ಹೈಡ್ರೇಟ್​​​ ಆಗಿರಲು ಇಚ್ಛಿಸಿದರೆ ನೀವಿದನ್ನು ಫಾಲೋ ಮಾಡಿ; ಹೆಲ್ತಿ ಟಿಪ್ಸ್​ ನಿಮಗಾಗಿ | Health Tips

Untitled design - 2024-10-28T195608.914
Published on

ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸರಿಯಾದ ಆಹಾರ ಮತ್ತು ಪಾನೀಯಗಳ ಅಗತ್ಯತೆ ಇದೆ. ಡಿಹೈಡ್ರೇಟ್​ ಆಗದೆ ಇರಲು ಪಾನೀಯಗಳು ಬಹಳ ಪ್ರಯೋಜನಕಾರಿಯಾಗಿದೆ. ಹಾಗಾದರೆ ನಿಮ್ಮ ದೇಹವನ್ನು ಹೈಡ್ರೀಕರಿಸಲು ಯಾವ ಪಾನೀಯಗಳನ್ನು ಸೇವಿಸಬಹುದು. ಯಾವುದೇ ಸೈಡ್​ ಎಫೆಕ್ಟ್​​ ಮಾಡದಂತಹ ಪಾನೀಯಗಳ ವಿವರಣೆಯನ್ನು ಇಲ್ಲಿ ನೀಡಲಾಗಿದೆ. ಈ ಪಾನೀಯಗಳು ಆರೋಗ್ಯಕ್ಕೆ ಹೇಗೆ ಪ್ರಯೋಜಕಾರಿ ಎಂಬ ಮಾಹಿತಿಯನ್ನು ನೀಡಲಾಗಿದೆ.(Health Tips)

ಡಿಹೈಡ್ರೇಟ್​ ಆಗುವುದನ್ನು ತಪ್ಪಿಸಲು ಕುಡಿಯಬೇಕಾ ಪಾನೀಯ

ಶಿಕಾಂಜಿ

ಶಿಕಾಂಜಿ ಸಾಂಪ್ರದಾಯಿಕ ಪಾನೀಯವಾಗಿದ್ದು ಇದನ್ನು ಎಲ್ಲರೂ ಸೇವಿಸಬಹುದು. ಇದರ ಸೇವನೆಯಿಂದ ಆಗುವ ತಾಜಾತನ ಬೇರೆಲ್ಲೂ ಸಿಗುವುದಿಲ್ಲ. ಇದನ್ನು ಸೇವಿಸುವುದರಿಂದ ತ್ವರಿತ ಶಕ್ತಿಯನ್ನು ಪಡೆಯಬಹುದು. ದೇಹವು ಹೈಡ್ರೇಟ್​​ ಆಗಿರುವುದರ ಜತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುವ ನಿಂಬೆ ಮತ್ತು ಜೀರಿಗೆಯಂತಹ ಅಂಶಗಳನ್ನು ಒಳಗೊಂಡಿದೆ.

ಲಸ್ಸಿ

ಲಸ್ಸಿಯನ್ನು ತಯಾರಿಸುವಾಗ ನೀವು ಸ್ವಲ್ಪ ಟ್ವಿಸ್ಟ್ ಮಾಡಬಹುದು. ಉದಾಹರಣೆಗೆ ಮಾವು, ಬಾಳೆಹಣ್ಣು ಅಥವಾ ಸೇಬಿನಂತಹ ನಿಮ್ಮ ಆಯ್ಕೆಯ ಯಾವುದೇ ಹಣ್ಣನ್ನು ನೀವು ಸೇರಿಸಬಹುದು. ಇದರಿಂದ ಲಸ್ಸಿಯ ಬಣ್ಣವೂ ಶರಬತ್ತಿನಂತಾಗುತ್ತದೆ. ಇದಲ್ಲದೆ ನೀವು ಗರಂ ಮಸಾಲ, ಜೀರಿಗೆ ಮತ್ತು ಶುಂಠಿ, ಮೊಸರು ಮುಂತಾದ ಕೆಲವು ಮಸಾಲೆಗಳನ್ನು ಸೇರಿಸಬಹುದು. ಇದು ನಿಮ್ಮ ಜೀರ್ಣಕ್ರಿಯೆಗೆ ಉತ್ತಮ ಪಾನೀಯವಾಗಿದೆ ಮತ್ತು ತುಂಬಾ ಆರೋಗ್ಯಕರವಾಗಿರುತ್ತದೆ.

ಚಹಾ

ದಿನವಿಡೀ ಕೆಲಸ ಮಾಡಿ ಚಹಾ ಸೇವಿಸಲು ಬಯಸಿದರೆ ಗ್ರೀನ್​​ ಟೀ ಅಥವಾ Black ಕಾಫಿಯನ್ನು ಪ್ರಯತ್ನಿಸಬಹುದು. ಆದರೆ ನೀವು ಸಾಂಪ್ರದಾಯಿಕ ಚಹಾವನ್ನು ಕುಡಿಯಲು ಬಯಸಿದರೆ, ನೀವು ಅದನ್ನು ಸಹ ಕುಡಿಯಬಹುದು. ಇದಕ್ಕೆ ಏಲಕ್ಕಿ, ಶುಂಠಿ ಮತ್ತು ತುಳಸಿ ಎಲೆಗಳನ್ನು ಸೇರಿಸುವುದರಿಂದ ದೇಹವನ್ನು ಹೈಡ್ರೇಟ್ ಮಾಡಬಹುದು.

ಎಳನೀರು

ನೀವು ದಿನಕ್ಕೆ ಹಲವಾರು ಬಾರಿ ಎಳನೀರನ್ನು ಸೇವಿಸಬಹುದು. ಇದು ನಿಮ್ಮ ದೇಹದ ಎಲೆಕ್ಟ್ರೋಲೈಟ್ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ನೀವು ಹೈಡ್ರೇಟ್​ ಆಗಿರಲು ಬಹಳಷ್ಟು ಸಹಾಯ ಮಾಡುತ್ತದೆ.

ಸೂಪ್​​

ರಾತ್ರಿಯ ಊಟದ ನಂತರ ಅಥವಾ ಊಟದ ಸಮಯದಲ್ಲಿ ಮಾತ್ರ ನೀವು ಸೂಪ್ ಅನ್ನು ಸೇವಿಸಬಹುದು. ಬಿಸಿ ಇರುವ ಸೂಪ್​​ ನಿಮ್ಮ ಎಲ್ಲಾ ಆಯಾಸವನ್ನು ಹೋಗಲಾಡಿಸುತ್ತದೆ. ಸೂಪ್​ನಲ್ಲಿ ನಿಮ್ಮ ಆಯ್ಕೆಯ ಪದಾರ್ಥಗಳನ್ನು ಸೇರಿಸಬಹುದು. ಇದು ನಿಮ್ಮ ದೇಹದ ಪೋಷಕಾಂಶಗಳ ಅಗತ್ಯಗಳನ್ನು ಪೂರೈಸಲು ಸಹ ಸಹಾಯ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net