ರಾತ್ರಿ ಮಲಗುವ ಮುನ್ನ ನೀರು ಕುಡಿಯುವ ಅಭ್ಯಾಸ ನಿಮಗಿದೆಯೇ? ಎಚ್ಚರಿಕೆ ವಹಿಸಿ..water

water
water
Published on
ಬೆಂಗಳೂರು: ( water) ಆರೋಗ್ಯವಾಗಿರಲು ಸಮರ್ಪಕವಾಗಿ ನೀರು ಕುಡಿಯುವುದು ಅತ್ಯಗತ್ಯ. ನಮ್ಮ ದೇಹದ ಸುಮಾರು 60-70% ಭಾಗ ನೀರಿನಿಂದ ಕೂಡಿದ್ದು, ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯಬೇಕೆಂದು ವೈದ್ಯರು ಸೂಚಿಸುತ್ತಾರೆ. ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆಯಾದರೂ, ಸರಿಯಾದ ಕ್ರಮ ಅನುಸರಿಸದಿದ್ದರೆ ಅದು ನಿದ್ರಾಭಂಗಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಮಲಗುವ ಮುನ್ನ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು:

ಮಲಗುವ ಮುನ್ನ ನೀರು ಕುಡಿಯುವುದರಿಂದ ದೇಹದಿಂದ ವಿಷಕಾರಿ ಅಂಶಗಳು ಹೊರಹೋಗುತ್ತವೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ನೀರು ಕುಡಿಯುವುದರಿಂದ ದೇಹ ತಂಪಾಗುತ್ತದೆ.
ಬೆಚ್ಚಗಿನ ನೀರು ಕುಡಿಯುವುದರಿಂದ ಸ್ನಾಯು ನೋವು ಕಡಿಮೆಯಾಗುವುದಲ್ಲದೆ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. ನಿಂಬೆ ರಸ ಬೆರೆಸಿದ ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ನೀರು ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ ಮತ್ತು ಹಾಯಾದ ನಿದ್ರೆಗೆ ಸಹಕಾರಿಯಾಗುತ್ತದೆ.
ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ನೀರು ಸಹಾಯ ಮಾಡುತ್ತದೆ.
ರಾತ್ರಿಯಿಡೀ ದೇಹವನ್ನು ಹೈಡ್ರೇಟ್ ಆಗಿ ಇರಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಹೆಚ್ಚು ನೀರು ಕುಡಿಯುವುದರಿಂದ ಉಂಟಾಗುವ ತೊಂದರೆಗಳು:

ನಿದ್ರಾ ಭಂಗ: ಅತಿಯಾಗಿ ನೀರು ಕುಡಿದರೆ ಮಧ್ಯರಾತ್ರಿ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗಬಹುದು. ಇದರಿಂದ ಗಾಢ ನಿದ್ರೆಗೆ ತೊಂದರೆಯಾಗುತ್ತದೆ.
ಕೆಲವರಿಗೆ ರಾತ್ರಿ ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿ ಮತ್ತು ಹೃದಯದ ಮೇಲೆ ಸಣ್ಣ ಮಟ್ಟದ ಒತ್ತಡ ಉಂಟಾಗಬಹುದು.
ಹೆಚ್ಚು ನೀರು ಕುಡಿಯುವುದರಿಂದ ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಯಾಗುತ್ತದೆ. ಇದು ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು. ಸಾಕಷ್ಟು ನಿದ್ರೆ ಬರದಿದ್ದರೆ ಮರುದಿನ ಆಯಾಸ, ತಲೆನೋವು ಮತ್ತು ಏಕಾಗ್ರತೆಯ ಕೊರತೆ ಉಂಟಾಗುತ್ತದೆ. ದೀರ್ಘಾವಧಿಯಲ್ಲಿ ಇದು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಗಮನಿಸಿ: ಮಲಗುವ ಕನಿಷ್ಠ 30 ರಿಂದ 60 ನಿಮಿಷಗಳ ಮೊದಲು ಒಂದು ಲೋಟ ನೀರು ಕುಡಿಯುವುದು ಉತ್ತಮ. ಇದರಿಂದ ನಿದ್ರೆಯೂ ಚೆನ್ನಾಗಿ ಬರುತ್ತದೆ ಮತ್ತು ಮಧ್ಯರಾತ್ರಿ ಎದ್ದೇಳುವ ಅವಶ್ಯಕತೆಯೂ ಇರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net