ಆಹಾರದ ಜೊತೆಗೆ ನಿದ್ರೆ ಕೂಡ ಬಹಳ ಮುಖ್ಯವಾಗಿರುವ ಅಂಶವಾಗಿದೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ 7- 8 ಗಂಟೆಗಳ ತನಕ ನಿದ್ರೆಯನ್ನು ಮಾಡಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವುದರಿಂದ ಹೆಚ್ಚಾಗಿ ಮೊಬೈಲ್, ಟಿವಿ ನೋಡುವುದರಿಂದ ರಾತ್ರಿ ಸಮಯದಲ್ಲಿ ಲೇಟಾಗಿ ಮಲಗುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಇದರಿಂದ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು, ಮೆದುಳಿನ ಕಾಯಿಲೆಗಳು ಸೇರಿದಂತೆ ಮಾನಸಿಕವಾಗಿ ಪರಿಣಾಮ ಬೀರಲು ಆರಂಭಿಸುತ್ತದೆ.