ಸ್ತನ ಕ್ಯಾನ್ಸರ್ ಬರದಂತೆ ನೀವೇನಾದರೂ ನೋಡಿಕೊಳ್ಳುತ್ತಿದ್ದರೆ, ಮೊದಲಿಗೆ ಮಾಸಿಕ ಸ್ತನ ಸ್ವಯಂ ಪರೀಕ್ಷೆಗಳನ್ನು ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ದಿನನಿತ್ಯ ಸಮತಗೋಲಿತ ಆಹಾರವನ್ನು ಸೇವಿಸಿ. ನಿಮ್ಮ ತೂಕವನ್ನು ನಿಯಂತ್ರಿಸಿ. ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿದ್ದರೆ ಅದನ್ನು ತ್ಯಜಿಸಿ. ಆದಾಗ್ಯೂ, ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇತಿಹಾಸವಿದ್ದರೆ, ಜೆನೆಟಿಕ್ ಪರೀಕ್ಷೆ ಮತ್ತು ನಿಯಮಿತ ಸ್ಕ್ರೀನಿಂಗ್ ನಿಮ್ಮ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ (ಏಜೆನ್ಸೀಸ್).