ಹೊಸಮಾದರಿ ಕೋವಿಡ್ 19 - ತುರ್ತುಸಭೆ ಕರೆದಿರುವ ಕೇಂದ್ರ ಸರ್ಕಾರ

Covid Test
Published on

ನವದೆಹಲಿ: ಬ್ರಿಟನ್​ನಲ್ಲಿ ಹೊಸ ಮಾದರಿಯ ಕೋವಿಡ್ 19 ಸೋಂಕು ಕಾಣಿಸಿಕೊಂಡ ಕಾರಣ ಕೇಂದ್ರ ಸರ್ಕಾರ ಇಂದು ಆರೋಗ್ಯ ಸಚಿವಾಲಯದ ಜಾಯಿಂಟ್ ಮಾನಿಟರಿಂಗ್​ ಗ್ರೂಪ್​ನ ಸದಸ್ಯರ ತುರ್ತುಸಭೆ ಕರೆದಿದೆ. ಬ್ರಿಟನ್​ನಲ್ಲಿ ರೂಪಾಂತರಗೊಂಡಿರುವ ಕರೊನಾ ವೈರಸ್ ಹರಡುತ್ತಿರುವ ಕೋವಿಡ್ 19 ಕಾಣಿಸಿಕೊಂಡಿದ್ದು, ಅದು ಶೇಕಡ 70 ಹೆಚ್ಚು ಅಪಾಯಕಾರಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಈ ತುರ್ತು ಸಭೆಯನ್ನು ಆಯೋಜಿಸಿದೆ.

ಆರೋಗ್ಯ ಸೇವೆಗಳ ಮಹಾನಿರ್ದೇಶಕ (ಡಿಜಿಎಚ್​ಎಸ್​) ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿ ಡಾ.ರೊಡೆರಿಕೋ ಎಚ್​ ಓಫ್ರಿನ್​ ಅವರು ಭಾಗವಹಿಸಲಿದ್ದಾರೆ. ಇವರು ಕೂಡ ಜಾಯಿಂಟ್ ಮಾನಿಟರಿಂಗ್ ಗ್ರೂಪಿನ ಸದಸ್ಯರಾಗಿರುತ್ತಾರೆ. ಸಭೆಯಲ್ಲಿ ಬ್ರಿಟನ್​ನಲ್ಲಿ ಉದ್ಭವಿಸಿರುವ ಹೊಸ ಮಾದರಿ ಕೋವಿಡ್ 19 ಸೋಂಕಿನ ವಿಚಾರ ಚರ್ಚಿಸಲ್ಪಡಲಿದೆ.

ಬ್ರಿಟನ್​ನಲ್ಲಿ ಹೊಸ ಮಾದರಿಯ ಕೋವಿಡ್ 19 ಸೋಂಕು ತೀವ್ರ ಸ್ವರೂಪದಲ್ಲಿ ಹರಡುತ್ತಿರುವ ಕಾರಣ ಕಠಿಣ ನಿರ್ಬಂಧಗಳನ್ನು ಅಲ್ಲಿನ ಸರ್ಕಾರ ಈಗಾಗಲೇ ಹೇರಿದೆ. ಲಂಡನ್​ ಮತ್ತು ಸದರ್ನ್​ ಇಂಗ್ಲೆಂಡ್ ಪ್ರದೇಶಗಳಲ್ಲಿ ಮತ್ತೊಂದು ಆವೃತ್ತಿ ಬಹುತೇಕ ಲಾಕ್​ಡೌನ್ ಸ್ಥಿತಿ ನಿರ್ಮಾಣವಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net