ಬೆನ್ನು ನೋವು ಎಂದು ನಿರ್ಲಕ್ಷಿಸಬೇಡಿ: ಮೂತ್ರಪಿಂಡದ ಕಾಯಿಲೆಯ ಲಕ್ಷಣಗಳ ಬಗ್ಗೆ ನಿಮಗಿದು ತಿಳಿದಿರಲಿ..Back Pain

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Back Pain: ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಎಂಬುದು ಸಾಮಾನ್ಯ ಸಮಸ್ಯೆಯಾಗಿ ಹೊರಹೊಮ್ಮಿದೆ. ಕಚೇರಿಗಳಲ್ಲಿ ಗಂಟಗಟ್ಟಲೆ ಕೂರುವುದು ಅಥವಾ ಜಿಮ್​ನಲ್ಲಿ ಭಾರವಾದ ತೂಕವನ್ನು ಎತ್ತುವುದರಿಂದಾಗಲಿ ಬೆನ್ನು ನೋವು ಹಲವು ಕಾರಣಗಳಿಂದ ಉಂಟಾಗುತ್ತದೆ. ಹೆಚ್ಚಿನ ಜನರು ಇದನ್ನು ಸ್ನಾಯು ಒತ್ತಡ ಎಂದು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಅತಿಯಾದ ಬೆನ್ನುನೋವು ಕ್ಷುಲ್ಲಕವಲ್ಲ ಎಂದು ವೈದ್ಯರು ವಿವರಿಸುತ್ತಾರೆ.
ಆದಾಗ್ಯೂ, ಯಾವುದೇ ವ್ಯಕ್ತಿ ಮೂತ್ರಪಿಂಡದ ಸೋಂಕು, ಮೂತ್ರಪಿಂಡದ ಕಲ್ಲುಗಳು ಅಥವಾ ಇತರ ಅಸ್ವಸ್ಥತೆಗಳಿಂದ ಬಳಲುತ್ತಿದ್ದರೆ, ಅವರು ಬೆನ್ನಿನ ಕೆಳಭಾಗದಲ್ಲಿ ನೋವನ್ನು ಅನುಭವಿಸುತ್ತಾರೆ. ಈ ನೀವು ವಿಪರೀತವಾಗಿದ್ದರೆ ಅಥವಾ ಪ್ರತಿನಿತ್ಯ ಹೀಗೆ ಇದ್ದರೆ ಇದರ ಬಗ್ಗೆ ಗಮನಹರಿಸುವುದು ಉತ್ತಮ.

ಸ್ನಾಯು ಸೆಳೆತ ಅಥವಾ ನೋವು ಹೇಗೆ ಗುರುತಿಸುವುದು?

ಆದಾಗ್ಯೂ, ನಮ್ಮ ದೇಹ ಚಲನೆಗೊಂಡಾಗ ಸ್ನಾಯು ನೋವು ಹೆಚ್ಚಾಗಬಹುದು ಮತ್ತು ಕಡಿಮೆಯಾಗಬಹುದು. ಆದರೆ ಮೂತ್ರಪಿಂಡದ ನೋವು ಸ್ವಲ್ಪ ವಿಭಿನ್ನವಾಗಿರುತ್ತದೆ. ಈ ಮೂತ್ರಪಿಂಡದ ನೋವು ಪಕ್ಕೆಲುಬುಗಳ ಕೆಳಗೆ ಮತ್ತು ಬೆನ್ನಿನ ಒಂದು ಅಥವಾ ಎರಡೂ ಬದಿಗಳಲ್ಲಿ ಕಂಡುಬರುತ್ತದೆ.
ಸಾಮಾನ್ಯವಾಗಿ ಬೆನ್ನಿನ ನೋವು ಅಷ್ಟೊಂದು ತೀಕ್ಷ್ಣವಾಗಿರುವುದಿಲ್ಲ. ಆದರೆ, ಇದು ಹೆಚ್ಚಾಗಿ ಆಳವಾಗಿ ಮತ್ತು ತೀಕ್ಷ್ಣವಾಗಿದ್ದು, ಕೆಳ ತೊಡೆಯವರೆಗೆ ನೋವು ಹರಡುತ್ತದೆ. ಈ ನೋವು ಹೆಚ್ಚಾಗಿ ಮಲಗಿದಾಗ ಅಥವಾ ವಿಶ್ರಾಂತಿ ಪಡೆದ ಕಾಣಿಸಿಕೊಂಡರೆ, ಅದು ಮೂತ್ರಪಿಂಡದ ಸಮಸ್ಯೆಯಾಗಿರಬಹುದು. ಹಾಗಾಗಿ ನೀವೇನಾದರೂ ನೋವನ್ನು ಅನುಭವಿಸುತ್ತಿದ್ದರೆ, ಊತ ಅಥವಾ ಕೆಂಪು ಬಣ್ಣವು ಗೋಚರಿಸಬಹುದು, ಆದರೆ ಮೂತ್ರಪಿಂಡದ ನೋವು ಹೊರಗಿನಿಂದ ತಿಳಿಯುವುದಿಲ್ಲ.

ಈ ಲಕ್ಷಣಗಳ ಬಗ್ಗೆ ಎಚ್ಚರದಿಂದಿರಿ

ಮೂತ್ರಪಿಂಡಗಳು ನಮ್ಮ ದೇಹದ ಶೋಧಕ ವ್ಯವಸ್ಥೆಯಾಗಿದೆ. ಅವು ಏನಾದರೂ ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದರೆ, ವಿಷಕಾರಿ ವಸ್ತುಗಳ ಸಂಗ್ರಹವಾಗುತ್ತವೆ. ಮತ್ತು ನೇರವಾಗಿ ಮೂತ್ರದ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ನಿಮ್ಮ ಮೂತ್ರ ಕಪ್ಪು ಬಣ್ಣಕ್ಕೆ ತಿರುಗಿದರೆ ಅಥವಾ ನೊರೆಯಾಗಿದ್ದರೆ ನೀವು ಮೂತ್ರಪಿಂಡದ ವೈಫಲ್ಯಗಳ ಲಕ್ಷಣಗಳಾಗಿರಬಹುದು.
ಇದಲ್ಲದೇ, ನೀವು ಎಚ್ಚರಗೊಂಡಾಗ ನಿಮ್ಮ ಕಣ್ಣುಗಳ ಸುತ್ತ ಅಥವಾ ನಿಮ್ಮ ಪಾದಗಳು ಮತ್ತು ಕಣಕಾಲುಗಳಲ್ಲಿ ಊತ ಕಂಡುಬಂದರೆ ಅವುಗಳನ್ನು ಹಗುರವಾಗಿ ಪರಿಗಣಿಸಬೇಡಿ. ಏಕೆಂದರೆ, ನೀರಿನ ಪ್ರಮಾಣವು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಿರಬಹುದು.

ಆಯಾಸ ಮತ್ತು ವಾಕರಿಕೆ

ಮೂತ್ರಪಿಂಡದ ಸಮಸ್ಯೆಗಳು ನಿರಂತರ ಆಯಾಸ ಮತ್ತು ದೌರ್ಬಲ್ಯಕ್ಕೆ ಕಾರಣವಾಗಬಹುದು. ಮೂತ್ರಪಿಂಡಗಳು ರಕ್ತವನ್ನು ಶೋಧಿಸುವುದನ್ನು ಮಾಡಲು ಸಾಧ್ಯವಾಗದಿದ್ದಾಗ, ದೇಹದಲ್ಲಿ ತ್ಯಾಜ್ಯ ಶೇಖರಣೆಯಾಗುತ್ತದೆ ಮತ್ತು ಹಸಿವಿನ ನಷ್ಟಕ್ಕೆ ಕಾರಣವಾಗುತ್ತದೆ. ಇದು ವಾಕರಿಕೆ, ಕೆಲವೊಮ್ಮೆ ಶೀತ ಮತ್ತು ಜ್ವರ ಕೂಡಾ ಬರಬಹುದು.
ನೀವು ವಾಂತಿ, ಜ್ವರ ಅಥವಾ ಆಗಾಗ್ಗೆ ಮೂತ್ರ ವಿಸರ್ಜನೆಯೊಂದಿಗೆ ಬೆನ್ನು ನೋವನ್ನು ಅನುಭವಿಸುತ್ತಿದ್ದರೆ, ಮೊದಲೇ ವೈದ್ಯರನ್ನು ಸಂಪರ್ಕಿಸಿ. ಚಿಕಿತ್ಸೆ ವಿಳಂಬವಾದಲ್ಲಿ ಅಪಾಯ ಹೆಚ್ಚಾಗಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net