ಗಂಡಾಗಿ ಹುಟ್ಟಿ ಹೆಣ್ಣಾಗುವವರು ಅಥವಾ ಹೆಣ್ಣಾಗಿ ಹುಟ್ಟಿ ಗಂಡಾಗುವ ಪ್ರತಿಯೊಬ್ಬರು ಸಹ ತನ್ನ ಸಂಗಾತಿಗಳನ್ನು ಹುಡುಕುವ ಭರದಲ್ಲಿಯೇ ಇರುತ್ತಾರೆ. ಸಮಾಜದಲ್ಲಿ ಇತ್ತೀಚೆಗೆ ಒಂದೊಳ್ಳೆ ಹುದ್ದೆಯಲ್ಲಿ ಗುರುತಿಸಿಕೊಳ್ಳುತ್ತಿದ್ದರೂ ಸಹ ತಮ್ಮ ನೋವು, ಖುಷಿಯನ್ನು ಹಂಚಿಕೊಳ್ಳೋಕೆ ಒಂದು ಜೀವ ಇಲ್ವಲ್ಲ ಎನ್ನುವ ವ್ಯಥೆ ಕಾಡೋದಂತು ನಿಜ. ಈ ಎಲ್ಲದರ ಮಧ್ಯೆ ಗಮನ ಸೆಳೆಯುವ ವಿಚಾರ ಎಂದರೆ, ವ್ಯಕ್ತಿಯೊಬ್ಬರು ಹಲವು ಅವಹೇಳನ, ಅವಮಾನ ಎದುರಿಸಿದ ನಂತರ, ರೆಪ್ಲಿಕಾ ಎನ್ನುವ ಚಾಟ್ಬಾಟ್ನಿಂದ ಆರಾಮದಾಯಕ ಜೀವನ ನಡೆಸುತ್ತಿದ್ದಾರಂತೆ.