ಕೊಲೆಸ್ಟ್ರಾಲ್​​ & ರಕ್ತದೊತ್ತಡ ನಿಯಂತ್ರಿಸಲು ಈ ಎರಡೇ ಪದಾರ್ಥ ಸಾಕು; ನಿಮಗಾಗಿ Health Tips

blank

ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಪ್ರಸ್ತುತ ಅನೇಕರನ್ನು ಪೀಡಿಸುತ್ತಿರುವ ಕಾಯಿಲೆಯಾಗಿದೆ. ಈ ಎರಡು ಕಾಯಿಲೆಗೆ ಜೀವನದುದ್ದಕ್ಕೂ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಬಹುದು. ಆದರೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡಕ್ಕೆ ಅನೇಕ ಮನೆಮದ್ದು ಮತ್ತು ಆಯುರ್ವೇದದಲ್ಲಿ ಪರಿಹಾರಗಳಿವೆ. ಅದರಲ್ಲಿ ಒಂದನ್ನು ಇಲ್ಲಿ ತಿಳಿಸಲಾಗಿದೆ.(Health Tips)

ಇದನ್ನು ಓದಿ: Black Eye | ಕಣ್ಣಿನ ಸುತ್ತಲಿನ ಕಪ್ಪು ಕಲೆಗಳು ಏನನ್ನೂ ಸೂಚಿಸುತ್ತದೆ; ನಿರ್ಲಕ್ಷಿಸಿದ್ರೆ ದೃಷ್ಟಿ ಕಳೆದುಕೊಳ್ಳುವುದು ಗ್ಯಾರಂಟಿ

ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನಿಮ್ಮ ಅಡುಗೆ ಮನೆಯಲ್ಲಿರುವ ಈ ಎರಡು ಪದಾರ್ಥಗಳೆ ಸಾಕು. ಖರ್ಜೂರ ಮತ್ತು ಬೆಳ್ಳುಳ್ಳಿ ಈ ಎರಡು ಪದಾರ್ಥಗಳು ಬೇಕಾಗುತ್ತದೆ ಎಂದು ಆಯುರ್ವೇದ ತಜ್ಞರು ಹೇಳಿದ್ದಾರೆ.

ಖರ್ಜೂರದ ಪ್ರಯೋಜನ

  • ಅಧಿಕ ರಕ್ತದೊತ್ತಡ ಇರುವವರಿಗೆ ಖರ್ಜೂರ ಒಳ್ಳೆಯದು ಏಕೆಂದರೆ ಅವುಗಳಲ್ಲಿ ಪೊಟ್ಯಾಸಿಯಮ್ ಮತ್ತು ಸೋಡಿಯಂ ಕಡಿಮೆ ಇರುತ್ತದೆ. ಪೊಟ್ಯಾಸಿಯಮ್ ದೇಹದಿಂದ ಸೋಡಿಯಂ ಅನ್ನು ತೆಗೆದುಹಾಕುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಡಿಮೆ ಸೋಡಿಯಂ ಅಂಶದಿಂದಾಗಿ ಇದು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಖರ್ಜೂರದಲ್ಲಿರುವ ಫೈಬರ್ ಕೊಲೆಸ್ಟ್ರಾಲ್​ನೊಂದಿಗೆ ಬಂಧಿಸುತ್ತದೆ ಮತ್ತು ರಕ್ತದಲ್ಲಿ ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿರುವ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿ ಕಂಡುಬರುವ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟ್ರೈಗ್ಲಿಸರೈಡ್‌ಗಳು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಬೆಳ್ಳುಳ್ಳಿ ಪ್ರಯೋಜನ

  • ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
  • ಕೀಲು ನೋವನ್ನು ಕಡಿಮೆ ಮಾಡುತ್ತದೆ.
  • ಕೊಲೆಸ್ಟ್ರಾಲ್ ಅನ್ನು ಸುಧಾರಿಸುತ್ತದೆ.
  • ಕೆಮ್ಮು ಮತ್ತು ಶೀತವನ್ನು ನಿವಾರಿಸುತ್ತದೆ.
  • ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಮೆದುಳಿನ ಕಾರ್ಯವನ್ನು ವೇಗಗೊಲಿಸುತ್ತದೆ.
  • ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ಮೂಳೆಯ ಬಲ ಹೆಚ್ಚಿಸುತ್ತದೆ.

ಸೇವಿಸುವ ವಿಧಾನ ಹೇಗೆ?

ಖರ್ಜೂರವನ್ನು ಸೀಳಿ ಮಧ್ಯದಲ್ಲಿ ಬೆಳ್ಳುಳ್ಳಿಯನ್ನು ಇಟ್ಟು (ಬೆಳ್ಳುಳ್ಳು ಸ್ಟಫ್ಡ್​​ ಖರ್ಜೂರ) ಪ್ರತಿದಿನ ಬೆಳಗ್ಗೆ ಅಥವಾ ಊಟಕ್ಕೆ 30-45 ನಿಮಿಷಗಳ ಮೊದಲು ತಿನ್ನಿರಿ. ರಕ್ತದೊತ್ತಡವನ್ನು ನಿಯಂತ್ರಿಸಲು ಇದನ್ನು ಪ್ರತಿನಿತ್ಯ 21 ದಿನಗಳವರೆಗೆ ತೆಗೆದುಕೊಳ್ಳಿ ಮತ್ತು ನಂತರ ನಿಮ್ಮ ಬಿಪಿಯನ್ನು ಪರೀಕ್ಷಿಸಿ. ಔಷಧಗಳನ್ನು ತೆಗೆದುಕೊಳ್ಳತ್ತಿದ್ದರೆ ಇದನ್ನು ಬಳಸುವ ಮುನ್ನ ವೈದ್ಯರನ್ನು ಒಮ್ಮೆ ಸಂಪರ್ಕಿಸಿ.

ಹೊಟ್ಟೆಯಲ್ಲಿಯೂ ಮೈಗ್ರೇನ್​​ ನೋವು ಬರುತ್ತದೆ; ನಿಮಗಿದು ತಿಳಿದಿದೆಯೇ? | Health Tips

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…