ಸಿಗರೇಟ್​ ಸೇದುವಾಗ ಟೀ ಕುಡಿದರೆ ಏನಾಗುತ್ತದೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Cigarettes and Tea

Cigarettes and Tea

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಅನೇಕ ಜನರು ಸಿಗರೇಟ್​ಗೆ ( Cigarettes ) ಅಡಿಕ್ಟ್​ ಆಗಿದ್ದಾರೆ. ಅಲ್ಲದೆ, ಸಿಗರೇಟ್​ ಸೇದುತ್ತಾ ಚಹಾ ( Tea ) ಕುಡಿಯುವ ಅಭ್ಯಾಸ ಅನೇಕರಲ್ಲಿದೆ. ಆದರೆ, ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ಎದುರಾಗುವ ಅಪಾಯಗಳ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ. ಈ ಅಭ್ಯಾಸ ಒಳ್ಳೆಯದಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಗಾದರೆ, ಸಿಗರೇಟ್ ಮತ್ತು ಚಹಾ ಒಟ್ಟಿಗೆ ಸೇವಿಸಿದರೆ ಏನಾಗುತ್ತದೆ ಎಂಬುದನ್ನು ನಾವೀಗ ತಿಳಿಯೋಣ.

ಸಿಗರೇಟ್​ ಮತ್ತು ಚಹಾ ಎರಡೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಸಿಗರೇಟಿನಲ್ಲಿರುವ ರಾಸಾಯನಿಕಗಳು ಶ್ವಾಸಕೋಶದ ಕೋಶಗಳನ್ನು ಹಾನಿಗೊಳಿಸುತ್ತವೆ. ಚಹಾದಲ್ಲಿನ ಕೆಲವು ರಾಸಾಯನಿಕಗಳು ಸಿಗರೇಟಿನಲ್ಲಿ ಹಾನಿಕಾರಕ ರಾಸಾಯನಿಕಗಳ ಪರಿಣಾಮಗಳನ್ನು ಇನ್ನಷ್ಟು ಹೆಚ್ಚಿಸಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಗಂಟಲು, ಬಾಯಿ, ಅನ್ನನಾಳ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ.

ಚಹಾದಲ್ಲಿರುವ ಕೆಫೀನ್ ಹೊಟ್ಟೆಯ ಆಮ್ಲವನ್ನು ಹೆಚ್ಚಿಸುತ್ತದೆ. ಸಿಗರೇಟ್ ಹೊಗೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇವೆರಡೂ ಸೇರಿ ಜೀರ್ಣಕ್ರಿಯೆ ಸಮಸ್ಯೆ, ಅಲ್ಸರ್ ಮತ್ತು ಗ್ಯಾಸ್​ಗೆ ಕಾರಣವಾಗಬಹುದು. ಅಲ್ಲದೆ, ಇವೆರಡಲ್ಲಿರುವ ಕೆಲವು ರಾಸಾಯನಿಕಗಳು ಮೂಳೆಗಳನ್ನು ದುರ್ಬಲಗೊಳಿಸುತ್ತವೆ. ಇದು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಕಿತ್ತು ತಿನ್ನೋ ಬಡತನ, ಕೋವಿಡ್​ನಿಂದ ತಂದೆ ಸಾವು! ದಿನಗೂಲಿ ನೌಕರ IAS ಅಧಿಕಾರಿಯಾಗಿದ್ದೇ ಸ್ಫೂರ್ತಿದಾಯಕ

ಚಹಾದಲ್ಲಿರುವ ಕೆಫೀನ್ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಸಿಗರೇಟ್ ಮತ್ತು ಚಹಾವನ್ನು ಒಟ್ಟಿಗೆ ಕುಡಿಯುವುದು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

ಸಿಗರೇಟ್ ಮತ್ತು ಚಹಾವನ್ನು ಒಟ್ಟಿಗೆ ಸೇವಿಸುವುದರಿಂದ ಮುಖದಲ್ಲಿ ಸುಕ್ಕುಗಳು ಮತ್ತು ಚರ್ಮವು ಕಪ್ಪಾಗುವುದು ಸೇರಿದಂತೆ ಚರ್ಮದ ಸಮಸ್ಯೆಗಳು ಉಂಟಾಗುತ್ತವೆ. ಈ ಎರಡೂ ಮೆದುಳಿಗೆ ಹಾನಿ ಉಂಟು ಮಾಡುತ್ತವೆ. ಇದರಿಂದ ಮರೆವು ಮತ್ತು ಏಕಾಗ್ರತೆಯ ಕೊರತೆಯಂತಹ ಸಮಸ್ಯೆಗಳು ಎದುರಾಗುತ್ತವೆ.

ಸಿಗರೇಟ್ ಮತ್ತು ಚಹಾವನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಸಣ್ಣಪುಟ್ಟ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿದೆ. ಇವೆರಡೂ ಇತರ ಆರೋಗ್ಯ ಸಮಸ್ಯೆಗಳಾದ ದಂತಕ್ಷಯ, ಚರ್ಮದ ಸಮಸ್ಯೆಗಳು, ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಧೂಮಪಾನವನ್ನು ತ್ಯಜಿಸುವುದು ತುಂಬಾ ಒಳ್ಳೆಯದು. ಟೀ ಕುಡಿಯುವಾಗ ಕಡಿಮೆ ಸಕ್ಕರೆ ಇರುವ ಟೀ ಕುಡಿಯಿರಿ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಲಕ್ಷಾಂತರ ಸಂಬಳ ಪಡೆಯೋ ನಿಮಗೆ ಸಾಕ್ಸ್ ಖರೀದಿ ಮಾಡೋಕಾಗಲ್ವಾ? IIT ಫ್ರೊಫೆಸರ್​ ಕೊಟ್ಟ ಉತ್ತರ ವೈರಲ್

ತಮಿಳು ಬೇಡ ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ನಟಿ ಮೀನಾ ಕೊಟ್ಟ ತಿರುಗೇಟು ಹೀಗಿತ್ತು… ವಿಡಿಯೋ ವೈರಲ್! A​ctress Meena

Share This Article

30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ

White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…

ಪ್ರಯಾಣ ಮಾಡುವಾಗ ವಾಂತಿ ಬರುತ್ತದೆಯೇ? ಚಿಂತಿಸಬೇಡಿ, ಈ ಸಿಂಪಲ್​​ ಟಿಪ್ಸ್​ ಅನುಸರಿಸಿ ಸಾಕು! Vomiting while Travelling

Vomiting while Travelling : ಸಾಮಾನ್ಯವಾಗಿ ಕೆಲ ಜನರು ಪ್ರಯಾಣವನ್ನು ಇಷ್ಟಪಡುವುದಿಲ್ಲ. ಅದರಲ್ಲೂ ಕಾರು, ಬಸ್​ನಂತಹ…

Health Tips: ಚಳಿಗಾಲದಲ್ಲಿ ಕೆಮ್ಮು, ನೆಗಡಿ ಹೋಗಲಾಡಿಸಲು ಹೀಗೆ ಮಾಡಲೇಬೇಕು!

Health Tips:   ಚಳಿಗಾಲ   ಶುರುವಾಗಿದೆ ಎಂದರೆ ಸೀಸನಲ್ ಕಾಯಿಲೆಗಳೂ ನಮ್ಮನ್ನು ಕಾಡುತ್ತಿವೆ. ಅದರಲ್ಲೂ ಶೀತ ವಾತಾವರಣದಲ್ಲಿ…