

ಅಂದವಾಗಿ ಕಾಣವುದು ಎಲ್ಲರ ಇಷ್ಟವಾಗಿರುತ್ತದೆ. ಹೊಳೆಯುವ ಮತ್ತು ಮೃದು ತ್ವಚೆ ಪಡೆಯುವ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ. ಇಲ್ಲಿ ನಾವು ನಿಮಗೆ ಮನೆಯಲ್ಲೇ ಸಿದ್ಧಪಡಿಸಿ ಬಳಸಬಹುದಾದ ಫೇಸ್ಪ್ಯಾಕ್ ಕುರಿತು ಹೇಳುತ್ತಿದ್ದೇವೆ. ಕಡ್ಲೆಹಿಟ್ಟು, ಮುಲ್ತಾನಿ ಮಿಟ್ಟಿ ಅಥವಾ ಶ್ರೀಗಂಧದಿಂದ ಮಾಡಿಕ ಫೇಸ್ಪ್ಯಾಕ್ ಅನ್ನು ಬಳಸಿರುತ್ತೀರಿ. ಆದರೆ ನಿಮ್ಮ ತ್ವಚೆಯನ್ನು ಕಾಂತಿಯುತಗೊಳಿಸಲು ಅಕ್ಕಿಹಿಟ್ಟನ್ನು ಬಳಸಬಹುದು ಎಂಬುದು ನಿಮಗೆ ತಿಳಿದಿದೆಯೇ. ಇದನ್ನೊಮ್ಮೆ ಬಳಸಿದರೆ ಮೊದಲು ಏಕೆ ಇದನ್ನು ಟ್ರೈ ಮಾಡಲಿಲ್ಲ ಎಂದು ನಿಮಗೆ ನೀವೆ ಅಂದುಕೊಳ್ಳುತ್ತೀರಿ.(Health tips)
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟು, ಅಲೋವೆರಾ ಜೆಲ್ ಮತ್ತು ರೋಸ್ ವಾಟರ್ ಹಾಕಿ ಚೆನ್ನಾಗಿ ಕಲಸಿ. ಇದರ ನಂತರ ಫೇಸ್ಪ್ಯಾಕ್ ಅನ್ನು ಮೃದುವಾಗಿಸಲು. ಹಸಿ ಹಾಲು ಮತ್ತು ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಅಗತ್ಯಕ್ಕೆ ಅನುಗುಣವಾಗಿ ಸೇರಿಸಿ ಮತ್ತು ಎರಡನ್ನೂ ಮಿಶ್ರಣ ಮಾಡಿ. ಈಗ ಫೇಸ್ ಪ್ಯಾಕ್ ಸಿದ್ಧವಾಗಿದೆ.
ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಮುಖದ ಮೇಲೆ ಇರಿಸಿ ನಂತರ ಸಾಮಾನ್ಯ ನೀರಿನಿಂದ ಮುಖವನ್ನು ತೊಳೆಯಿರಿ. ರಾತ್ರಿ ಮಲಗುವ ಮೊದಲು ಈ ಫೇಸ್ಪ್ಯಾಕ್ ಅನ್ನು ಬಳಸಿ. ಬಳಿಕ ಯಾವುದಾದರೂ ಮಾಯಿಶ್ಚರೈಸರ್ ಅಪ್ಲೈ ಮಾಡುವುದನ್ನು ಮರೆಯಬೇಡಿ. ನಿಮ್ಮ ಚರ್ಮವು ಸೂಕ್ಷ್ಮವಾಗಿದ್ದರೆ ಅಥವಾ ನಿಮಗೆ ಯಾವುದೇ ರೀತಿಯ ಅಲರ್ಜಿ ಇದ್ದರೆ ಮೊದಲು ಚರ್ಮದ ತಜ್ಞರೊಂದಿಗೆ ಮಾತನಾಡಿ ನಂತರ ಈ ಫೇಸ್ಪ್ಯಾಕ್ ಉಪಯೋಗಿಸಿ.