ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವುದು ಆರೋಗ್ಯಕ್ಕೆ ಸ್ಲೋ ಪಾಯ್ಸನ್! ಈ ಬದಲಾವಣೆ ಇಂದೇ ಮಾಡಿ..Aluminium vessel

Aluminium
Aluminium
Published on
ಬೆಂಗಳೂರು : ( Aluminium ) ನಮ್ಮಲ್ಲಿ ಹೆಚ್ಚಿನವರ ಅಡುಗೆಮನೆಯಲ್ಲಿ ಅಲ್ಯೂಮಿನಿಯಂ ಪಾತ್ರೆಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇವು ಅಗ್ಗವಾಗಿ ಸಿಗುತ್ತವೆ ಮತ್ತು ಶಾಖವನ್ನು ಬೇಗನೆ ಹೀರಿಕೊಳ್ಳುತ್ತವೆ ಎನ್ನುವ ಕಾರಣಕ್ಕೆ ಬಳಸಲಾಗುತ್ತದೆ. ಆದರೆ, ಈ ಪಾತ್ರೆಗಳಲ್ಲಿ ನಿರಂತರವಾಗಿ ಅಡುಗೆ ಮಾಡುವುದು ದೇಹಕ್ಕೆ 'ನಿಧಾನಗತಿಯ ವಿಷ' (Slow Poison) ಎಂದು ತಜ್ಞರು ಎಚ್ಚರಿಸಿದ್ದಾರೆ.

ಮೂತ್ರಪಿಂಡದ ಸಮಸ್ಯೆ:

ಅಡುಗೆ ಮಾಡುವಾಗ ಅಲ್ಯೂಮಿನಿಯಂ ಕಣಗಳು ಆಹಾರದೊಂದಿಗೆ ಬೆರೆತು ದೇಹವನ್ನು ಸೇರುತ್ತವೆ. ಇವುಗಳನ್ನು ಶೋಧಿಸಲು ಕಿಡ್ನಿಗಳು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ದೀರ್ಘಕಾಲದ ಬಳಕೆಯಿಂದ ಕಿಡ್ನಿ ವೈಫಲ್ಯದಂತಹ ಸಮಸ್ಯೆಗಳು ಉಂಟಾಗಬಹುದು.

ಮೂಳೆಗಳ ದೌರ್ಬಲ್ಯ :

ದೇಹದಲ್ಲಿ ಅಲ್ಯೂಮಿನಿಯಂ ಮಟ್ಟ ಹೆಚ್ಚಾದಾಗ, ಅದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ. ಇದರಿಂದ ಮೂಳೆಗಳು ಸವೆಯುವುದು ಮತ್ತು ಕೀಲು ನೋವು ಕಾಣಿಸಿಕೊಳ್ಳಬಹುದು.

ಮರೆಗುಳಿತನ:

ಕೆಲವು ಸಂಶೋಧನೆಗಳ ಪ್ರಕಾರ, ಅಲ್ಯೂಮಿನಿಯಂ ಮೆದುಳಿನ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಇದು ದೀರ್ಘಕಾಲದಲ್ಲಿ ಮರೆಗುಳಿತನ (Alzheimer's) ಅಥವಾ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು.

ಜೀರ್ಣಕ್ರಿಯೆಯ ತೊಂದರೆ:

ಅಲ್ಯೂಮಿನಿಯಂ ಪಾತ್ರೆಯಲ್ಲಿ ಹುಳಿ ಪದಾರ್ಥಗಳನ್ನು (ಟೊಮೆಟೊ, ನಿಂಬೆಹಣ್ಣು, ಹುಣಸೆಹಣ್ಣು) ಬೇಯಿಸಿದಾಗ ಲೋಹವು ಹೆಚ್ಚು ವೇಗವಾಗಿ ಆಹಾರದಲ್ಲಿ ಕರಗುತ್ತದೆ. ಇದು ಅಸಿಡಿಟಿ ಮತ್ತು ಅಲ್ಸರ್ ಸಮಸ್ಯೆಯನ್ನು ಉಂಟುಮಾಡಬಹುದು.

ತಜ್ಞರು ನೀಡುವ ಸಲಹೆಗಳೇನು?

ಟೊಮೆಟೊ ಸಾರು ಅಥವಾ ಹುಳಿ ಇರುವ ಆಹಾರಗಳನ್ನು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಮಾಡಬೇಡಿ.
ಪಾತ್ರೆಗಳು ಹಳೆಯದಾದಂತೆ ಅಥವಾ ಅವುಗಳ ಮೇಲ್ಮೈ ಸವೆಯುತ್ತಿದ್ದಂತೆ ಅವುಗಳಿಂದ ಲೋಹದ ಅಂಶಗಳು ಆಹಾರಕ್ಕೆ ಸೇರುವ ಪ್ರಮಾಣ ಹೆಚ್ಚಾಗುತ್ತದೆ.
ಅಲ್ಯೂಮಿನಿಯಂ ಬದಲಿಗೆ ಸ್ಟೀಲ್, ಮಣ್ಣಿನ ಪಾತ್ರೆ ಅಥವಾ ಕಬ್ಬಿಣದ ಪಾತ್ರೆಗಳನ್ನು ಬಳಸುವುದು ಅತ್ಯಂತ ಸುರಕ್ಷಿತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net