ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಇಬ್ಬರಿಗೂ ತಮ್ಮ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಪ್ರಸಕ್ತ ಜೀವನಶೈಲಿ, ಧೂಳು, ಒತ್ತಡ ಇದರಿಂದಾಗಿ ಕೂದಲು ಉದುರಿವಿಕೆ ಎಂಬುದು ದೊಡ್ಡ ಸಮಸ್ಯೆಯಾಗಿದೆ. ನಾವು ಸುಂದರವಾಗಿ ಕಾಣಲು ಕೂದಲಿನದ್ದು ಬಹುಪಾಲು ಕೊಡುಗೆ ಇರುತ್ತದೆ.
ಇದನ್ನು ಓದಿ: ತುಪ್ಪ ಸೇವಿಸಿದರೆ ಪಿರಿಯಡ್ಸ್ ನೋವು ಇರುವುದಿಲ್ಲವೇ; ತಜ್ಞರು ಹೇಳೋದೇನು? | Health Tips
ಕೂದಲಿನ ಆರೈಕೆ ವಿಚಾರಕ್ಕೆ ಬಂದಾಗ ನೈಸರ್ಗಿಕ ಪದಾರ್ಥಗಳನ್ನು ಬಳಸುವುದು ಅತ್ಯುತ್ತಮ ಮಾರ್ಗವಾಗಿದೆ. ಅಲೋವೆರಾ ಮತ್ತು ಬೆಟ್ಟದ ನೆಲ್ಲಿಕಾಯಿ ಅನೇಕರು ಕೂದಲಿನ ಆರೈಕೆಗಾಗಿ ಇದನ್ನು ಬಳಸಲುತ್ತಾರೆ. ಈ ಎರಡು ಕೂದಲಿಗೆ ಅದ್ಭುತವಾದ ವಸ್ತುಗಳು. ಆಯುರ್ವೇದದಲ್ಲಿ ಈ ಎರಡಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕೂದಲಿನ ಅಗತ್ಯಕ್ಕೆ ಅನುಗುಣವಾಗಿ ಇವುಗಳಲ್ಲಿ ಯಾವುದಾದರೂ ಒಂದನ್ನು ಬಳಸಬಹುದು. ಆದರೆ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಗೊಂದಲ ನಿಮ್ಮಲ್ಲಿದೆಯೇ. ಹಾಗಾದ್ರೆ ನಿಮಗಾಗಿಯೇ ಈ ಮಾಹಿತಿ.
ಆಲೋವೆರಾ ಬಳಸುವುದರಿಂದಾಗುವ ಪ್ರಯೋಜನ
- ಅಲೋವೆರಾವನ್ನು ನೈಸರ್ಗಿಕ ಮಾಯಿಶ್ಚರೈಸರ್ ಎಂದು ಪರಿಗಣಿಸಲಾಗುತ್ತದೆ. ಅಲೋವೆರಾ ಎಲೆಗಳು ಪೌಷ್ಠಿಕಾಂಶ ಮತ್ತು ನೀರನ್ನು ಒಳಗೊಂಡಿರುವ ಜೆಲ್ ತರಹದ ವಸ್ತುವನ್ನು ಹೊಂದಿರುತ್ತವೆ. ಇದು ನೆತ್ತಿಯನ್ನು ಹೈಡ್ರೀಕರಿಸುತ್ತದೆ. ಇದರಿಂದ ಕೂದಲು ಮೃದು, ರೇಷ್ಮೆಯಂತಹ, ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡುತ್ತದೆ.
- ಅಲೋವೆರಾದಲ್ಲಿ ಜೀವಸತ್ವಗಳು (ಎ, ಸಿ, ಇ, ಬಿ12), ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಿವೆ. ಇದು ನಿಮ್ಮ ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಕೂದಲು ಸ್ಟ್ರಾಂಗ್ ಮತ್ತು ಆರೋಗ್ಯಕರವಾಗಿರುತ್ತದೆ.
ಬೆಟ್ಟದ ನೆಲ್ಲಿಕಾಯಿ ಬಳಕೆಯಲ್ಲಿನ ಪ್ರಯೋಜನಗಳು
- ಬೆಟ್ಟದ ನೆಲ್ಲಿಕಾಯಿಯನ್ನು ಕೂದಲಿಗೆ ಅತ್ಯುತ್ತಮವಾದ ಸೂಪರ್‌ಫುಡ್ ಎಂದು ಪರಿಗಣಿಸಲಾಗಿದೆ. ಬೆಟ್ಟದ ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ, ಖನಿಜಾಂಶಗಲು ಮತ್ತು ಟ್ಯಾನಿನ್‌ಗಳು ಕೂದಲಿಗೆ ಪೋಷಣೆ ನೀಡುತ್ತವೆ. ಬೆಟ್ಟದ ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಕೂದಲು ಒಡೆಯುವುದನ್ನು ತಡೆಯುತ್ತದೆ.
- ಬೆಟ್ಟದ ನೆಲ್ಲಿಕಾಯಿ ಕೂದಲು ಬೆಳೆಯಲು ಹೆಸರುವಾಸಿಯಾಗಿದೆ. ಬೆಟ್ಟದ ನೆಲ್ಲಿಕಾಯಿ ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೂದಲು ತ್ವರಿತವಾಗಿ ದಪ್ಪವಾಗಿರುತ್ತದೆ ಮತ್ತು ಉದ್ದವಾಗುತ್ತದೆ. ಇದಲ್ಲದೆ ಕಪ್ಪು ಕೂದಲಿನ ರಹಸ್ಯವೂ ಬೆಟ್ಟದ ನೆಲ್ಲಿಕಾಯಿ ಆಗಿದೆ.
ಇದೆರಡರಲ್ಲಿ ಯಾವುದು ಉತ್ತಮ?
- ಬೆಟ್ಟದ ನೆಲ್ಲಿಕಾಯಿ ಮತ್ತು ಅಲೋವೆರಾ ಎರಡೂ ವಿಭಿನ್ನ ಪ್ರಯೋಜನಗಳನ್ನು ಹೊಂದಿವೆ. ಈಗ ನಿಮಗೆ ಯಾವುದು ಉತ್ತಮ ಅದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ.
- ಕೂದಲಿನ ಬೆಳವಣಿಗೆಗೆ ಬೆಟ್ಟದ ನೆಲ್ಲಿಕಾಯಿ ಉತ್ತಮವಾಗಿದೆ. ಇದರಲ್ಲಿ ವಿಟಮಿನ್ ಸಿ ಇದ್ದು ಕೂದಲು ದಟ್ಟವಾಗಿ ಮತ್ತು ಬಲವಾಗಿ ಮಾಡುತ್ತದೆ. ಬೆಟ್ಟದ ನೆಲ್ಲಿಕಾಯಿ ಕೂದಲನ್ನು ಕಪ್ಪಾಗಿಸುತ್ತದೆ.
- ಒಣ ಕೂದಲಿಗೆ ಅಲೋವೆರಾ ಉತ್ತಮವಾಗಿದೆ. ಇದನ್ನು ಬಳಸುವುದರಿಂದ ಒಣ, ಸುಕ್ಕುಗಟ್ಟಿದ ಮತ್ತು ಹಾನಿಗೊಳಗಾದ ಕೂದಲು ಸರಿಹೋಗುತ್ತದೆ.
ಮನೆಯಲ್ಲೇ ಮಾಡಿ ಟೇಸ್ಟಿ ಸ್ಪೈಸಿ ಬಟರ್ ಕಿಚಡಿ; ಇಲ್ಲಿದೆ ಸಿಂಪಲ್ ವಿಧಾನ | Recipe