ವಿಶೇಷವಾಗಿ ಹೇಳುವುದಾದರೆ, ಖಾರ ಅಥವಾ ಬಿಸಿ ಆಹಾರವನ್ನು ಸೇವಿಸಿದ ನಂತರ ಬೆವರುವುದು ಸಾಮಾನ್ಯವಾಗಿದೆ. ಏಕೆಂದರೆ, ದೇಹವು ಹೆಚ್ಚಾದ ಮಸಾಲೆ ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ಕಷ್ಟ ಪಡುತ್ತದೆ ಇದರಿಂದ ಬೆವರುತ್ತಾರೆ. ಆದಾಗ್ಯೂ, ಮಕ್ಕಳು ಸುಕಾ ಸುಮ್ಮನೆ, ಬೆವರುವುದು ಕಂಡು ಬಂದರೆ, ದೌರ್ಬಲ್ಯವನ್ನು ತೋರಿಸಿದರೆ ಅಥವಾ ಸಾಮಾನ್ಯ ಊಟ ಮಾಡಿದಾಗಲೂ ಈ ಲಕ್ಷಣಗಳನ್ನು ಹೊಂದಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮವಾಗಿದೆ.