More

    ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಿದ್ರೆ ಟ್ವಿಟರ್​ನಿಂದ ದೂರಾಗುತ್ತಾರಂತೆ ಚುನಾವಣಾ ತಂತ್ರಗಾರ ಪಿಕೆ !

    ಬೆಂಗಳೂರು: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ. 2021ರ ಏಪ್ರಿಲ್​-ಮೇ ತಿಂಗಳಲ್ಲಿ ಅಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಅದರ ಕಾವು ಶುರುವಾಗಿದೆ. ಬಿಜೆಪಿ ಪ್ರಚಾರ ಅಭಿಯಾನ ಆರಂಭಿಸಿದ್ದು, ಅಧಿಕಾರ ಚುಕ್ಕಾಣಿ ಹಿಡಿಯುವುದಕ್ಕೆ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡತೊಡಗಿದೆ. ಪರಿಣಾಮ, ಆಡಳಿತಾರೂಢ ತೃಣಮೂಲ ಕಾಂಗ್ರಸ್ ಕಾರ್ಯಕರ್ತರಿಂದ ಪ್ರಬಲ ವಿರೋಧ, ಹಿಂಸಾತ್ಮಕ ಪ್ರತಿರೋಧಗಳೂ ವ್ಯಕ್ತವಾಗುತ್ತಿದೆ ಕೂಡ. ಇವೆಲ್ಲದರ ನಡುವೆ ಇಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಟ್ವೀಟ್ ಗಮನಸೆಳೆದಿದೆ.

    ಚಾಣಕ್ಯ ಎಂದೇ ಬಿಜೆಪಿವಲಯದಲ್ಲಿ ಬಿಂಬಿಸಲ್ಪಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸ ಮುಗಿಸಿ ದೆಹಲಿಗೆ ಹಿಂತಿರುಗಿದ ಬೆನ್ನಲ್ಲೇ ಪ್ರಶಾಂತ್ ಕಿಶೋರ್ (ಪಿಕೆ) ಈ ಟ್ವೀಟ್ ಮಾಡಿದ್ದಾರೆ. ಈ ಸಲದ ವಿಧಾನ ಸಭಾ ಚುನಾವಣೆಯಲ್ಲಿ 294 ಸ್ಥಾನಗಳ ಪೈಕಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷ ಗೆಲುವು ದಾಖಲಿಸಬೇಕು ಎಂಬ ಗುರಿಯನ್ನು ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಷಾ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಎಂಬಂತಿದೆ ಪಿಕೆ ಮಾಡಿರುವ ಟ್ವೀಟ್​.

    ಇದನ್ನೂ ಓದಿ: ಹಣಕ್ಕಾಗಿ ಮನುಷ್ಯತ್ವವನ್ನೇ ಮರೆತ ರಾಕ್ಷಸ ಯುವಕ: ಈತನ ಹಿನ್ನೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ!

    ಒಂದು ವರ್ಗದ ಮಾಧ್ಯಮಗಳು ಹುಚ್ಚೆಬ್ಬಿಸಿದಂತೆ ಮಾಡುತ್ತಿರುವ ಪ್ರಚಾರವಷ್ಟೇ ಇದು. ವಾಸ್ತವದಲ್ಲಿ ನೋಡಿದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ಸ್ಥಾನ ದಾಟುವುದೂ ಕಷ್ಟವಿದೆ. ಈ ಟ್ವೀಟ್​ ಅನ್ನು ಸೇವ್ ಮಾಡಿ ಇಟ್ಟುಕೊಂಡಿರು. ಒಂದೊಮ್ಮೆ ಬಿಜೆಪಿ ಇದಕ್ಕಿಂತ ಉತ್ತಮ ಸಾಧನೆ ತೋರಿದರೆ ನಾನು ಈ ಜಾಗವನ್ನು ಖಾಲಿ ಮಾಡುವೆ!- ಎಂಬರ್ಥದ ಟ್ವೀಟ್​ ಪಿಕೆ ಖಾತೆಯಲ್ಲಿ ಅಪ್ಡೇಟ್ ಆಗಿದೆ.

    ಮೂರು ತಿಂಗಳಲ್ಲಿ 25,000 ಕೋಟಿ ರೂಪಾಯಿ ಸಂಗ್ರಹಿಸಲಿವೆ ಸಾರ್ವಜನಿಕ ಬ್ಯಾಂಕುಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts