ಹಾರ್ಮೋನ್ ಬದಲಾವಣೆಯಿಂದ ಕ್ಯಾಂಕರ್ ಹುಣ್ಣು ಆಗುವ ಸಾಧ್ಯತೆ ಹೆಚ್ಚು; ಉಪಯುಕ್ತ ಮಾಹಿತಿ ನಿಮಗಾಗಿ | Health Tips

Untitled design - 2024-10-23T190920.282
Published on

ಕ್ಯಾಂಕರ್ ಹುಣ್ಣು ಬಾಯಿಯಲ್ಲಿ ಬರುವ ಒಂದು ರೀತಿಯ ಹುಣ್ಣು. ಇವುಗಳು ತುಂಬಾ ಕಿರಿಕಿರಿಯನ್ನು ಉಂಟುಮಾಡಬಹುದು ಮತ್ತು ಸಾಕಷ್ಟು ನೋವನ್ನು ಉಂಟುಮಾಡಬಹುದು. ನಿಮ್ಮ ಬಾಯಿಯಲ್ಲಿ ಸಣ್ಣ ಗಾಯವಾಗಿದ್ದರೆ ಅಥವಾ ನೀವು ಹೆಚ್ಚು ಆಮ್ಲೀಯ ಆಹಾರವನ್ನು ಸೇವಿಸಿದರೆ ಈ ಹುಣ್ಣುಗಳು ಉಂಟಾಗುತ್ತವೆ. ಆರಂಭದಲ್ಲಿ ಈ ಗುಳ್ಳೆ ಬಿಳಿ ಅಥವಾ ಹಳದಿ ಬಣ್ಣದಲ್ಲಿರುತ್ತದೆ. ಈ ಸಣ್ಣ ಗುಳ್ಳೆಗಳು ನಂತರ ಒಂದು ಇಂಚಿನ ವ್ಯಾಸಕ್ಕೆ ಹರಡಬಹುದು. ಬಾಯಿಯ ಹೊರತಾಗಿ ನೀವು ಅದನ್ನು ತುಟಿಗಳು ಮತ್ತು ನಾಲಿಗೆಯ ಮೇಲೂ ಹೊಂದಬಹುದು.(Health Tips)‘

ಕ್ಯಾಂಕರ್​​ನಲ್ಲಿನ ವಿಧಗಳು

ಸಾಮಾನ್ಯ ಕ್ಯಾಂಕರ್​​​ ಹುಣ್ಣುಗಳು

ಇವು ಸಾಮಾನ್ಯ ಹುಣ್ಣುಗಳು ಮತ್ತು ಅವುಗಳು ವರ್ಷದಲ್ಲಿ 3 ರಿಂದ 4 ಬಾರಿ ಬರುತ್ತವೆ. ಅವರಿಗೆ ಚಿಕಿತ್ಸೆಯ ಅಗತ್ಯವಿರುವುದಿಲ್ಲ ಮತ್ತು ಸಾಮಾನ್ಯವಾಗಿ ಒಂದು ವಾರದ ನಂತರ ಸರಿ ಹೋಗುತ್ತದೆ.

ಕಾಂಪ್ಲೆಕ್ಸ್ ಕ್ಯಾಂಕರ್ ಹುಣ್ಣುಗಳು

ಇವುಗಳು ಕಡಿಮೆ ಸಾಮಾನ್ಯ ಮತ್ತು ಹೆಚ್ಚು ಕಾಣಿಸುವುದಿಲ್ಲ. ಈ ಹುಣ್ಣುಗಳು ಬಂದರೆ ನೀವು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಮೊದಲು ಬಂದವರಿಗೆ ಮತ್ತೆ ಮತ್ತೆ ಬರುತ್ತದೆ.

ಕ್ಯಾಂಕರ್​​ನ ಲಕ್ಷಣ

ನಿಮ್ಮ ಬಾಯಿಯೊಳಗೆ ಒಂದು ಅಥವಾ ಹೆಚ್ಚಿನ ಹುಣ್ಣುಗಳನ್ನು ಹೊಂದಿರುವುದು. ಈ ಗುಳ್ಳೆಯು ನಿಮ್ಮ ಬಾಯಿಯಲ್ಲಿ, ನಾಲಿಗೆಯಲ್ಲಿ, ಬಾಯಿಯ ಮೇಲ್ಭಾಗದಲ್ಲಿ ಅಥವಾ ತುಟಿಗಳಲ್ಲಿ ಎಲ್ಲಿಯಾದರೂ ಬರಬಹುದು. ಸುಡುವ ಸಂವೇದನೆಯ ಭಾವನೆ. ಬಿಳಿ, ಬೂದು ಅಥವಾ ಹಳದಿ ಬಣ್ಣದ ಸಣ್ಣ ಮತ್ತು ದುಂಡಗಿನ ಹುಣ್ಣುಗಳು ಸುತ್ತಲು ಕೆಂಪಾಗಿರುತ್ತದೆ. ಕೆಲವೊಮ್ಮೆ ನೀವು ಜ್ವರ ಅಥವಾ ದೇಹದಲ್ಲಿ ಸೋಮಾರಿತನದ ಭಾವನೆಯನ್ನು ಅನುಭವಿಸಬಹುದು.

ಕ್ಯಾಂಕರ್​ಗೆ ಕಾರಣ

ಈ ಹುಣ್ಣುಗಳು ಉಂಟಾಗಲು ಹಲವು ಕಾರಣಗಳಿರಬಹುದು. ನೀವು ಹೆಚ್ಚು ಒತ್ತಡವನ್ನು ತೆಗೆದುಕೊಂಡರೆ ಅಥವಾ ಹೆಚ್ಚು ಆಮ್ಲೀಯ ಆಹಾರವನ್ನು ಸೇವಿಸಿದರೆ ಈ ಹುಣ್ಣು ಬರುತ್ತದೆ. ನೀವು ಬಹಳಷ್ಟು ಹುಳಿ ಪದಾರ್ಥಗಳನ್ನು ತಿಂದರೂ ಸಹ ಸುಲಭವಾಗಿ ಬಹುಬೇಗನೆ ಬರುತ್ತದೆ. ಐಬುಪ್ರೊಫೇನ್‌ನಂತಹ ಉರಿಯೂತದ ಔಷಧಗಳನ್ನು ಸೇವಿಸಿದರೆ ಈ ಗುಳ್ಳೆಗಳು ಉಂಟಾಗುತ್ತವೆ.

ಸಾಮಾನ್ಯವಾಗಿ ಈ ಹುಣ್ಣು ಒಂದರಿಂದ ಎರಡು ವಾರಗಳಲ್ಲಿ ತಾನಾಗಿಯೇ ಗುಣವಾಗುತ್ತವೆ. ನಿಮಗೆ ಹೆಚ್ಚಿನ ಸಮಸ್ಯೆಗಯಿದ್ದರೆ ವೈದ್ಯರ ಸಲಹೆ ಪಡೆದು ಔಷಧಗಳನ್ನು ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net