ಚಿಯಾ ಬೀಜ v/s ಮೈಕ್ರೋಗ್ರೀನ್ಸ್: ಸೂಪರ್ ಫುಡ್ ಸಿಂಹಾಸನ ಯಾರಿಗೆ? ಆರೋಗ್ಯದ ಅಸಲಿ ಚಾಂಪಿಯನ್ ಯಾರು? Chia Seeds

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಚಿಯಾ ಬೀಜಗಳನ್ನು ಆದಷ್ಟು ಜನರು ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ
  • ಚಿಯಾ ಬೀಜಗಳ ಜೊತೆಗೆ, ಚಿಯಾ ಮೈಕ್ರೋಗ್ರೀನ್ಸ್ ಸಹ ಜನಪ್ರಿಯತೆಯನ್ನು ಹೊಂದುತ್ತಿವೆ
  • ಚಿಯಾ ಬೀಜಗಳು ಎಂದರೆ 'ಸಾಲ್ವಿಯಾ ಹಿಸ್ಪಾನಿಕಾ' ಎಂಬ ಸಸ್ಯದಿಂದ ಪಡೆದ ಕಪ್ಪು ಬೀಜಗಳು
Chia seeds: ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್​ ಮತ್ತು ಆರೋಗ್ಯ ತಜ್ಞರು ತಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಚಿಯಾ ಬೀಜಗಳನ್ನು ಹೆಚ್ಚಾಗಿ ಸೇರಿಸಿಕೊಳ್ಳುತ್ತಾರೆ. ಆದಾಗ್ಯೂ, ಚಿಯಾ ಬೀಜಗಳನ್ನು ಪೌಷ್ಟಿಕಾಂಶದ ನಿಧಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಇಂದಿನ ದಿನಗಳಲ್ಲಿ, ಚಿಯಾ ಬೀಜಗಳ ಜೊತೆಗೆ, ಚಿಯಾ ಮೈಕ್ರೋಗ್ರೀನ್ಸ್ ಸಹ ಜನಪ್ರಿಯತೆಯನ್ನು ಹೊಂದುತ್ತಿವೆ. 
ಈ ಎರಡೂ ಬೀಜಗಳಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹಲವಾರು ಜನರಲ್ಲಿ ಪ್ರಶ್ನೆ ಹುಟ್ಟುಹಾಕಿದ್ದು, ಇವುಗಳ ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ...

ಚಿಯಾ ಬೀಜಗಳು ಯಾವುವು?

ಚಿಯಾ ಬೀಜಗಳು (Chia Seeds) ಎಂದರೆ 'ಸಾಲ್ವಿಯಾ ಹಿಸ್ಪಾನಿಕಾ' (Salvia hispanica) ಎಂಬ ಸಸ್ಯದಿಂದ ಪಡೆದ ಸಣ್ಣದಾದ, ಕಪ್ಪು ಅಥವಾ ಬಿಳಿ ಬಣ್ಣದ ಬೀಜಗಳಾಗಿವೆ. ಇವು ನೋಡಲು ಸಣ್ಣದಾಗಿದ್ದರೂ ಆರೋಗ್ಯದ ದೃಷ್ಟಿಯಲ್ಲಿ ಇದನ್ನು 'ಸೂಪರ್ ಫುಡ್' ಎಂದು ಕರೆಯುತ್ತಾರೆ.
ಚಿಯಾ ಬೀಜಗಳು ಫೈಬರ್, ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಖನಿಜಗಳಿಂದ ಸಮೃದ್ಧವಾಗಿವೆ. ಇದನ್ನು ನೀರಿನಲ್ಲಿ ನೆನೆಸಿದಾಗ ಜೆಲ್​ ತರಹದ ವಿನ್ಯಾಸವನ್ನು ಪಡೆಯುತ್ತವೆ. ಇದನ್ನು ಸ್ಮೂಥಿಗಳು, ಪುಡಿಂಗ್‌ಗಳು, ಓಟ್‌ಮೀಲ್ ಮತ್ತು ಸಲಾಡ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
1. ತೂಕ ಇಳಿಸಲು ಸಹಕಾರಿ: ಚಿಯಾ ಬೀಜಗಳಲ್ಲಿ ನಾರಿನಂಶ ಸಮೃದ್ಧವಾಗಿದೆ. ಇದನ್ನು ನೀರಿನಲ್ಲಿ ನೆನಸಿ ಸೇವಿಸುವುದರಿಂದ ಇವು ಹೊಟ್ಟೆಯಲ್ಲಿ  ಜೆಲ್ ರೂಪಕ್ಕೆ ತಿರುಗಿ  ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತವೆ. ಇದರಿಂದ ಪದೇ ಪದೇ ಹಸಿವಾಗುವುದು ತಪ್ಪುತ್ತದೆ.
2. ಒಮೆಗಾ-3 ಫ್ಯಾಟಿ ಆಸಿಡ್‌ಗಳ ಗಣಿ: ಸಸ್ಯಾಹಾರಿಗಳಿಗೆ ಒಮೆಗಾ-3 ಪಡೆಯಲು ಚಿಯಾ ಬೀಜಗಳು ಅತ್ಯುತ್ತಮ ಮೂಲ. ಇದು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
3. ಹೃದಯದ ಆರೋಗ್ಯಕ್ಕೆ ಹಿತಕಾರಿ: ಇವುಗಳಲ್ಲಿರುವ ಆರೋಗ್ಯಕರ ಕೊಬ್ಬು ಮತ್ತು ಫೈಬರ್ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಿ, ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
4. ಜೀರ್ಣಕ್ರಿಯೆ ಸುಧಾರಣೆ: ಹೆಚ್ಚಿನ ನಾರಿನಂಶ ಇರುವುದರಿಂದ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿ, ಕರುಳಿನ ಆರೋಗ್ಯವನ್ನು ಕಾಪಾಡಿ, ಸುಗಮವಾಗಿ ಜೀರ್ಣಕ್ರಿಯೆ ಆಗುವಂತೆ ನೋಡಿಕೊಳ್ಳುತ್ತದೆ.
5. ಮೂಳೆಗಳ ಬಲವರ್ಧನೆ: ಚಿಯಾ ಬೀಜಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫಾಸ್ಫರಸ್ ಅಧಿಕವಾಗಿರುತ್ತದೆ. ಇದು ಕ್ಯಾಲ್ಸಿಯಂ ಪಡೆಯಲು ಉತ್ತಮ ಪರ್ಯಾಯವಾಗಿದ್ದು, ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ.

ಚಿಯಾ ಮೈಕ್ರೋಗ್ರೀನ್ಸ್ ಎಂದರೇನು?

ಚಿಯಾ ಬೀಜಗಳು ಮೊಳಕೆಯೊಡೆದು ಸಣ್ಣ ಹಸಿರು ಸಸ್ಯಗಳಾಗಿ ಬೆಳೆಯುತ್ತದೆ ಇದನ್ನು  ಚಿಯಾ ಮೈಕ್ರೋಗ್ರೀನ್ಸ್ ಎಂದು ಕರೆಯಲಾಗುತ್ತದೆ. ಇವು ಸಾಮಾನ್ಯವಾಗಿ  ಮೊಳಕೆಯೊಡೆದ 7 ರಿಂದ 14 ದಿನಗಳ ನಂತರ ಕೊಯ್ಲು ಮಾಡಿ ತಿನ್ನಲಾಗುತ್ತದೆ. ಈ ಹಂತದಲ್ಲಿ ಸಸ್ಯವು ವೇಗವಾಗಿ ಬೆಳೆಯುವುದರಿಂದ ದ್ಯುತಿಸಂಶ್ಲೇಷಣೆ ಕ್ರಿಯೆಯು ಸಕ್ರಿಯಗೊಂಡು ಹೆಚ್ಚಿನ ಮಟ್ಟದ  ಕ್ಲೋರೊಫಿಲ್, ಜೀವಸತ್ವಗಳು, ಕಿಣ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯುತ್ತದೆ.
1. ಪೋಷಕಾಂಶಗಳ ಸಾಂದ್ರತೆ: ಸಾಮಾನ್ಯವಾಗಿ ಬೆಳೆದ ಸಸ್ಯಕ್ಕಿಂತ ಮೈಕ್ರೋಗ್ರೀನ್ಸ್‌ಗಳಲ್ಲಿ ಪೋಷಕಾಂಶಗಳ ಪ್ರಮಾಣ 4 ರಿಂದ 40 ಪಟ್ಟು ಹೆಚ್ಚಾಗಿರುತ್ತದೆ. ಇದರಲ್ಲಿ  ವಿಟಮಿನ್ A, C, E ಮತ್ತು K ಸಮೃದ್ಧವಾಗಿದ್ದು, ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
2. ಶಕ್ತಿಯುತ ಆ್ಯಂಟಿ-ಆಕ್ಸಿಡೆಂಟ್‌ಗಳು:  ಚಿಯಾ ಮೈಕ್ರೋಗ್ರೀನ್ಸ್​ಗಳಲ್ಲಿ ಕ್ಲೋರೊಫಿಲ್ ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿರುತ್ತವೆ. ಇವುಗಳ ನಿಯಮಿತ ಸೇವನೆಯು ದೇಹದಿಂದ ವಿಷಕಾರಿ ಅಂಶಗಳನ್ನು (Toxins) ಹೊರಹಾಕಲು ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.
3. ಹೃದಯದ ಆರೋಗ್ಯ ಮತ್ತು ಒಮೆಗಾ-3: ಬೀಜಗಳಂತೆಯೇ ಇವುಗಳಲ್ಲೂ ಒಮೆಗಾ-3 ಫ್ಯಾಟಿ ಆಸಿಡ್‌ಗಳು ಇರುತ್ತವೆ. ಇವುಗಳ ಸೇವನೆಯು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಮತ್ತು ರಕ್ತನಾಳಗಳ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿರುತ್ತದೆ.
4. ಜೀರ್ಣಕ್ರಿಯೆಗೆ ಉತ್ತಮ: ಇವುಗಳಲ್ಲಿ ಜೀರ್ಣಕ್ರಿಯೆಗೆ ಅಗತ್ಯವಾದ ಎಂಜೈಮ್‌ಗಳು ಅಧಿಕವಾಗಿರುತ್ತವೆ. ಇದು ಆಹಾರ ಸುಲಭವಾಗಿ ಜೀರ್ಣವಾಗಲು ಮತ್ತು ಕರುಳಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.
5. ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣ: ಇವುಗಳಲ್ಲಿ ಕ್ಯಾಲೊರಿ ತುಂಬಾ ಕಡಿಮೆ ಮತ್ತು ನಾರಿನಾಂಶ ಹೆಚ್ಚು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಿ, ಅತಿಯಾದ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಎರಡೂ ಪದಾರ್ಥಗಳು ತಮ್ಮದೇ ಆದ ರೀತಿಯಲ್ಲಿ ಪ್ರಯೋಜನಗಳನ್ನು ಹೊಂದಿವೆ. ಆದಾಗ್ಯೂ, ಚಿಯಾ ಬೀಜಗಳಲ್ಲಿ ಒಮೆಗಾ-3ಗಳು, ಫೈಬರ್ ಮತ್ತು ಪ್ರೋಟೀನ್‌ಗಳಲ್ಲಿ ಅಧಿಕವಾಗಿದ್ದರೆ, ಚಿಯಾ ಮೈಕ್ರೋಗ್ರೀನ್‌ಗಳು ಹೆಚ್ಚಿನ ಜೀವಸತ್ವಗಳು, ಕ್ಲೋರೊಫಿಲ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಹಾಗಾಗಿ ನೀವೇನಾದರೂ ತೂಕವನ್ನು ಹೊಂದಲು ಬಯಸುತ್ತಿದ್ದರೆ ಚಿಯಾ ಬೀಜಗಳು ಉತ್ತಮ ಆಯ್ಕೆಯಾಗಿದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net