ಮೆನೋಪಾಸ್‌ ಬಳಿಕ ಮಹಿಳೆಯರಿಗೆ ಡ್ರೈಐ ಸಿಂಡ್ರೋಮ್‌ ಕಾಡುವುದೇಕೆ?; ಪರಿಹಾರದ ಮಾಹಿತಿ ಇಲ್ಲಿದೆ | Health Tips

Untitled-design-5-1
Published on

ಋತುಬಂಧದ ನಂತರ ಮಹಿಳೆಯರಲ್ಲಿ ಡ್ರೈಐ ಸಿಂಡ್ರೋಮ್​​ ಸಮಸ್ಯೆ ಹೆಚ್ಚಾಗುತ್ತದೆ. ವಯಸ್ಸಾದಂತೆ ಎದುರಿಸುವ ಈ ಸಮಸ್ಯೆ ಬಗ್ಗೆ ಹಲವರಿಗೆ ಇದರ ಅರಿವಿರುವುದಿಲ್ಲ. ಮೆನೋಪಾಸ್‌ (ಋತುಬಂಧದ) ನಂತರ ಸರಿಸುಮಾರು 4 ರಲ್ಲಿ ಒಬ್ಬರು ಮಹಿಳೆಯರು ಡ್ರೈಐ ಸಿಂಡ್ರೋಮ್​​​ ಸಮಸ್ಯೆಗೆ ಒಳಗಾಗಿರುತ್ತಾರೆ. ಡ್ರೈಐ ಸಿಂಡ್ರೋಮ್​​​ ಪೆರಿಮೆನೋಪಾಸ್ ಹಂತದಲ್ಲಿ ಪ್ರಾರಂಭವಾಗುತ್ತದೆ. ಅಂದರೆ ಮಹಿಳೆಯ ದೇಹದಲ್ಲಿ ಹಾರ್ಮೋನ್ ಅಸಮತೋಲನ ಪ್ರಾರಂಭವಾದಾಗ ಎಂದರ್ಥ.

ಡ್ರೈಐ ಸಿಂಡ್ರೋಮ್​​ ಸಮಸ್ಯೆ ಮಹಿಳೆಯರಲ್ಲಿ ಪೆರಿಮೆನೋಪಾಸ್ ಅಥವಾ ಋತುಬಂಧದ ಸಮಯದಲ್ಲಿ ಅಂದರೆ 40 ರಿಂದ 50ನೇ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್​​ಗಳ ಸಮತೋಲನವು ಕ್ಷೀಣಿಸಲು ಪ್ರಾರಂಭಿಸುತ್ತದೆ. ದೇಹದಲ್ಲಿ ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಮತ್ತು ಆಂಡ್ರೊಜೆನ್ ಹಾರ್ಮೋನುಗಳ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆಂಡ್ರೊಜೆನ್ ಹಾರ್ಮೋನ್ ದೇಹದ ಎಲ್ಲಾ ಗ್ರಂಥಿಗಳು ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಆಂಡ್ರೊಜೆನ್ ಉತ್ಪಾದನೆಯು ಕಡಿಮೆಯಾದಾಗ ಕಣ್ಣಿನ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ಕಾರಣದಿಂದಾಗಿ, ಕಣ್ಣುಗಳಲ್ಲಿ ಕಣ್ಣೀರು ಬೇಗನೆ ಡ್ರೈ ಆಗುತ್ತದೆ. ಆದ್ದರಿಂದ ಡ್ರೈಐ ಸಿಂಡ್ರೋಮ್​​ ಚಿಕಿತ್ಸೆಯನ್ನು ಮೊದಲೇ ಮಾಡಬೇಕು.

ಡ್ರೈಐ ಸಿಂಡ್ರೋಮ್​​ ಸಮಸ್ಯೆ ಪತ್ತೆ ಹಚ್ಚುವುದು ಹೇಗೆ?: 

ಕಣ್ಣಿನ ಶುಷ್ಕತೆಯ ಸಮಸ್ಯೆ ಹೆಚ್ಚಾದಾಗ ರೋಗಿಯು ಯಾವಾಗಲೂ ಕಣ್ಣುಗಳಲ್ಲಿ ಏನೋ ಇದೆ ಎಂದು ಭಾವಿಸುತ್ತಾನೆ. ಈ ಕಾರಣದಿಂದಾಗಿ ಅನಾನುಕೂಲತೆ ಅನುಭವಿಸಬೇಕಾಗುತ್ತದೆ. ಕಣ್ಣುಗಳಲ್ಲಿ ಉರಿಯುವ ಸಂವೇದನೆ ಉಂಟಾಗುತ್ತದೆ. ಸಮಸ್ಯೆ ಹೆಚ್ಚಾದರೆ ಮತ್ತು ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಇದು ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ.

ಡ್ರೈಐ ಸಿಂಡ್ರೋಮ್​​ ಚಿಕಿತ್ಸೆ ಏನು?:

ಡ್ರೈಐ ಸಿಂಡ್ರೋಮ್​​ ಚಿಕಿತ್ಸೆಗಾಗಿ ಕೃತಕ ಕಣ್ಣೀರು ಅಂದರೆ ಅಸ್ವಾಭಾವಿಕ ಕಣ್ಣೀರನ್ನು ಕಣ್ಣಿನ ಹನಿಗಳು ಮತ್ತು ಕಣ್ಣಿನ ಜೆಲ್ ಮೂಲಕ ಬಳಸಲಾಗುತ್ತದೆ. ಕಣ್ಣಿನ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಸ್ಟೀರಾಯ್ಡ್ ಕಣ್ಣಿನ ಹನಿಗಳನ್ನು ಸಹ ನೀಡಲಾಗುತ್ತದೆ. ವಿಟಮಿನ್ ಎ, ಡಿ ಮತ್ತು ಬಿ12 ಪೂರಕಗಳನ್ನು ನೀಡಲಾಗುತ್ತದೆ. ಒಮೆಗಾ 3 ಕೊಬ್ಬಿನಾಮ್ಲಗಳನ್ನು ತೆಗೆದುಕೊಳ್ಳಲು ಹೇಳಲಾಗುತ್ತದೆ. ಈ ಪೂರಕಗಳು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಡ್ರೈಐ ಸಿಂಡ್ರೋಮ್​​ ಸಮಸ್ಯೆಯನ್ನು ತಪ್ಪಿಸುವ ಮಾರ್ಗ?:

ಋತುಬಂಧದ ನಂತರ ಡ್ರೈಐ ಸಿಂಡ್ರೋಮ್​​ ಸಮಸ್ಯೆಯನ್ನು ತಪ್ಪಿಸುವುದು ಕಷ್ಟ. ಆದರೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಕಣ್ಣುಗಳಿಗೆ ಸರಿಯಾದ ರಕ್ಷಣೆ ನೀಡುವ ಮೂಲಕ ಇದು ತ್ವರಿತವಾಗಿ ಸಂಭವಿಸುವುದನ್ನು ತಡೆಯಬಹುದು. ಡ್ರೈಐ ಸಿಂಡ್ರೋಮ್​​ ಸಮಸ್ಯೆ ಇರುವ ಮಹಿಳೆಯರು ಟಿವಿ, ಮೊಬೈಲ್​ ನೋಡುವ ಸಮಯವನ್ನು ಕಡಿಮೆ ಮಾಡಬೇಕು. ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ. 6 ರಿಂದ 8 ಗಂಟೆಗಳ ನಿದ್ದೆ ಮಾಡಬೇಕು. ನೀವು ದೀರ್ಘಕಾಲ ಎಸಿಯಲ್ಲಿ ಕೆಲಸ ಮಾಡುತ್ತಿದ್ದರೆ ಕಣ್ಣಿನ ರಕ್ಷಣೆಗಾಗಿ ಕನ್ನಡಕವನ್ನು ಧರಿಸಿ. ಬಿಸಿಲಿಗೆ ಹೋಗುವ ಮುನ್ನ ಸನ್ ಗ್ಲಾಸ್ ಧರಿಸಲು ಮರೆಯದಿರಿ. ವಿಟಮಿನ್ ಎ, ಡಿ ಮತ್ತು ಬಿ 12 ಸಮೃದ್ಧವಾಗಿರುವ ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿ. ಮನೆಮದ್ದುಗಳನ್ನು ಪ್ರಯತ್ನಿಸಿದ ನಂತರವೂ ನೀವು ಒಣ ಕಣ್ಣುಗಳಿಂದ ಬಳಲುತ್ತಿದ್ದರೆ, ನಂತರ ಕಣ್ಣಿನ ತಜ್ಞರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net