ್​ ದೇಹದಲ್ಲಿ ಅಡ್ರಿನಾಲಿನ್ ​​ ಬಿಡುಗಡೆಗೆ ಪ್ರಚೋದನೆ ನೀಡುತ್ತದೆ. ವ್ಯಾಯಾಮ ಮಾಡುವ ಮೊದಲು ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ದೈಹಿಕ ಕಾರ್ಯಕ್ಷಮತೆ ಹೆಚ್ಚುತ್ತದೆ. ಆದರೆ, ಅತಿಯಾದ ಸೇವನೆಯು ನಿದ್ರೆಯ ಮೇಲೆ ಪರಿಣಾಮ ಬೀರಬಹುದು ಎಂಬ ಎಚ್ಚರಿಕೆಯನ್ನೂ ವೈದ್ಯರು ನೀಡಿದ್ದಾರೆ. ಸಕ್ಕರೆ, ಹಾಲು ಇಲ್ಲದೇ ಬರೀ ಕಾಫಿಯ ಡಿಕಾಕ್ಷನ್​ ಮಾತ್ರ ಕುಡಿದರೆ ದೇಹದಲ್ಲಿನ ಕ್ಯಾಲೋರಿ ವೃದ್ಧಿಯಾಗುವುದಿಲ್ಲ. ಬ್ಲಾಕ್​ ಕಾಫಿ ಹಸಿವನ್ನು ಕಡಿಮೆ ಮಾಡುತ್ತದೆ ಈ ಮೂಲಕ ನಿಮ್ಮ ತೂಕವನ್ನು ಇಳಿಕೆ ಮಾಡಲು ಪರೋಕ್ಷವಾಗಿ ಕೆಲಸ ಮಾಡುತ್ತದೆ.

ಗ್ರೀನ್​​ ಟೀ, ಬ್ಲಾಕ್​ ಕಾಫಿ ಯಾವುದು ಬೆಸ್ಟ್

ಆರೋಗ್ಯಕರ ತೂಕ ಇಳಿಕೆಗೆ ಗ್ರೀನ್​ ಟೀ ಹೆಚ್ಚು ಸೂಕ್ತ. ಜಿಮ್​, ವ್ಯಾಯಾಮ ಮಾಡುವವರಿಗೆ ತಕ್ಷಣಕ್ಕೆ ಶಕ್ತಿ ಬೇಕು ಎಂದರೆ ಬ್ಲಾಕ್​ ಕಾಫಿ ಕುಡಿಯೋದೆ ಸಹಕಾರಿ. ಈ ಎರಡೂ ಪೇಯಗಳು ಆರೋಗ್ಯಕರ ಆಹಾರ ಕ್ರಮ. ನಿಯಮಿತ ವ್ಯಾಯಾಮದ ನಂತರ ಈ ಪಾನೀಯ ಸೇವನೆ ಮಾಡೋದ್ರಿಂದ ಮತ್ತಷ್ಟು ಪರಿಣಾಮಕಾರಿ ಫಲಿತಾಂಶ ಹೊರಬರಲಿದೆ ಎಂದು ಹೇಳಲಾಗುತ್ತಿದೆ, (ಏಜೆನ್ಸೀಸ್​).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net