ಹುರಿಗಡಲೆ-ಬೆಲ್ಲ ಒಟ್ಟಿಗೆ ತಿನ್ನುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಗೊತ್ತಾದ್ರೆ ನೀವು ಮಿಸ್​ ಮಾಡೋದಿಲ್ಲ!

Chickpeas, Jaggery,

ಹುರಿಗಡಲೆ ಮತ್ತು ಬೆಲ್ಲವನ್ನು ಒಟ್ಟಿಗೆ ತಿನ್ನುವುದಕ್ಕೆ ತುಂಬಾ ರುಚಿಯಾಗಿರುತ್ತದೆ. ಕೇವಲ ರುಚಿ ಮಾತ್ರವಲ್ಲ ಈ ಸೂಪರ್​ ಕಾಂಬಿನೇಷನ್​ ನಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ನಿಮ್ಮ ದೇಹ ಅನೇಕ ಲಾಭಗಳನ್ನು ಪಡೆದುಕೊಳ್ಳಲಿದೆ. ಆ ಲಾಭಗಳು ಏನು ಎಂಬುದನ್ನು ನಾವೀಗ ಕಂಪ್ಲೀಟ್​ ಆಗಿ ತಿಳಿದುಕೊಳ್ಳೋಣ.

ಆರೋಗ್ಯಕ್ಕಾಗುವ ಲಾಭಗಳನ್ನು ತಿಳಿದುಕೊಳ್ಳುವ ಮುನ್ನ ಹುರಿಗಡಲೆ ಮತ್ತು ಬೆಲ್ಲದ ಕಾಂಬಿನೇಷನ್​ನಲ್ಲಿ ಯಾವೆಲ್ಲ ಅಂಶಗಳು ಅಡಗಿವೆ ಎಂಬುದನ್ನು ತಿಳಿದುಕೊಳ್ಳೋಣ. ಇವುಗಳಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಫೈಬರ್ ಮತ್ತು ವಿಟಮಿನ್ ಬಿ ಸೇರಿದಂತೆ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ. ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಮೂಳೆಗಳಿಗೆ ಬಲ: ನಿಮ್ಮ ದೇಹದ ಮೂಳೆಗಳು ಗಟ್ಟಿಯಾಗಿರಲು ಪ್ರತಿನಿತ್ಯ ಬೆಲ್ಲ ಮತ್ತು ಹುರಿಗಡಲೆಯನ್ನು ತಿನ್ನಬೇಕು. ಇವು ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ ಮತ್ತು ಮೂಳೆಗಳು ದುರ್ಬಲಗೊಳ್ಳದಂತೆ ತಡೆಯುತ್ತವೆ.

ಮೆದುಳಿನ ಶಕ್ತಿ: ಹುರಿಗಡಲೆ ಮತ್ತು ಬೆಲ್ಲದಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ಮೆದುಳನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಕಡಲೆ, ಬೆಲ್ಲ ಸೇವನೆಯಿಂದ ಮಕ್ಕಳ ಮೆದುಳು ಚುರುಕಾಗುತ್ತದೆ.

ಬೊಜ್ಜು ನಿಯಂತ್ರಣ: ನೀವು ಸ್ಥೂಲಕಾಯದಿಂದ ಬಳಲುತ್ತಿದ್ದರೆ ಹುರಿಗಡಲೆ ತಿನ್ನಿ. ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಹುರಿಗಡಲೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚಿನ ಫೈಬರ್ ಗುಣಗಳನ್ನು ಹೊಂದಿದೆ. ಹುರಿಗಡಲೆ ತಿಂದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಇದರಿಂದಾಗಿ ಅತಿಯಾಗಿ ತಿನ್ನುವುದಿಲ್ಲ.

ಮಲಬದ್ಧತೆ ನಿಯಂತ್ರಣ: ಮಲಬದ್ಧತೆ ಮುಂದುವರೆದಂತೆ ಅದು ದೊಡ್ಡ ಸಮಸ್ಯೆಯಾಗಬಹುದು. ಬೆಲ್ಲ ಮತ್ತು ಹುರಿಗಡಲೆ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತಡೆಯಬಹುದು. ಬೆಲ್ಲ ಮತ್ತು ಹುರಿದ ಕಡಲೆಯಲ್ಲಿರುವ ಫೈಬರ್ ಗುಣಲಕ್ಷಣಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಉಳಿದಂತೆ ಹುರಿಗಡಲೆ ಮತ್ತು ಬೆಲ್ಲದ ಕಾಂಬಿನೇಷನ್, ದೇಹದಲ್ಲಿನ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಲ್ಲುಗಳು ಗಟ್ಟಿಯಾಗುತ್ತವೆ. ಬೆಲ್ಲವು ಉತ್ಕರ್ಷಣ ನಿರೋಧಕಗಳು ಮತ್ತು ಸೆಲೆನಿಯಂನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಲ್ಲ ಮತ್ತು ಕಡಲೆ ಎರಡೂ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತವೆ. ಬೆಲ್ಲವು ದೇಹದಿಂದ ಹಾನಿಕಾರಕ ವಿಷವನ್ನು ಹೊರಹಾಕುವ ಮೂಲಕ ಯಕೃತ್ತನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ . ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ನೀವು ಈ ರೀತಿ ಸೇಬು ತಿನ್ನುತ್ತಿದ್ದರೆ ಇಂದೇ ಬದಲಾಯಿಸಿಕೊಳ್ಳಿ: ಆರೋಗ್ಯ ತಜ್ಞರ ಮಹತ್ವದ ಸಲಹೆ ಇಲ್ಲಿದೆ…

ಊಟಕ್ಕೂ ಮುನ್ನ ಇದನ್ನು ಕುಡಿದರೆ ದೇಹದ ತೂಕ ಬೇಗ ಕಡಿಮೆಯಾಗುತ್ತೆ! ನೀವು ಫಿಟ್​ ಆಗಿರುತ್ತೀರಿ

Share This Article

Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?

Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…

2025ರಲ್ಲಿ ಸಾಲದ ಸುಳಿಗೆ ಸಿಲುಕಲಿದ್ದಾರಂತೆ ಈ 3 ರಾಶಿಯವರು!? ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರ | Money

Money : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ

White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…