ಜಿಮ್ ಇಲ್ಲ, ಕಠಿಣ ಡಯಟ್ ಇಲ್ಲ! 76 ದಿನಗಳಲ್ಲಿ 7 ಕೆಜಿ ಇಳಿಸಿದ ದಂಪತಿಯ ಸೀಕ್ರೆಟ್​ ಔಟ್​...Weight Loss

Weight Loss  (ಸಾಂದರ್ಭಿಕ ಚಿತ್ರ)
Weight Loss (ಸಾಂದರ್ಭಿಕ ಚಿತ್ರ)
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಅನೇಕ ರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ
  • ಆದರೆ, ತೂಕ ಇಳಿಸುವ ಪ್ರಕ್ರಿಯೆ ಅಷ್ಟೊಂದು ಸುಲಭದ ಮಾತೇನಲ್ಲ
  • ನಿಮ್ಮದೇ ಆದ ಶಕ್ತಿ, ತಾಳ್ಮೆ, ಪರಿಶ್ರಮಗಳನ್ನು ಹೊಂದಬೇಕಾಗಿರುತ್ತದೆ
Weight Loss: ಇತ್ತೀಚಿನ ದಿನಗಳಲ್ಲಿ ಅನೇಕ ರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಆದರೆ, ತೂಕ ಇಳಿಸುವ ಪ್ರಕ್ರಿಯೆ ಅಷ್ಟೊಂದು ಸುಲಭದ  ಮಾತೇನಲ್ಲ. ಆದಾಗ್ಯೂ, ಅದಕ್ಕೆ ನಿಮ್ಮದೇ ಆದ ಶಕ್ತಿ, ತಾಳ್ಮೆ, ಪರಿಶ್ರಮ ಮತ್ತು ಅದರದ್ದೇ ಆದ ಗುರಿಗಳನ್ನು ಹೊಂದಬೇಕಾಗಿರುತ್ತದೆ.  ಆದರೆ, ಇಲ್ಲೊಬ್ಬ ದಂಪತಿ ತಮ್ಮ ಸರಳ ಆಚರಣೆಗಳ ಮೂಲಕ 2.5 ತಿಂಗಳಲ್ಲಿ ಬರೋಬ್ಬರಿ 7 ಕೆಜಿ ತೂಕ ಇಳಿಸಿಕೊಂಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾಗಿ ನೀವೇನಾದರೂ, ತೂಕ ಇಳಿಸಿಕೊಳ್ಳಲು ನಿರ್ಧರಿಸಿದರೆ, ಈ ದಂಪತಿಯ ಸಲಹೆಗಳನ್ನು ಪಡೆದುಕೊಳ್ಳಿ.
ದಂಪತಿ ಪ್ರಕಾರ, ಪುರುಷನ ತೂಕ 71 ಕೆಜಿಯಿಂದ 64 ಕೆಜಿಗೆ ಇಳಿದಿದ್ದರೆ, ಪತ್ನಿಯ ತೂಕ  82 ಕೆಜಿಯಿಂದ 75 ಕೆಜಿಗೆ ಇಳಿದಿದೆ. ಅಷ್ಟೇ ಅಲ್ಲ, ಅವರ ಊತ, ಎಲ್‌ಡಿಎಲ್ ಮಟ್ಟ ಮತ್ತು ಹೊಟ್ಟೆಯ ಕೊಬ್ಬು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಅವರು ಬಹಿರಂಗಪಡಿಸಿದರು. ಅದರ ಜೊತೆಗೆ ಮಲಬದ್ಧತೆ ಸಮಸ್ಯೆಯೂ ಬಗೆಹರಿದಿದೆ ಎಂದು ಹೇಳಿದ್ದಾರೆ.

2 ತಿಂಗಳಲ್ಲಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿದ ಹಂತಗಳು ಇಲ್ಲಿವೆ...

ಪ್ರತಿದಿನ 2 ಪೌಷ್ಟಿಕಾಂಶ ಭರಿತ ಊಟಗಳು

ತಜ್ಞರು ಪ್ರತಿದಿನ ಎರಡು ಪೌಷ್ಟಿಕಾಂಶ ಭರಿತ ಊಟಗಳನ್ನು ಸೇವಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಊಟದ ಮಧ್ಯದಲ್ಲಿ ನಿರಂತರ ತಿಂಡಿಗಳನ್ನು ಸೇವಿಸುವ ಅಭ್ಯಾಸವನ್ನು ತಪ್ಪಿಸಬೇಕು. ಇದು ತೂಕವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರೋಟೀನ್‌ಗೆ ಆದ್ಯತೆ ನೀಡಿ

ತೂಕ ಇಳಿಸಿಕೊಳ್ಳಲು ಬಯಸಿದರೆ, ಪ್ರತಿ ಊಟದಲ್ಲೂ ಪ್ರೊಟೀನ್​ಗೆ ಆದ್ಯತೆ ನೀಡುವಂತೆ ತಜ್ಞರು ತಿಳಿಸಿದ್ದಾರೆ. ಹಾಗಾಗಿ ಪ್ರತಿ ಊಟದಲ್ಲಿ ಮೊಟ್ಟೆ, ಬೇಳೆ, ಮೊಸರು ಮತ್ತು ಪನೀರ್ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. 

ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ನಿಷೇಧ

ಆದಷ್ಟು ನಿಮ್ಮ ಆಹಾರ ಪದ್ಧತಿಯಿಂದ ಸಂಸ್ಕರಿಸಿದ ಕಾರ್ಬೊಹೈಡ್ರೇಟ್​ಗಳನ್ನು ತೆಗೆದುಹಾಕುವಂತೆ ದಂಪತಿ ತಿಳಿಸಿದ್ದಾರೆ. ಈ ಆಹಾರ ದೇಹದಲ್ಲಿ ಹೆಚ್ಚಿನ ಕೊಬ್ಬನ್ನು ಶೇಖರಿಸುವುದರ ಜೊತೆಗೆ ತೂಕವನ್ನು ಹೆಚ್ಚಿಸುತ್ತದೆ. ಹಾಗಾಗಿ ಬೇಕರಿ ಪದಾರ್ಥಗಳನ್ನು ಆದಷ್ಟು ಕಡಿಮೆ ಸೇವಿಸಲು ಸೂಚಿಸಿದ್ದಾರೆ.
ಫೈಬರ್ ಭರಿತ ತರಕಾರಿಗಳನ್ನು ಸೇರಿಸಿ
ತಜ್ಞರು ಸೂಚಿಸುವಂತೆ ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಊಟದಲ್ಲಿ ಫೈಬರ್ ಭರಿತ ತರಕಾರಿಗಳನ್ನು ಸೇರಿಸಲು ಸಲಹೆ ನೀಡಿದ್ದಾರೆ. ಹೆಚ್ಚಿನ ಹಸಿರು ತರಕಾರಿಗಳು, ಮೊಳಕೆಕಾಳುಗಳನ್ನು ತಿನ್ನಿರಿ. ಇದು ಹೊಟ್ಟೆ ತುಂಬುವಿಕೆಯನ್ನು ಹೆಚ್ಚಿಸುವುದರ ಜೊತೆಗೆ ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಂಸ್ಕರಿಸಿದ ಆಹಾರವನ್ನು ತಪ್ಪಿಸಿ

ಬರ್ಗರ್‌, ಪಿಜ್ಜಾ ಮತ್ತು ಸಮೋಸಾಗಳು ಬಾಯಿಗೆ ರುಚಿ ಕೊಡುತ್ತವೆ, ಆದರೆ ಅವುಗಳಲ್ಲಿ ಹೆಚ್ಚಿನ ಕೊಬ್ಬು ಶೇಖರಣೆಯಾಗಿರುವುದರಿಂದ ಇದರಲ್ಲಿ ತೂಕ ಹೆಚ್ಚಾಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಹಾಗಾಗಿ ಮನೆಯಲ್ಲೇ ಮಾಡಿದ ಸುರಕ್ಷಿತ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕರ ದೇಹವನ್ನು ಹೊಂದಬಹುದು ಎಂದು ತಿಳಿಸುತ್ತಾರೆ.

ದಿನಕ್ಕೆ 30-40 ನಿಮಿಷ ನಡೆಯಿರಿ

ನೀವೇನಾದರೂ ಆರೋಗ್ಯಕರ ದೇಹವನ್ನು ಹೊಂದಬೇಕು ಎಂದು ಬಯಸಿದರೆ ಪ್ರತಿನಿತ್ಯ 30-40 ನಿಮಿಷಗಳ ಕಾಲ ನಡೆಯುವುದು, ಓಡುವುದು, ಈಜುವ ಅಭ್ಯಾಸ ಮಾಡಬೇಕು ಎಂದು ಹೇಳುತ್ತಾರೆ. ಇದು ತೂಕ ಇಳಿಸಿಕೊಳ್ಳುವುದರ ಜೊತೆಗೆ ದೇಹವನ್ನು ಫಿಟ್​ ಆಗಿರಿಸಲು ಸಹಾಯ ಮಾಡುತ್ತದೆ.

ಸ್ಥಿರವಾಗಿರಿ

ತೂಕ ಇಳಿಕೆ ರಾತ್ರೋರಾತ್ರಿ ಆಗುವುದಿಲ್ಲ. ಸೋಮವಾರ ನಡಿಗೆ, ಮಂಗಳವಾರ ಮನೆಯಲ್ಲಿ ತಯಾರಿಸಿದ ಊಟ, ಮತ್ತು ಬುಧವಾರದ ವೇಳೆಗೆ ತೂಕದ ಮಾಪಕದಲ್ಲಿ ಚಲನೆಯನ್ನು ನೋಡುವ ಭರವಸೆ ಎಂಬುದು ಆವಾಸ್ತವಿಕ. ನೀವು ಪಾಲಿಸುವ ನಿಯಮಗಳನ್ನು ತಿಂಗಳುಗಳ ಕಾಲ ಅಭ್ಯಾಸ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು. 
ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ ಮತ್ತು ಖಂಡಿತವಾಗಿಯೂ ಕೆಲವು ಹೆಚ್ಚುವರಿ ಪೌಂಡ್‌ಗಳನ್ನು ಪಡೆಯಲು ಸಹಾಯ ಮಾಡುವ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವಷ್ಟು ಆನಂದದಾಯಕವಲ್ಲ. ಹಾಗಾಗಿ ಆದಷ್ಟು ಸ್ಥಿರವಾಗಿರಿ ಜೊತೆಗೆ ಸಾಧ್ಯವಾದಷ್ಟು ಗೊಂದಲಗಳನ್ನು ತಪ್ಪಿಸಿಕೊಳ್ಳಿ. ಇದು ದೇಹವನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net