ಬೆಳಗಿನ ಸಮಯದಲ್ಲಿ ಹಾವುಗಳು ನಮ್ಮ ಕಣ್ಣಿಗೆ ಸುಲಭವಾಗಿ ಗೋಚರವಾಗುತ್ತವೆ. ಆದರೆ, ರಾತ್ರಿ ಹೊತ್ತು ಹಾವುಗಳು ನಮ್ಮ ಕಣ್ಣಿಗೆ ಸುಲಭವಾಗಿ ಕಾಣುವುದಿಲ್ಲ. ಇಂತಹ ಸಂದರ್ಭದಲ್ಲಿ ಹಾವು ಕಡಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ರಾತ್ರಿ ಹೊತ್ತು ಆಕಸ್ಮಿಕವಾಗಿ ಹಾವುಗಳು ನಿಮ್ಮ ಕಣ್ಣಿಗೆ ಬಿದ್ದರೆ, ಹಾವಿನ ಕಣ್ಣಿಗೆ ಟಾರ್ಚ್ ಬೆಳಕು ಬಿಡಿ, ಏಕೆಂದರೆ, ಬಲವಾದ ಬೆಳಕು ಬಡಿಯುವುದರಿಂದ ಹಾವುಗಳಿಗೆ ತೊಂದರೆಯಾಗುತ್ತದೆ. ಇದರಿಂದ ಹಾವಿನಿಂದ ಕಚ್ಚಿಸಿಕೊಳ್ಳದೇ ತಪ್ಪಿಸಿಕೊಳ್ಳಬಹುದು.