ನೀವು ಈ ರೀತಿ ಸೇಬು ತಿನ್ನುತ್ತಿದ್ದರೆ ಇಂದೇ ಬದಲಾಯಿಸಿಕೊಳ್ಳಿ: ಆರೋಗ್ಯ ತಜ್ಞರ ಮಹತ್ವದ ಸಲಹೆ ಇಲ್ಲಿದೆ…

Apple
Published on

ಹಣ್ಣುಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಸೇಬು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸೇಬನ್ನು ಹೇಗೆ ತಿಂದರೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಅದರಲ್ಲಿರುವ ಬೀಜಗಳನ್ನು ಮಾತ್ರ ತಿನ್ನಬಾರದು. ಏಕೆಂದರೆ, ಬೀಜದಲ್ಲಿ ವಿಷದ ಅಂಶವಿರುತ್ತದೆ. ಸೇಬನ್ನು ಹಾಗೆಯೇ ತಿನ್ನುವುದು, ಸಲಾಡ್‌ಗಳಾಗಿ ಕತ್ತರಿಸಿ ಅಥವಾ ಜ್ಯೂಸ್‌ನಂತೆ ಕುಡಿಯುವುದು ಒಳ್ಳೆಯದು. ಇದು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಸಹ ನೀಡುತ್ತದೆ.

ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರವಿಡಬಹುದು ಎಂದು ಆಗಾಗ ಕೇಳುತ್ತಿರುತ್ತೇವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ ಸೇಬುಗಳನ್ನು ಸೇರಿಸಲು ಪ್ರಯತ್ನಿಸುತ್ತಾರೆ. ಸೇಬು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಸೇಬುಗಳು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸೇಬಿನಲ್ಲಿ ಕಬ್ಬಿಣ, ಸತು, ತಾಮ್ರ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್​ನಂತಹ ಬಹಳಷ್ಟು ಪೋಷಕಾಂಶಗಳನ್ನು ಒಳಗೊಂಡಿದೆ. ಅಲ್ಲದೆ, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಉಗ್ರಾಣವಾಗಿದೆ. ಜೀವಕೋಶದ ಆರೋಗ್ಯಕ್ಕೆ ವಿಟಮಿನ್ ಸಿ ಉತ್ತಮವಾಗಿದೆ. ಇದು ಸಂಧಿವಾತದ ನೋವಿನ ವಿರುದ್ಧವೂ ಹೋರಾಡುತ್ತದೆ. ಪ್ರತಿದಿನ ಸೇಬನ್ನು ತಿನ್ನುವುದರಿಂದ ಆರು ತಿಂಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಶೇ. 23 ರಷ್ಟು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಅಂದಹಾಗೆ ಇನ್ನೂ ಅನೇಕ ಜನರಿಗೆ ಸೇಬುಗಳನ್ನು ಹೇಗೆ ತಿನ್ನಬೇಕು ಎಂದು ತಿಳಿದಿಲ್ಲ. ಅನೇಕ ಜನರು ಸೇಬುಗಳನ್ನು ಸಿಪ್ಪೆ ಸುಲಿದ ತಿನ್ನುತ್ತಾರೆ. ಸಿಪ್ಪೆ ತೆಗೆಯುವುದರಿಂದ ಅದರ ಪೋಷಕಾಂಶಗಳು ಕಡಿಮೆಯಾಗುವುದಿಲ್ಲ ಎಂದು ಅವರು ನಂಬುತ್ತಾರೆ. ಆದರೆ, ಇದು ಸುಳ್ಳು ಎನ್ನುತ್ತಾರೆ ಡಾ.ಶ್ರೀದೇವಿ ನಂಬಿಯಾರ್. ಇದನ್ನು ವೈದ್ಯರು ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಸೇಬಿನ ಸಿಪ್ಪೆ ತೆಗೆಯುವುದರಿಂದ ಶೇ.50 ರಷ್ಟು ಫೈಬರ್ ಮತ್ತು ಶೇ.30ರಷ್ಟು ವಿಟಮಿನ್ ಸಿ ಕಡಿಮೆಯಾಗುತ್ತದೆ ಎಂದು ಶ್ರೀದೇವಿ ವಿವರಿಸುತ್ತಾರೆ. ಸೇಬುಗಳನ್ನು ತೊಳೆದ ನಂತರ ಪೂರ್ತಿಯಾಗಿ ತಿನ್ನುವುದು ಉತ್ತಮ ಎಂದು ಅವರು ಹೇಳುತ್ತಾರೆ. ಸಿಪ್ಪೆಯೊಂದಿಗೆ ತಿಂದರೆ ಮಾತ್ರ ದೇಹವು ಸೇಬಿನ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net