ಶಿಶುವಿನ ಆಹಾರದಲ್ಲಿ ಬಾದಾಮಿ & ಖರ್ಜೂರದ ಪೇಸ್ಟ್​ ಸೇರಿಸಿ; ಉತ್ತಮ ಆರೋಗ್ಯಕ್ಕೆ ಸಿಂಪಲ್​ ಟಿಪ್ಸ್​​ | Health Tips

Untitled design - 2024-10-27T194706.668
Published on

ತಾಯಿಯಾಗುವುದು ವಿಶ್ವದ ಅತ್ಯಂತ ಸುಂದರವಾದ ಭಾವನೆ. ಆದರೆ ಇದರೊಂದಿಗೆ ಜವಾಬ್ದಾರಿಗಳು ಸಹ ಹೆಚ್ಚಾಗುತ್ತವೆ. ಚಿಕ್ಕ ಮಗು ತುಂಬಾ ಸೂಕ್ಷ್ಮ ಮತ್ತು ಸಂವೇದನಾಶೀಲವಾಗಿರುತ್ತದೆ. ಮಗುವಿಗೆ ಜನ್ಮ ನೀಡಿದ ತಾಯಿ ತನ್ನ ಆರೋಗ್ಯದ ಜತೆಗೆ ಮಗುವಿನ ಆರೋಗ್ಯದ ಸಂಪೂರ್ಣ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಮಗು ಅನಾರೋಗ್ಯಕ್ಕೆ ತುತ್ತಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಮಗುವಿಗೆ ಯಾವ ಆಹಾರ ನೀಡಬೇಕು ಎಂಬುದು ತಿಳಿದಿರಬೇಕು.(Health Tips)

ಮಗುವಿನ ಆಹಾರದಲ್ಲಿ ಬಾದಾಮಿ ಮತ್ತು ಖರ್ಜೂರ ಇರುವುದು ಉತ್ತಮ ಎಂದು ಮಕ್ಕಳ ತಜ್ಞರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಅದನ್ನು ಹೇಗೆ ನೀಡಬೇಕು ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ.

ಖರ್ಜೂರದ ಪ್ರಯೋಜನ

  • ಖರ್ಜೂರವು ನೈಸರ್ಗಿಕವಾಗಿ ಸಿಹಿಯಾಗಿದೆ. ಆದ್ದರಿಂದ ಮಕ್ಕಳ ಆರೋಗ್ಯಕರ ಆಹಾರದಲ್ಲಿ ಸಂಸ್ಕರಿಸಿದ ಸಕ್ಕರೆಯ ಬದಲಿಗೆ ಇದರ ಬಳಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ.
  • ಖರ್ಜೂರವು ಪೌಷ್ಟಿಕಾಂಶದ ಅತ್ಯುತ್ತಮ ಮೂಲವಾಗಿದೆ. ಇದರ ಸೇವನೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಗುವಿಗೆ ಮಲಬದ್ಧತೆ ಬರುವುದಿಲ್ಲ.
  • ಜೀವಸತ್ವಗಳು, ಕಬ್ಬಿಣ, ಮೆಗ್ನೀಷಿಯಮ್, ಪೊಟ್ಯಾಸಿಯಮ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.

ಬಾದಾಮಿಯ ಪ್ರಯೋಜನ

  • ಬಾದಾಮಿಯು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ವಿಟಮಿನ್ ಇ, ಮೆಗ್ನೀಷಿಯಮ್, ಕ್ಯಾಲ್ಸಿಯಂ ಮತ್ತು ಆರೋಗ್ಯಕರ ಕೊಬ್ಬುಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಮಗುವಿನ ಬೆಳವಣಿಗೆಗೆ ಅವಶ್ಯಕವಾಗಿದೆ.
  • ಬಾದಾಮಿಯನ್ನು ಮಕ್ಕಳಿಗೆ ತಿನ್ನಿಸುವುದರಿಂದ ಅವರ ಮೆದುಳು ಚುರುಕಾಗುತ್ತದೆ. ಇದರಲ್ಲಿರುವ ರೈಬೋಫ್ಲಾವಿನ್ ಮತ್ತು ಎಲ್-ಕಾರ್ನಿಟೈನ್ ನಂತಹ ಪೋಷಕಾಂಶಗಳು ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ.
  • ಬಾದಾಮಿಯಲ್ಲಿ ಕ್ಯಾಲ್ಸಿಯಂ ಮತ್ತು ರಂಜಕವಿದೆ. ಇದು ಮಗುವಿನ ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.
  • ಬಾದಾಮಿಯು ಚಿಕ್ಕ ಮಕ್ಕಳಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ.
  • ಬಾದಾಮಿಯನ್ನು ಪುಡಿಮಾಡಿ ಮಕ್ಕಳಿಗೆ ನೀಡಿದರೆ ಅವರ ರೋಗನಿರೋಧಕ ಶಕ್ತಿ ಉತ್ತಮವಾಗಿರುತ್ತದೆ ಮತ್ತು ಅವರು ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ.

ಎಷ್ಟು ತಿಂಗಳಿನಿಂದ ಮಗುವಿಗೆ ನೀಡಬಹುದು

ಮಗು ಜನಿಸಿದ 6 ತಿಂಗಳ ನಂತರ ಮಗುವಿನ ಆಹಾರದಲ್ಲಿ ಬಾದಾಮಿ ಮತ್ತು ಖರ್ಜೂರವನ್ನು ಸೇರಿಸಬಹುದು. ಆದರೆ ನೀವು ಅದನ್ನು ಪುಡಿ ಅಥವಾ ಪೇಸ್ಟ್ ರೂಪದಲ್ಲಿ ಮಾತ್ರ ನೀಡಬೇಕು ಎಂಬುದನ್ನು ನೆನಪಿನಲ್ಲಿಡಿ. ಪೂರ್ತಿಯಾಗಿ ತಿನ್ನಿಸಿದರೆ ಅದು ಮಗುವಿನ ಗಂಟಲಿಗೆ ಸಿಲುಕಿಕೊಳ್ಳಬಹುದು.

ಬಾದಾಮಿ ಮತ್ತು ಖರ್ಜೂರದ ಪೇಸ್ಟ್​​ ಮಾಡುವ ವಿಧಾನ

ಬಾದಾಮಿ ಗಟ್ಟಿಯಾಗಿರುವುದರಿಂದ ಮೊದಲು ಒಂದರಿಂದ ಎರಡು ಬಾದಾಮಿಗಳನ್ನು ರಾತ್ರಿಯಿಡೀ ನೆನೆಸಿಡಿ. ಬೆಳಗ್ಗೆ ಅದನ್ನು ಸಿಪ್ಪೆ ತೆಗೆದು ಕಲ್ಲಿನ ಚಪ್ಪಡಿಗೆ ನೀರಿನಿಂದ ಉಜ್ಜಿ. ಈಗ ಈ ಪೇಸ್ಟ್​​ ಅನ್ನು ಪಾತ್ರೆಯಲ್ಲಿ ಪಕ್ಕಕ್ಕೆ ಇರಿಸಿ.ಅಂತೆಯೇ ಒಂದು ತುರಿಯುವ ಮಣೆ ಮೇಲೆ ಖರ್ಜೂರವನ್ನು ಪುಡಿಮಾಡಿ ಮತ್ತು ಬಾದಾಮಿ ಪೇಸ್ಟ್​​ನೊಂದಿಗೆ ಮಿಶ್ರಣ ಮಾಡಿ. ಈ ಪೇಸ್ಟ್​​ ಅನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮಕ್ಕಳಿಗೆ ತಿನ್ನಿಸುವುದರಿಂದ ಮಲಬದ್ಧತೆ ಸಮಸ್ಯೆ ಇರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net