ಆನ್‌ಲೈನ್​ನಲ್ಲಿ ಚೀಸ್​​​​ ಖರೀದಿಸುತ್ತಿದ್ದೀರಾ?; ಹಾಗಾದ್ರೆ ನೀವು ತಪ್ಪದೇ ತಿಳಿಯಬೇಕಾದ ವಿಷಯ ಇದು | Health Tips

Untitled design - 2024-10-25T195943.510
Published on

ಭಾರತದಲ್ಲಿ ಚೀಸ್​​ ಅನ್ನು ವ್ಯಾಪಕವಾಗಿ ಸೇವಿಸಲಾಗುತ್ತದೆ. ಹಾಲಿನಿಂದ ತಯಾರಿಸಿದ ಈ ಆಹಾರದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಅನೇಕ ಜೀವಸತ್ವಗಳು ಮತ್ತು ಖನಿಜಗಳಿವೆ. ಇದರಿಂದ ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ, ಆಹಾರಪ್ರಿಯರ ಸಾಕಷ್ಟು ಇಷ್ಟುಪಟ್ಟು ತಿನ್ನುತ್ತಾರೆ. ಇತ್ತೀಚೆಗೆ ಆನ್‌ಲೈನ್ ಫುಡ್ ಡೆಲಿವರಿ ಕಂಪನಿಗಳು ನಕಲಿ ಚೀಸ್​ ಅನ್ನು ಮಾರಾಟ ಮಾಡುತ್ತಿವೆ ಎಂದು ಸಾಮಾಜಿಕ ಜಾಲಾಣದಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಅನೇಕರಿಗೆ ತಿಳಿದಲ್ಲ.

ಈ ಚೀಸ್ ಮಾರಾಟ ಮಾಡಲು ಎಫ್‌ಎಸ್‌ಎಸ್‌ಎಐ ಅನುಮತಿ ನೀಡುತ್ತಿದೆಯಾದರೂ, ನೀವು ತಿನ್ನುತ್ತಿರುವ ಚೀಸ್ ಅಸಲಿಯೋ ಅಥವಾ ನಕಲಿಯೋ ಎಂಬುದು ಮುಖ್ಯವಾಗುತ್ತದೆ. ನಕಲಿಯಾಗಿದ್ದಾರೆ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುವುದಂತೂ ಗ್ಯಾರಂಟಿ. ಆನ್‌ಲೈನ್ ಆಹಾರ ವಿತರಣಾ ಮಾಡುವ ಕೆಲವು ಕಂಪನಿಗಳು ಸಸ್ಯಜನ್ಯ ಎಣ್ಣೆಯಿಂದ ತಯಾರಿಸಿದ ನಕಲಿ ಚೀಸ್ ಅನ್ನು ಮಾರಾಟ ಮಾಡುತ್ತಿದೆ ಎನ್ನಲಾಗಿದೆ.

ಅನಲಾಗ್ ಚೀಸ್ ತಯಾರಿಸುವುದು ಹೇಗೆ

ಅನಲಾಗ್ ಡೈರಿ ಉತ್ಪನ್ನಗಳನ್ನು ನಿಜವಾದ ಡೈರಿ ಉತ್ಪನ್ನಗಳು ಎಂದು ಕರೆಯಲಾಗುವುದಿಲ್ಲ ಏಕೆಂದರೆ ಅವುಗಳು ಹಾಲಿನಿಂದ ಮಾಡಲ್ಪಟ್ಟಿಲ್ಲ. ಅನಲಾಗ್ ಪನೀರ್ ಅನ್ನು ಇತರ ಕೊಬ್ಬುಗಳನ್ನು ಬಳಸಿಕೊಂಡು ಅಸಲಿ ಚೀಸ್​​​​ ಅನ್ನು ಹೋಲುವಂತೆ ತಯಾರಿಸಲಾಗುತ್ತದೆ. ಇದನ್ನು ತಯಾರಿಸಲು ಸಾಮಾನ್ಯವಾಗಿ ಸಸ್ಯಜನ್ಯ ಎಣ್ಣೆಯನ್ನು ಬಳಸಲಾಗುತ್ತದೆ ಎಂಬುದು FSSAI ನೀಡಿರುವ ಮಾಹಿತಿ ಆಗಿದೆ.

ನಕಲಿ ಚೀಸ್​​ನಿಂದ ಆಗುವ ಅನಾನುಕೂಲಗಳು

ಸಸ್ಯಜನ್ಯ ಎಣ್ಣೆಯು ದ್ರವ ರೂಪದಲ್ಲಿರುತ್ತದೆ. ಆದ್ದರಿಂದ ಘನ ಆಹಾರ ಉತ್ಪನ್ನವನ್ನು ತಯಾರಿಸಲು ಹೈಡ್ರೋಜನೀಕರಿಸಲಾಗುತ್ತದೆ. ಈ ಎಣ್ಣೆ ನಿಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದನ್ನು ಸೇವಿಸುವ ಜನರು ಮಧುಮೇಹ, ಹೃದ್ರೋಗ, ಹೃದಯಾಘಾತ, ಬ್ರೈನ್ ಸ್ಟ್ರೋಕ್, ಉರಿಯೂತದಂತಹ ಅಪಾಯಕಾರಿ ಸಮಸ್ಯೆಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ನಕಲಿ ಚೀಸ್ ಅನ್ನು ಗುರುತಿಸುವುದೇಗೆ?

  • ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಚೀಸ್ ಖರೀದಿಸುವಾಗ, ಅದರ ಲೇಬಲ್ ಅನ್ನು ಎಚ್ಚರಿಕೆಯಿಂದ ಓದಿ. ಅದರಲ್ಲಿ ಎಲ್ಲೂ ಸಸ್ಯಜನ್ಯ ಎಣ್ಣೆ, ತಾಳೆ ಎಣ್ಣೆ ಅಥವಾ ಇನ್ನಾವುದೇ ಕೊಬ್ಬಿನ ಉಲ್ಲೇಖವಿರಬಾರದು.
  • ಕೆಲವು ಕಂಪನಿಗಳು ತಮ್ಮ ಚೀಸ್ ಅನ್ನು ಅನಲಾಗ್ ಎಂದು ಸ್ಪಷ್ಟವಾಗಿ ಟ್ಯಾಗ್ ಮಾಡುತ್ತವೆ
  • ನಕಲಿ ಚೀಸ್‌ನ ರುಚಿ ಮತ್ತು ವಿನ್ಯಾಸವು ಮೂಲಕ್ಕಿಂತ ಭಿನ್ನವಾಗಿದೆ. ತಿನ್ನುವಾಗ ಗಮನ ಕೊಡಿ
  • ನೀವು ಆನ್‌ಲೈನ್‌ನಲ್ಲಿ ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡುತ್ತಿದ್ದರೆ, ಆಹಾರ ಪದಾರ್ಥಗಳ ಬಗ್ಗೆ ಉಲ್ಲೀಖಿಸಿರುವ ಮಾಹಿತಿಯನ್ನು ಓದಿ
  • ಅನಲಾಗ್ ಚೀಸ್ ಅನ್ನು ನೀವೇ ಪರಿಶೀಲಿಸಬಹುದು
  • ಕೆಲವು ಗಂಟೆಗಳ ಕಾಲ ಆ ಚೀಸ್​ ಅನ್ನು ನೀರಿನಲ್ಲಿ ನೆನೆಸಿ. ಅದರಲ್ಲಿ ಎಣ್ಣೆಯ ಕಲಬೆರಕೆ ಇದ್ದರೆ ಚೀಸ್ ಸುತ್ತಲೂ ಎಣ್ಣೆಯ ಹನಿಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ
  • ನೀವು ಅದನ್ನು ಫ್ರಿಜ್‌ನಲ್ಲಿ ಕೆಲವು ಗಂಟೆಗಳ ಕಾಲ ಫ್ರೀಜ್ ಮಾಡಲು ಸಹ ಪ್ರಯತ್ನಿಸಬಹುದು. ರೆಫ್ರಿಜರೇಟರ್‌ನಲ್ಲಿ ಇರಿಸಿದಾಗ ನಿಜವಾದ ಅಸಲಿ ಚೀಸ್ ಗಟ್ಟಿಯಾಗಲು ಪ್ರಾರಂಭಿಸುತ್ತದೆ
  • ತೈಲದಿಂದ ಮಾಡಿದ ನಕಲಿ ಚೀಸ್ ರೆಫ್ರಿಜಿರೇಟರ್​ನಲ್ಲಿ ಇರಿಸಿದಾಗ ಮೃದುವಾಗಿರುತ್ತದೆ. ಅದರ ಮೇಲೆ ಮೃದುವಾದ ಪದರವನ್ನು ರಚಿಸಬಹುದು

ನಿಜವಾದ ಚೀಸ್‌ನ ಗುರುತು ಏನು?

FSSAI ಪ್ರಕಾರ, ಪನೀರ್‌ನಲ್ಲಿ ಪಿಷ್ಟದ ಕಲಬೆರಕೆ ಇರಬಹುದು. ಅದನ್ನು ಪರಿಶೀಲಿಸಲು ಚೀಸ್ ಅನ್ನು ಸಂಪೂರ್ಣವಾಗಿ ತುರಿ ಮಾಡಿ ಅದರಲ್ಲಿ 2-3 ಮಿಲಿ ತೆಗೆದುಕೊಂಡು ಅದನ್ನು 5 ಮಿಲಿ ನೀರಿನಲ್ಲಿ ಕುದಿಸಿ. ನಂತರ ಅದನ್ನು ತಣ್ಣಗಾಗಿಸಿ ಮತ್ತು ಅಯೋಡಿನ್ ಟಿಂಚರ್ನ 2-3 ಹನಿಗಳನ್ನು ಸೇರಿಸಿ. ಅದು ನೀಲಿ ಬಣ್ಣಕ್ಕೆ ತಿರುಗಿದರೆ ಅದರೊಳಗೆ ಪಿಷ್ಟದ ಕಲಬೆರಕೆ ಇತ್ತು ಎಂದರ್ಥ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net