ಮೀನು ಎಂದರೆ ನಿಮಗೆ ತುಂಬಾ ಇಷ್ಟವೇ? ಹಾಗಾದರೆ, ಈ ಮೀನುಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ, ಜಾಗರೂಕರಾಗಿರಿ! Fish

Fish
Published on

Fish : ಮೀನು ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಏಕೆಂದರೆ, ಮೀನಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್‌ಗಳು, ವಿಟಮಿನ್‌ಗಳು (ಡಿ, ಬಿ2) ಮತ್ತು ಖನಿಜಗಳಾದ ಕಬ್ಬಿಣ, ಜಿಂಕ್ ಮತ್ತು ಮೆಗ್ನೀಸಿಯಂ ಸಮೃದ್ಧವಾಗಿವೆ. ಇವು ಹೃದಯ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸುತ್ತವೆ. ಹೀಗಾಗಿ ಎಲ್ಲ ಮಾಂಸ ಖಾದ್ಯಗಳಲ್ಲಿ ಮೀನು ಅತ್ಯಂತ ಶ್ರೇಷ್ಠ ಎಂದು ನಂಬಲಾಗಿದೆ. ಆದರೆ, ಮೀನು ಖರೀದಿಸುವಾಗ ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಸಿಕ್ಕ ಸಿಕ್ಕ ಮೀನುಗಳನ್ನು ಖರೀದಿ ಮಾಡಬಾರದು. ಏಕೆಂದರೆ, ಕೆಲವೊಂದು ಮೀನುಗಳು ಆರೋಗ್ಯಕ್ಕೆ ತುಂಬಾ ಡೇಂಜರ್​. ಹಾಗಾದರೆ, ಯಾವ ಮೀನುಗಳನ್ನು ಖರೀದಿ ಮಾಡಬಾರದು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಅಂದಹಾಗೆ, ಎಲ್ಲ ಮೀನುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವು ರೀತಿಯ ಮೀನುಗಳು ಕಲುಷಿತವಾಗಬಹುದು ಮತ್ತು ಭಾಗಶಃ ವಿಷಕಾರಿಯಾಗಬಹುದು. ಕೆಲವೊಮ್ಮೆ, ಮೀನುಗಳನ್ನು ಸಾಕುವ ವಿಧಾನಗಳಿಂದಾಗಿ, ಅವುಗಳಿಗೆ ಹಾನಿಕಾರಕ ರಾಸಾಯನಿಕಗಳು (ಆರೋಗ್ಯ ಸಲಹೆಗಳು) ಅಥವಾ ಹಾರ್ಮೋನುಗಳನ್ನು ಸೇರಿಸಲಾಗುತ್ತದೆ ಮತ್ತು ಅವುಗಳನ್ನು ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ. ಹಾಗಾದರೆ, ಅಂತಹ ಮೀನುಗಳು ಯಾವುವು? ಇಲ್ಲಿ ವಿವರವಾಗಿ ತಿಳಿದುಕೊಳ್ಳೋಣ.

ಪಂಗಾಸಿಯಸ್ (ಬಾಸಾ ಮೀನು)

ಈ ರೀತಿಯ ಮೀನುಗಳನ್ನು ಹೆಚ್ಚಾಗಿ ಭಾರತ, ಬಾಂಗ್ಲಾದೇಶ ಮತ್ತು ವಿಯೆಟ್ನಾಂನಂತಹ ದೇಶಗಳಲ್ಲಿ ಸಾಕಲಾಗುತ್ತದೆ. ಅವುಗಳನ್ನು ಹೆಚ್ಚು ಕ್ಷಾರೀಯ ನೀರಿನಲ್ಲಿ ಬೆಳೆಸಲಾಗುತ್ತದೆ. ಕೆಲವು ಪಂಗಾಸಿಯಸ್ ಕೊಳಗಳು ಕೈಗಾರಿಕಾ ತ್ಯಾಜ್ಯವನ್ನು ಸಹ ಹೊಂದಿರುತ್ತವೆ. ಆದ್ದರಿಂದ, ಅಂತಹ ಮೀನುಗಳನ್ನು ತಿನ್ನುವುದರಿಂದ ದೀರ್ಘಾವಧಿಯಲ್ಲಿ ಯಕೃತ್ತಿನ ಹಾನಿ, ಹಾರ್ಮೋನ್ ಅಸಮತೋಲನ ಮತ್ತು ಕ್ಯಾನ್ಸರ್ ಉಂಟಾಗುತ್ತದೆ.

ಕಿಂಗ್​ ಮ್ಯಾಕರೆಲ್​

ಈ ರೀತಿಯ ಮೀನುಗಳು ಸಮುದ್ರ ಪ್ರದೇಶಗಳಲ್ಲಿ, ವಿಶೇಷವಾಗಿ ಬಂಗಾಳಕೊಲ್ಲಿಯಲ್ಲಿ ಕಂಡುಬರುತ್ತವೆ. ಈ ಮೀನು ಹೆಚ್ಚಿನ ಮಟ್ಟದ ಪಾದರಸವನ್ನು ಹೊಂದಿರುತ್ತದೆ. ಪಾದರಸವು ನರವಿಷವಾಗಿದೆ. ಇದು ಮಾನವ ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ರೀತಿಯ ಮೀನುಗಳನ್ನು ತಿನ್ನುವುದರಿಂದ ಮಾನಸಿಕ ಅಸ್ವಸ್ಥತೆಗಳು, ಗರ್ಭಿಣಿಯರಲ್ಲಿ ಭ್ರೂಣದ ಬೆಳವಣಿಗೆಯ ಸಮಸ್ಯೆಗಳು ಮತ್ತು ಮೂತ್ರಪಿಂಡದ ಹಾನಿ ಉಂಟಾಗುತ್ತದೆ.

ಪಫ್ಫರ್​ ಫಿಶ್​

ಈ ರೀತಿಯ ಮೀನುಗಳು ಜಪಾನ್, ಕೊರಿಯಾ ಮತ್ತು ಕೆಲವೊಮ್ಮೆ ಭಾರತದ ಕರಾವಳಿಯಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಟೆಟ್ರೋಡೋಟಾಕ್ಸಿನ್ ಎಂಬ ಅಪಾಯಕಾರಿ ವಿಷವನ್ನು ಹೊಂದಿರುತ್ತದೆ. ಆದ್ದರಿಂದ, ಈ ಮೀನನ್ನು ಹೆಚ್ಚು ತಿನ್ನುವುದು ಮಾರಕವಾಗಬಹುದು. ಇದು ವಾಕರಿಕೆ, ಉಸಿರಾಟದ ವೈಫಲ್ಯ ಮತ್ತು ಹೃದಯ ವೈಫಲ್ಯದಂತಹ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ಅಂದಹಾಗೆ, ಈ ಮೀನನ್ನು ಜಪಾನ್​ನಲ್ಲಿ ಹೆಚ್ಚಾಗಿ ಸೇವಿಸುತ್ತಾರೆ. ಆದರೆ, ಇದರ ಖಾದ್ಯ ತಯಾರಿಗೆ ವಿಶೇಷ ತರಬೇತಿ ಪಡೆದಿರಬೇಕು ಮತ್ತು ಪರವಾನಗಿ ಕೂಡ ಹೊಂದಿರಬೇಕು.

ಡಾಲ್ಫಿನ್​ ಫಿಶ್​

ಇದು ನಮಗೆ ತಿಳಿದಿರುವ ಡಾಲ್ಫಿನ್ ಮೀನು ಅಲ್ಲ. ಆದರೆ, ಇದು ಅದೇ ಡಾಲ್ಫಿನ್ ಜಾತಿಗೆ ಸೇರಿದೆ. ಈ ರೀತಿಯ ಮೀನುಗಳು ಕಲುಷಿತ ಸಮುದ್ರಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆದ್ದರಿಂದ, ಇವುಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಮತ್ತು ಭಾರ ಲೋಹಗಳು ಇರುವ ಸಾಧ್ಯತೆಯಿದೆ. ಈ ಮೀನುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು, ಹಾರ್ಮೋನ್ ಸಮಸ್ಯೆಗಳು, ಯಕೃತ್ತು ಮತ್ತು ಮೂತ್ರಪಿಂಡದ ಸಮಸ್ಯೆಗಳು ಉಂಟಾಗಬಹುದು.

ಟೈಲ್​ ಫಿಶ್​

ಈ ಮೀನು ಅಮೆರಿಕದ ಕರಾವಳಿ ಮತ್ತು ಕೆಲವು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವ್ಯಾಪಕವಾಗಿ ಲಭ್ಯವಿದೆ. ಈ ಮೀನಿನಲ್ಲಿ ಪಾದರಸ ಅಧಿಕವಾಗಿರುತ್ತದೆ. FDA ಹೇಳಿಕೆಯ ಪ್ರಕಾರ, ಗರ್ಭಿಣಿಯರು ಈ ಮೀನನ್ನು ತಿನ್ನಬಾರದು. ಇದನ್ನು ತಿಂದರೆ, ನರಗಳ ಸಮಸ್ಯೆಗಳು, ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯಲ್ಲಿ ಸಮಸ್ಯೆಗಳು ಮತ್ತು ಮೂತ್ರಪಿಂಡ ಹಾಗೂ ಮೆದುಳಿನ ಕಾರ್ಯಗಳ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು.

ಇದನ್ನೂ ಓದಿ: 1 ಎಸೆತದಲ್ಲಿ 22 ರನ್​… ಸ್ಫೋಟಕ ಬ್ಯಾಟಿಂಗ್​ನಿಂದ ಅಬ್ಬರಿಸಿ ಬೊಬ್ಬಿರಿದ RCB ಸ್ಟಾರ್ ರೊಮಾರಿಯೊ ಶೆಫರ್ಡ್! CPL 2025 ​ಹಾಗಾದರೆ, ನಾವು ಯಾವ ರೀತಿಯ ಮೀನುಗಳನ್ನು ಮುಖ್ಯವಾಗಿ ತಿನ್ನಬೇಕು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.

ಟ್ಯೂನಾ ಮೀನು

ಮೀನಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಆದಾಗ್ಯೂ, ಮೀನುಗಳಲ್ಲಿ ಟ್ಯೂನ ಮೀನುಗಳು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದು ಮಾನವನ ಆರೋಗ್ಯಕ್ಕೆ ರಾಮಬಾಣ ಎಂದು ಹೇಳಲಾಗುತ್ತದೆ. ಟ್ಯೂನ ಮೀನು ವಿಶ್ವದ ಅತ್ಯಂತ ಜನಪ್ರಿಯ ಸಮುದ್ರಾಹಾರಗಳಲ್ಲಿ ಒಂದಾಗಿದೆ. ಇವು ರುಚಿಕರ ಮಾತ್ರವಲ್ಲ, ಸಮೃದ್ಧ ಪೌಷ್ಟಿಕಾಂಶದ ಮೌಲ್ಯಗಳನ್ನು ಸಹ ಹೊಂದಿವೆ. ಟ್ಯೂನ ಮೀನುಗಳನ್ನು ನಿಯಮಿತವಾಗಿ ತಿನ್ನುವುದರಿಂದ ಅನೇಕ ರೀತಿಯ ರೋಗಗಳನ್ನು ತಡೆಗಟ್ಟಬಹುದು ಎಂದು ತಜ್ಞರು ಹೇಳುತ್ತಾರೆ. ಈ ಟ್ಯೂನಾ ಮೀನಿನಲ್ಲಿ ಪ್ರೋಟೀನ್​, ಒಮೆಗಾ 3 ಫ್ಯಾಟಿ ಆ್ಯಸಿಡ್​, ವಿಟಮಿನ್​ಗಳು (ವಿಟಮಿನ್​ ಬಿ, ಬಿ12, ಡಿ ಮತ್ತು ಸೆಲೆನಿಯಮ್​) ಮತ್ತು ಖನಿಜಗಳು (ಕಬ್ಬಿಣ, ಫಾಸ್ಫರಸ್​, ಪೊಟ್ಯಾಶಿಯಂ, ಸತು ಮತ್ತು ಕೊಲಿನ್​) ಇವೆ. ಟ್ಯೂನಾ ಮೀನು ತಿನ್ನುವುದರಿಂದ ಹೃದಯದ ಆರೋಗ್ಯ, ಕಡಿಮೆ ಕೊಬ್ಬು, ತೂಕ ನಿಯಂತ್ರಣ, ಮೆದುಳಿನ ಆರೋಗ್ಯ ಮತ್ತು ಕಣ್ಣಿನ ದೃಷ್ಟಿಗೆ ತುಂಬಾನೇ ಒಳ್ಳೆಯದು.

ಸಾಲ್ಮನ್ ಮೀನು

ಈ ಮೀನು ಒಮೆಗಾ-3, ವಿಟಮಿನ್ ಡಿ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧಿಯಾಗಿದೆ. ಇದನ್ನು ತಿನ್ನುವುದು ಹೃದಯದ ಆರೋಗ್ಯ ಮತ್ತು ಮಿದುಳಿನ ಕಾರ್ಯಕ್ಷಮತೆಗೆ ಒಳ್ಳೆಯದು.

ಸಾರ್ಡೀನ್‌ಗಳು

ಈ ಜಾತಿಯ ಮೀನು ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಒಮೆಗಾ-3 ಹೊಂದಿರುತ್ತವೆ. ಮೂಳೆ ಆರೋಗ್ಯಕ್ಕೆ ಒಳ್ಳೆಯದು.

ಕಾಡ್

ಕಾಡ್​ ಮೀನು ಕಡಿಮೆ ಕ್ಯಾಲೋರಿ, ವಿಟಮಿನ್ ಬಿ12 ಮತ್ತು ಐಯೋಡಿನ್‌ನ ಉತ್ತಮ ಮೂಲವಾಗಿದೆ. ಇದನ್ನು ತಿನ್ನುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ.

ಅಂಚೋವೀಸ್ ಮೀನು

ಈ ಮೀನಿನಲ್ಲಿ ಒಮೆಗಾ-3 ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ರುಚಿಕರವಾದ ಆಯ್ಕೆಯಾಗಿದ್ದು, ಆರೋಗ್ಯ ವಿಚಾರದಲ್ಲಿ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ಒದಗಿಸಲಾಗಿದೆ. ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ತಡೆಗಟ್ಟಲು ಆಯುರ್ವೇದ ಅಥವಾ ಅಲೋಪತಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net