ಪಾರ್ಲರ್‌ಗೆ ಹೋಗುವ ಅಗತ್ಯವೇ ಇಲ್ಲ.. ಕೆಂಪು ಟೊಮೆಟೊದಲ್ಲಿದೆ ಬೆಳ್ಳನೆಯ ಚರ್ಮದ ರಹಸ್ಯ! Skin Care Secrets
ಸಾಂದರ್ಭಿಕ ಚಿತ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮುಖದ ಅಂದವನ್ನು ಕಾಪಾಡಿಕೊಳ್ಳುವುದು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ
ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಉತ್ತಮ ತ್ವಚ್ಛೆಯನ್ನು ಹೊಂದಬೇಕೆಂದು ಬಯಸುತ್ತಾನೆ
ಮುಖದ ಮೇಲಿನ ಕಲೆಗಳು ಕಾಣಿಸಿಕೊಂಡರೆ ಯಾರಿಗಾದರೂ ಬೇಸರವಾಗುವುದು ಸಹಜ
ನಿಮ್ಮ ಅಡುಗೆಮನೆಯಲ್ಲಿರುವ ಟೊಮೆಟೊ ಒಂದು ಅದ್ಭುತ ಔಷಧಿಯಾಗಿ ಕೆಲಸ ಮಾಡುತ್ತದೆ
Skin Care Secrets: ಮುಖದ ಅಂದವನ್ನು ಕಾಪಾಡಿಕೊಳ್ಳುವುದು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಉತ್ತಮ ತ್ವಚ್ಛೆಯನ್ನು ಹೊಂದಬೇಕೆಂದು ಬಯಸುತ್ತಾನೆ. ಇಂದಿನ ಕಾರ್ಯನಿರತ ಜೀವನದಲ್ಲಿ ಸೂರ್ಯನ ಕಿರಣಗಳು, ಧೂಳು ಮತ್ತು ಮಾನಸಿಕ ಒತ್ತಡವು ಮುಖದ ಮೇಲಿನ ನೈಸರ್ಗಿಕ ಕಾಂತಿಯನ್ನು ಕಸಿದುಕೊಳ್ಳುತ್ತವೆ.
ಬೆಳಿಗ್ಗೆ ಎದ್ದು ಕನ್ನಡಿಯಲ್ಲಿ ನೋಡಿದಾಗ ಮುಖದ ಮೇಲಿನ ಕಲೆಗಳು ಕಾಣಿಸಿಕೊಂಡರೆ ಯಾರಿಗಾದರೂ ಬೇಸರವಾಗುವುದು ಸಹಜ. ಇಂತಹ ಸಂದರ್ಭದಲ್ಲಿ, ನಿಮ್ಮ ಅಡುಗೆಮನೆಯಲ್ಲಿರುವ ಟೊಮೆಟೊ ಒಂದು ಅದ್ಭುತ ಔಷಧಿಯಾಗಿ ಕೆಲಸ ಮಾಡುತ್ತದೆ.
ಟೊಮೆಟೊ ಚರ್ಮಕ್ಕೆ ಸೂಪರ್‌ಫುಡ್ ಆಗಿದೆ
ಟೊಮೆಟೊ ರಸವು ನೈಸರ್ಗಿಕ ಗುಣಗಳಿಂದ ಸಮೃದ್ಧವಾಗಿದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಆಳವಾಗಿ ಶುದ್ಧೀಕರಿಸುತ್ತವೆ. ಜೊತೆಗೆ ಕಲೆಗಳನ್ನು ನಾಶಪಡಿಸಲು ಸಹಾಯ ಮಾಡುತ್ತದೆ. ಟೊಮೆಟೊದಲ್ಲಿರುವ ಸ್ವಲ್ಪ ಆಮ್ಲೀಯ ಗುಣವು ಚರ್ಮದ pH ಸಮತೋಲನ ಕಾಪಾಡಿ ಮುಖದ ತಾಜಾ ಮತ್ತು ಹೊಳೆಯುವ ಬಣ್ಣವನ್ನು ನೀಡುತ್ತದೆ.
ಟೊಮೊಟೋ ರಸವನ್ನು ನಿಯಮಿತವಾಗಿ ಬಳಸುವುದರಿಂದ ಮುಖದ ಅಂದವು ಸ್ಪಷ್ಟ ಮತ್ತು ಕಾಂತಿಯುತ ಚರ್ಮವನ್ನು ನೀಡುತ್ತದೆ. ನೀವೇನಾದರೂ ಮುಖದ ಮೇಲೆ ಕಲೆಯನ್ನು ಹೊಂದಿದ್ದರೆ, ಇದರ ರಸವನ್ನು ನೇರವಾಗಿ ಮುಖಕ್ಕೆ ಹಚ್ಚುವುದರಿಂದ ಸುಲಭ ಪರಿಹಾರ ಕಂಡುಕೊಳ್ಳಬಹುದು.
ಮುಖದ ಮೇಲಿನ ಕಲೆಯನ್ನು ತೆಗೆಯಬೇಕೆಂದು ಅಂದುಕೊಂಡಿದ್ದರೆ ಒಂದು ತಾಜಾ ಟೊಮೆಟೋ ತೆಗೆದುಕೊಂಡು ಅದನ್ನು ಕತ್ತರಿಸಿ, ರಸವನ್ನು ತೆಗೆಯಿರಿ. ನಂತರ ಒಂದು ಹತ್ತಿ ಪ್ಯಾಡ್ ಬಳಸಿ ಆ ರಸವನ್ನು ನಿಮ್ಮ ಮುಖಕ್ಕೆ ಹಚ್ಚಿ 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ವಾರಕ್ಕೆ 3 ರಿಂದ 4 ಬಾರಿ ಹೀಗೆ ಮಾಡಿದರೆ ನಿಮ್ಮ ಚರ್ಮದಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದು.
ಎಣ್ಣೆಯುಕ್ತ ಚರ್ಮಕ್ಕೆ ಬೆಸ್ಟ್ ಪರಿಹಾರ!
ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ಟೊಮೆಟೊ ಒಂದು ವರದಾನ. ಇದು ಹೆಚ್ಚುವರಿ ಎಣ್ಣೆಯುಕ್ತತೆಯನ್ನು ನಿಯಂತ್ರಿಸುತ್ತದೆ ಮತ್ತು ರಂಧ್ರಗಳನ್ನು ಬಿಗಿಗೊಳಿಸುತ್ತದೆ. ಹಾಗಾಗಿ ಟೊಮೊಟೋ ರಸಕ್ಕೆ ಕೆಲವು ನಿಂಬೆ ಹನಿ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ತಾಜಾತನವನ್ನು ಹೆಚ್ಚಿಸಿ, ಕಪ್ಪು ಮತ್ತು ಬಿಳಿ ಚುಕ್ಕೆಯನ್ನು ಕಡಿಮೆ ಮಾಡುತ್ತದೆ.
ಮುಖದಿಂದ ಟ್ಯಾನಿಂಗ್ ತೆಗೆಯುವುದು ಹೇಗೆ?
ಟೊಮೆಟೊದಲ್ಲಿರುವ ಲೈಕೋಪೀನ್ ನಿಮ್ಮ ಚರ್ಮವನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾಗಿ ಟೊಮೊಟೋ ರಸವನ್ನು ಮೊಸರಿನೊಂದಿಗೆ ಸೇರಿಸಿ ಹಚ್ಚುವುದರಿಂದ ಮುಖದಲ್ಲಿನ ಕಂದುಬಣ್ಣ ಕಡಿಮೆಯಾಗುತ್ತದೆ. ಜೊತೆಗೆ ಚರ್ಮವನ್ನು ಮೃದುಗೊಳಿಸುತ್ತದೆ.
ಒಣ ಚರ್ಮಕ್ಕೆ ಟೊಮೆಟೊ ರಸ ಹಚ್ಚಬಹುದೇ?
ಕೆಲವೊಂದು ಜನರಿಗೆ ಡ್ರೈ ಸ್ಕಿನ್ ಇರುವುದನ್ನು ನೋಡಿರುತ್ತೇವೆ. ಆದಾಗ್ಯೂ, ಆ ಜನರು ಈ ರಸವನ್ನು ಹಚ್ಚಬಹುದೇ ಎಂದು ಯೋಚಿಸುತ್ತಾರೆ. ಆದಾಗ್ಯೂ, ಆ ಜನರು ಟೊಮೊಟೋ ರಸವನ್ನು ಸ್ವಲ್ಪ ಜೇನುತುಪ್ಪದೊಂದಿಗೆ ಸೇರಿಸಿ ಹಚ್ಚುವುದರಿಂದ ಚರ್ಮವು ತೇವದಿಂದ ಕೂಡಿರುವುದರ ಜೊತೆಗೆ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ.
ನೀವೇನಾದರೂ ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ಟೊಮೆಟೊ ಪ್ಯಾಕ್ನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವ ಮುನ್ನ ಪ್ಯಾಚ್ ಪರೀಕ್ಷೆ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಇದು ಅಲರ್ಜಿ ಕಿರಿಕಿರಿಯನ್ನು ತಡೆಯಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.