Shoe Bite: ಪ್ರತಿಯೊಬ್ಬರೂ ಕೂಡಾ ಆಸೆಯಿಂದ ಹೊಸ ಶೂ ಅಥವಾ ವಿನ್ಯಾಸದ ಚಪ್ಪಲಿಗಳನ್ನು ಖರೀದಿಸುತ್ತೇವೆ. ಆದರೆ, ಆ ಹೊಸ ಪಾದರಕ್ಷೆಗಳನ್ನು ಧರಿಸಿದ ಮೊದಲ ದಿನವೇ ಅವುಗಳಿಂದ ಅನೇಕರು ಪಾದದ ಚರ್ಮ ಸುಲಿಯುವ ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಇದು ಕೇವಲ ನೋವನ್ನಷ್ಟೇ ಅಲ್ಲದೆ, ಕಿರಿಕಿರಿ ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ರಕ್ತಸ್ರಾವ ಅಥವಾ ಗುಳ್ಳೆಗಳಿಗೂ ಕಾರಣವಾಗಬಹುದು.