More

    ರೂಪಾಂತರಗೊಂಡ ಕರೊನಾ ವೈರಸ್​: ಭಾನುವಾರ ಒಂದೇ ದಿನ 35,928 ಕೇಸ್, 326 ಸಾವು

    ಲಂಡನ್​: ಹೊಸ ಮಾದರಿಯ ಕೋವಿಡ್​ 19 ವೈರಸ್​ ಸೋಂಕು ಹರಡತೊಡಗಿದ್ದು, ಬ್ರಿಟನ್ ತಲ್ಲಣಗೊಂಡಿದೆ. ನಿನ್ನೆ ಒಂದೇ ದಿನ 35,928 ಹೊಸ ಕೇಸ್​ಗಳು ದಾಖಲಾಗಿದ್ದು, 326 ಜನ ಮೃತಪಟ್ಟಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್ ಶನಿವಾರವಷ್ಟೇ ರಾಷ್ಟ್ರದ ಜನರನ್ನು ಎಚ್ಚರಿಸಿದ್ದು, ಕ್ರಿಸ್ಮಸ್​ ಆಚರಣೆಗೆಂದು ಸಾವಿರಾರು ಜನ ಒಂದೆಡೆ ಸೇರಬೇಡಿ ಎಂದು ಆಗ್ರಹಿಸಿದ್ದರು. ಲಂಡನ್​ ಮತ್ತು ಸದರ್ನ್ ಇಂಗ್ಲೆಂಡ್​ನ ಅಂಗಡಿ ಮುಂಗಟ್ಟೆಗಳನ್ನು ಮುಚ್ಚುವಂತೆಯೂ ಸೂಚಿಸಿದ್ದರು.

    ಕ್ರಿಸ್ಮಸ್ ಹಬ್ಬಕ್ಕೆ ಕೆಲವೇ ದಿನ ಬಾಕಿ ಉಳಿದಿರುವಂತೆ ಹೊಸ ಮಾದರಿಯ ಕೋವಿಡ್​ 19 ವೈರಸ್ ಸೋಂಕಿಗೆ ಬ್ರಿಟನ್ ತಲ್ಲಣಗೊಂಡಿದೆ. ಲಂಡನ್ ಮತ್ತು ಸದರ್ನ್ ಇಂಗ್ಲೆಂಡ್ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಮೂರು ಸ್ತರದ ಕರೊನಾ ವೈರಸ್ ಅಲರ್ಟ್​ ಸಿಸ್ಟಮ್ ಜಾರಿಗೊಳಿಸಲಾಗಿದೆ. ಶನಿವಾರದಿಂದಲೇ ಅಗತ್ಯ ವಸ್ತು ಹೊರತುಪಡಿಸಿದ ಉಳಿದೆಲ್ಲ ಅಂಗಡಿ ಮುಂಗಟ್ಟೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ. ಆದಾಗ್ಯೂ, ಭಾನುವಾರ ಒಂದೇ ದಿನ ಹೊಸದಾಗಿ 35,928 ಕೋವಿಡ್ 19 ಕೇಸ್​ ಹಾಗೂ 326 ಸಾವು ಸಂಭವಿಸಿದೆ. ಇದರೊಂದಿಗೆ ಬ್ರಿಟನ್​ನಲ್ಲಿ ಕರೊನಾ ಸಾವಿನ ಸಂಖ್ಯೆ 67,401ಕ್ಕೆ ತಲುಪಿದೆ. ಕಳೆದ ಭಾನುವಾರ ಕೋವಿಡ್ 19 ಹೊಸ ಕೇಸ್​ಗಳ ಸಂಖ್ಯೆ 18,447 ಮತ್ತು ಮರಣ ಪ್ರಮಾಣ 144 ಇತ್ತಷ್ಟೆ.

    ಇದನ್ನೂ ಓದಿ: ಐದೇ ದಿನದಲ್ಲಿ ಎರಡು ಮದುವೆಯಾಗಿ ಟೆಕ್ಕಿ ಪರಾರಿ: ರಹಸ್ಯ ಮದ್ವೆ ಬಯಲಾದ ಕತೆಯೇ ರೋಚಕ!

    ಹೊಸ ಮಾದರಿಯ ಕೋವಿಡ್ 19 ವೈರಸ್ ರೂಪಾಂತರಗೊಂಡಿದ್ದು, ಶೇಕಡ 70ರಷ್ಟು ಅಪಾಯಕಾರಿಯಾಗಿ ಸೋಂಕು ಹರಡುತ್ತಿದೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ನಾವು ಮಾಹಿತಿ ನೀಡಿದ್ದೇವೆ. ಈ ಕುರಿತಾಗಿ ನಮ್ಮಲ್ಲಿ ಲಭ್ಯವಿರುವ ಡೇಟಾವನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವ ಕೆಲಸ ಮುಂದುವರಿಸಿದ್ದೇವೆ ಎಂದು ಇಂಗ್ಲೆಂಡ್​ನ ಮುಖ್ಯ ವೈದ್ಯಾಧಿಕಾರಿ ಪ್ರೊಫೆಸರ್ ಕ್ರಿಸ್ ವಿಟ್ಟಿ ತಿಳಿಸಿದ್ದಾಗಿ ಬ್ರಿಟನ್​ನ ಡೇಲಿಮೇಲ್ ವರದಿ ಮಾಡಿದೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಿದ್ರೆ ಟ್ವಿಟರ್​ನಿಂದ ದೂರಾಗುತ್ತಾರಂತೆ ಚುನಾವಣಾ ತಂತ್ರಗಾರ ಪಿಕೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts