ಮೂತ್ರದಲ್ಲಿ ರಕ್ತ ಬರುವುದು ಕ್ಯಾನ್ಸರ್​ ಲಕ್ಷಣವೇ? ತಜ್ಞರು ಹೇಳುವುದೇನು? ಇಲ್ಲಿದೆ ಉಪಯುಕ್ತ ಮಾಹಿತಿ... Blood In Urine

Blood In Urine
Published on

Blood In Urine : ಕ್ಯಾನ್ಸರ್​ ಎಂಬ ಪದ ಕೇಳಿದರೆ ಸಾಕು ನಮ್ಮಲ್ಲಿ ಒಂದು ರೀತಿಯ ಆತಂಕ ಉಂಟಾಗುತ್ತದೆ. ಏಕೆಂದರೆ, ಕ್ಯಾನ್ಸರ್​ ಜೀವ ತೆಗೆಯುವ ಅತ್ಯಂತ ಅಪಾಯಕಾರಿ ಕಾಯಿಲೆ ಎಂದು ಹಲವರು ಭಾವಿಸಿದ್ದಾರೆ. ಇದು ನಿಜವೂ ಹೌದು. ಕ್ಯಾನ್ಸರ್​ ಅಂತಿಮ ಹಂತವನ್ನು ತಲುಪಿದರೆ ಗುಣಪಡಿಸುವುದು ತುಂಬಾನೇ ಕಷ್ಟ.

ರಕ್ತ ಕ್ಯಾನ್ಸರ್​ ಹಾಗೂ ಶ್ವಾಸಕೋಶ ಕ್ಯಾನ್ಸರ್ ಸೇರಿದಂತೆ​ ಅನೇಕ ರೀತಿಯ ಕ್ಯಾನ್ಸರ್‌ಗಳಿವೆ. ಈ ಕ್ಯಾನ್ಸರ್​ಗಳಲ್ಲಿ ವಿವಿಧ ಹಂತಗಳಿವೆ. ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ, ಸೂಕ್ತ ಚಿಕಿತ್ಸೆಯನ್ನು ನೀಡಿ ಶೇ. 100ರಷ್ಟು ಗುಣಪಡಿಸಬಹುದು. ಒಂದು ವೇಳೆ ಆರಂಭಿಕ ಹಂತದಲ್ಲಿ ಪತ್ತೆಯಾಗದೇ ಕೊನೆಯ ಹಂತದಲ್ಲಿ ಪತ್ತೆಯಾದರೆ ಬದುಕುವ ಸಾಧ್ಯತೆ ಶೇ. 100ರಲ್ಲಿ 99 ರಷ್ಟು ಕಡಿಮೆ.

ಇಲ್ಲಿ ಪ್ರಮುಖ ಸಮಸ್ಯೆ ಏನೆಂದರೆ ಈ ಕಾಯಿಲೆಯ ಸೋಂಕಿಗೆ ಒಳಗಾದ ಅನೇಕ ಜನರು, ವೈದ್ಯರು ಹೇಳುವುದನ್ನು ಸರಿಯಾಗಿ ಕೇಳುವುದಿಲ್ಲ. ಈ ರೋಗದ ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚಬಹುದಾದ ಕೆಲವು ಲಕ್ಷಣಗಳನ್ನು ರೋಗಿಗಳು ನಿರ್ಲಕ್ಷಿಸುತ್ತಾರೆ. ದೀರ್ಘಕಾಲದ ನೋವು, ದಿಢೀರ್​ ತೂಕ ನಷ್ಟ ಅಥವಾ ಹೆಚ್ಚಳ, ತುಂಬಾ ಆಯಾಸ, ಜ್ವರ ಮತ್ತು ರಾತ್ರಿ ಬೆವರುವುದು, ಚರ್ಮದ ಬಣ್ಣದಲ್ಲಿ ಬದಲಾವಣೆಗಳು, ನಿರಂತರ ಕೆಮ್ಮು ಅಥವಾ ಉಸಿರಾಟದ ತೊಂದರೆ, ದೇಹದ ಎಲ್ಲಿಯಾದರೂ ಊತ ಅಥವಾ ಗಡ್ಡೆಗಳು ಕ್ಯಾನ್ಸರ್​ನ ಲಕ್ಷಣಗಳಾಗಿವೆ.

ಇನ್ನು ಮೂತ್ರದಲ್ಲಿನ ರಕ್ತವು ಕೂಡ ಕ್ಯಾನ್ಸರ್‌ನ ಸಂಕೇತ ಎಂದು ಕೆಲವರು ನಂಬುತ್ತಾರೆ. ಆದರೆ, ತಜ್ಞರು ಈ ವಾದವನ್ನು ತಿರಸ್ಕರಿಸುತ್ತಿದ್ದಾರೆ. ಮೂತ್ರದಲ್ಲಿ ರಕ್ತ ಬರಲು ಹಲವು ಕಾರಣಗಳಿವೆ. ಅದರಲ್ಲಿ ಬಹು ಮುಖ್ಯ ಕಾರಣ ಮೂತ್ರಪಿಂಡದ ಕಲ್ಲುಗಳು. ಕಿಡ್ನಿ ಸ್ಟೋನ್​ ಜಾರಿ ಮೂತ್ರನಾಳದಲ್ಲಿ ಸಿಲುಕಿಕೊಂಡಾಗ, ಮೂತ್ರನಾಳದ ಸೋಂಕು ಉಂಟಾದಾಗ, ಉರಿಯೂತವಾದಾಗ ಕೆಲವೊಮ್ಮೆ ರಕ್ತ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೂತ್ರಪಿಂಡದಿಂದ ಬಂದ ಕಲ್ಲು ಮೂತ್ರನಾಳವನ್ನು ಪ್ರವೇಶಿಸಿದಾಗ, ಮೂತ್ರದಲ್ಲಿ ರಕ್ತವೂ ಕಾಣಿಸಿಕೊಳ್ಳುತ್ತದೆ. ಮೂತ್ರಪಿಂಡದಿಂದ ಮೂತ್ರಕೋಶದವರೆಗೆ ಎಲ್ಲಿಯಾದರೂ ಗೆಡ್ಡೆ ಇದ್ದರೂ ಮೂತ್ರದಲ್ಲಿ ರಕ್ತವನ್ನು ಉಂಟುಮಾಡುತ್ತದೆ. ಸ್ಟೆಂಟ್ ಅಳವಡಿಸಿದ ಜನರಲ್ಲಿಯೂ ರಕ್ತವೂ ಕಾಣಿಸಿಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಕ್ಯಾನ್ಸರ್​ ಇದ್ದಾಗಲೇ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ. ಆದರೆ, ಇದು ತುಂಬಾ ಅಪರೂಪವಾಗಿದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net