ನಿಮ್ಮ ನಿಜವಾದ 'ಜೈವಿಕ ವಯಸ್ಸು' ಎಷ್ಟೆಂದು ತಿಳಿಯಬೇಕೆ?; 1 ನಿಮಿಷದ ವಾಕಿಂಗ್​ ಪರೀಕ್ಷೆ ಮಾಡಿ..Biological Age calculate

Biological Age calculate
Biological Age calculate
Published on

ಪ್ರಮುಖ ಮುಖ್ಯಾಂಶಗಳು

  • ನಡಿಗೆಯ ವೇಗವು ನಿಮ್ಮ ದೇಹದ ಜೀವಕೋಶಗಳ ಆರೋಗ್ಯದ ಕನ್ನಡಿ
  • 4 ಮೀಟರ್ ನಡಿಗೆಯ ಪರೀಕ್ಷೆಯ ಮೂಲಕ ಜೈವಿಕ ವಯಸ್ಸು ತಿಳಿಯೋದು ಹೇಗೆ?
  • ನಿಯಮಿತ ವ್ಯಾಯಾಮ, ಪೌಷ್ಠಿಕ ಆಹಾರ, ಒಳ್ಳೆ ನಿದ್ದೆ ಮಾಡುವುದು ಜೈವಿಕ ವಯಸ್ಸನ್ನು ಸುಧಾರಿಸಬಹುದು
Biological Age calculate by Walking Speed:ನಿತ್ಯವೂ ಒಂದು ಅರ್ಧಗಂಟೆ ಅಥವಾ ಎರಡು ಸಾವಿರ ಹೆಜ್ಜೆ ಇಡೋದು(Walking) ದೇಹಕ್ಕೆ ಒಂದು ಆಯಾಮದಲ್ಲಿ ಸಿಗುವ ವ್ಯಾಯಾಮ. ತೂಕ ಇಳಿಕೆಗೆ, ಹೃದಯ ಸಂಬಂಧಿ ಕಾಯಿಲೆಗಳಿಗೆ ನಡಿಗೆ ಮದ್ದು. ಹೀಗಾಗಿ ಬರೀ ಕಾಲಿನಲ್ಲಿ,  ಯಾವುದೇ ಹೆಡ್​ಫೋನ್​ ಇಲ್ಲ್ರದೆ, ಬೆವರಿಳಿಯುವಂತೆ ನಡೆಯೋದು ಉತ್ತಮ ಎಂದು ವೈದ್ಯರು ಹೇಳುತ್ತಾರೆ. ಎಷ್ಟು ವೇಗವಾಗಿ ವಾಕ್​ ಮಾಡುತ್ತೀರಾ ಎನ್ನುವುದರ ಮೇಲೆ ನಿಮ್ಮ ದೇಹದ ಒಳಗಿರುವ ಅಂಗಾಗಳು ಯಾವ ಮಟ್ಟಿಗೆ ಕೆಲಸ ಮಾಡುತ್ತಿದೆ.ಅವುಗಳ ನಿಜವಾದ ವಯಸ್ಸೇನು ಎನ್ನುವುದು ತಿಳಿಯುವುದಂತೆ.
ದೇಹಕ್ಕೆ ನಾವು ಹುಟ್ಟಿದ ವರ್ಷ, ದಿನದ ಮೇಲೆ ವಯಸ್ಸು ನಿಗದಿಯಾಗುತ್ತದೆ. ಆದರೆ, ನಮ್ಮೊಳಗಿನ ಜೀವಕೋಶಗಳು ಮತ್ತು ಅಂಗಾಂಶಕ್ಕೆ ಮಾತ್ರ ಅದರ ಆರೋಗ್ಯ ಮತ್ತು ಕಾರ್ಯಕ್ಷಮತೆ ಮೇಲೆ ಜೈವಿಕ ವಯಸ್ಸು(Biological Age) ನಿರ್ಧಾರವಾಗುತ್ತದೆ. ಗೈಟ್ ಟೆಸ್ಟ್(Gait Test)​ ಮೂಲಕ ಅಂದರೆ ನಾವು ನಡೆಯುವ ವೇಗದ ಪರೀಕ್ಷೆಯ ಮೂಲಕ ನಮ್ಮ ದೇಹದಲ್ಲಿರುವ ಅಂಗಕ್ಕೆ ಎಷ್ಟು ವಯಸ್ಸಾಗಿದೆ ಅನ್ನೋದನ್ನು ಪತ್ತೆ ಮಾಡಬಹುದು ಎನ್ನಲಾಗಿದೆ.

ಏನಿದು ಗೈಟ್​ ಟೆಸ್ಟ್​ ಎಂದರೆ?

ದೇಹದ ಒಳಗಿನ ಅಂಗಾಗದ ಕಾರ್ಯಕ್ಷಮತೆಯನ್ನು ಸರಳವಾಗಿ ತಿಳಿದುಕೊಳ್ಳಬಹುದು. ಅದು ಹೇಗೆಂದರೆ, 4 ಮೀಟರ್​ ದೂರದ ನಡಿಗೆಯನ್ನು ಎಷ್ಟು ಸೆಕೆಂಡಿನ ವೇಗದಲ್ಲಿ ಪೂರ್ಣಗೊಳಿಸುತ್ತಾರೆ ಎನ್ನುವುದನ್ನು ಮೊದಲು ಪರೀಕ್ಚೆ ಮಾಡಲಾಗುತ್ತದೆ. meters per second(m/s)ಆಧಾರದ ಮೇಲೆ ವ್ಯಕ್ತಿಯ ಅಂಗಾಗಕ್ಕೆ ಎಷ್ಟು ವಯಸ್ಸಾಗಿದೆ ಎನ್ನುವುದನ್ನು ನಿರ್ಧರಿಸಲಾಗುತ್ತದೆ. 
ವ್ಯಕ್ತಿಯು ತಾನು ದಿನವೂ ನಡೆಯುವ ಸಾಮಾನ್ಯ ವೇಗದಲ್ಲೇ 4 ಮೀಟರ್​ ದೂರವನ್ನು ಎಷ್ಟು ಸೆಕೆಂಡ್ ಅಥವಾ ನಿಮಿಷದಲ್ಲಿ  ರೀಚ್​ ಆಗುತ್ತಾನೆ ಎನ್ನುವುದನ್ನು ಲೆಕ್ಕ ಹಾಕಲಾಗುತ್ತದೆ. ಇದನ್ನು Sixth Vital Sign ಎಂದು ಕರೆಯಲಾಗುತ್ತದೆ. ಇದು ಹೃದಯ, ಮೆದುಳು, ಶ್ವಾಸಕೋಶದ ಆರೋಗ್ಯವನ್ನು ಬಿಂಬಿಸುತ್ತದೆ.

ನಡಿಗೆ ಮತ್ತು ಆರೋಗ್ಯದ ನಡುವಿನ ಸಂಬಂಧ ಪತ್ತೆ ಮಾಡೋದು ಹೇಗೆ?

ನಡಿಗೆಯ ವೇಗ ಕಡಿಮೆ ಇದ್ದರೆ ನಿಮ್ಮ ಸ್ನಾಯುಗಳಲ್ಲಿ ದೌರ್ಬಲ್ಯ ಅಥವಾ ನರಮಂಡಲದಲ್ಲಿ ಸಮಸ್ಯೆ ಇರೋದನ್ನು ಪರೋಕ್ಷವಾಗಿ ನಿಮ್ಮ ನಡಿಗೆ ಹೇಳುತ್ತಿದೆ ಎಂದು ವೈಜ್ಞಾನಿಕ ವರದಿಗಳು ತಿಳಿಸಿವೆ.

ನಡಿಗೆ ವೇಗ ಮತ್ತು ಜೈವಿಕ ಆರೋಗ್ಯ 

ನೀಮ್ಮ ನಡುಗೆ  ಸೆಕೆಂಡಿಗೆ 1.2 ಮೀಟರ್‌  ಇದ್ದರೆ ಇದು ಸಾಮಾನ್ಯ ನಡಿಗೆಯಾಗಿದ್ದು, ಕಡಿಮೆ ಅಪಪಾಯವನ್ನು ಸೂಚಿಸುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿದೆ ಎಂದು ಅರ್ಥ. ಸೆಕೆಂಡಿಗೆ1.0-1.2 ಮೀಟರ್‌ ನಡಿಗೆ ಇದ್ದರೆ, ವ್ಯಾಯಾಮದ ಅಗತ್ಯವಿದೆ ಅನ್ನೋದನ್ನು ಇದು ಸೂಚಿಸುತ್ತದೆ. ಇನ್ನು ಹೆಚ್ಚಿನ ಅಪಾಯ ಎಂದರೆ  ಸೆಕೆಂಡಿಗೆ 0.8 ಮೀಟರ್‌ಗಿಂತ ಕಡಿಮೆ ವೇಗವಿದ್ದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಇದಕ್ಕೆ ವೈದ್ಯಕೀಯ ತಪಾಸಣೆ ಅತ್ಯಗತ್ಯ ಎನ್ನುವ ಸೂಚನೆಯನ್ನು ನೀಡುತ್ತದೆ ಎನ್ನುವುದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ವಯಸ್ಸಿನ ಆಧಾರದ ಮೇಲೆ ನಡಿಗೆಗೆ ಇರಬೇಕಾದ ವೇಗ?

40ರಿಂದ 49 ವರ್ಷದ ಪುರುಷರು ಸೆಕೆಂಡಿಗೆ 1.43 ಮೀಟರ್​ ಹಾಗೂ ಮಹಿಳೆಯರು ಸೆಕೆಂಡಿಗೆ 1.39 ಮೀಟರ್​ ವೇಗದಲ್ಲಿ ನಡೆಯಬೇಕಾಗುತ್ತದೆ. ಇನ್ನು 60-69 ವರ್ಷದ ಪುರುಷರು 1.43  meters per second  ಹಾಗೂ ಮಹಿಳೆಯರು 1.24 meters per second ತೆಗೆದುಕೊಳ್ಳಬೇಕು 80-89 ವರ್ಷದ ಪುರುಷರು 0.97 m/s ತೆಗೆದುಕೊಂಡರೆ ಮಹಿಳೆಯರು 0.94 m/sರಷ್ಟರಲ್ಲಿ 4 ಮೀಟರ್​ ನಡಿಗೆ ಪೂರ್ಣಗೊಳಿಸಬೇಕು.

ನಡಿಗೆ ಪರೀಕ್ಷೆ ನಾವೇ ಮಾಡಿಕೊಳ್ಳೋದ್ ಹೇಗೆ?

  • ಸಮತಟ್ಟಾದ ಜಾಗದಲ್ಲಿ 4 ಮೀಟರ್​ ನಡೆಯಲು ಗುರುತು ಹಾಕಿಕೊಳ್ಳಿ 
  • ಸ್ಟಾಪ್‌ವಾಚ್ ಬಳಸಿ  ನಡಿಗೆಯ ವೇಗ ಅಳಿಯೋದನ್ನು ಮರೆಯಬೇಡಿ

ನಡಿಗೆಯ ವೇಗ ಸುಧಾರಿಸಿ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ನಿಮ್ಮ ನಡಿಗೆಯಲ್ಲಿನ ವೇಗ ಕಡಿಮೆ ಇದ್ದರೆ ಆತಂಕ ಪಡುವ ಅಗತ್ಯವಿಲ್ಲ.  ಸರಿಪಡಿಸಿಕೊಳ್ಳೋಕೆ ನಿಯಮಿತವಾಗಿ ವ್ಯಾಯಾಮ ಮಾಡಿ. ಸಮತೋಲಿತ ಆಹಾರ, ನಿದ್ದೆ ಮಾಡಿ. ಆ ಮೂಲಕ ನಿಮ್ಮ ಜೈವಿಕ ವಯಸ್ಸನ್ನು ಕಡಿಮೆ ಮಾಡಬಹದು ಮತ್ತು ನಡಿಗೆಯ ವೇಗವನ್ನು ಹೆಚ್ಚಿಸಿಕೊಳ್ಳಬಹುದು, (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net