More

    ಮೂರು ತಿಂಗಳಲ್ಲಿ 25,000 ಕೋಟಿ ರೂಪಾಯಿ ಸಂಗ್ರಹಿಸಲಿವೆ ಸಾರ್ವಜನಿಕ ಬ್ಯಾಂಕುಗಳು

    ನವದೆಹಲಿ: ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು (ಪಿಎಸ್​ಬಿ) ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ 25,000 ಕೋಟಿ ರೂಪಾಯಿ ಬಂಡವಾಳವನ್ನು ಈಕ್ವಿಟಿ ಮತ್ತು ಸಾಲದ ಮೂಲಕ ಸಂಗ್ರಹಿಸಲು ಚಿಂತನೆ ನಡೆಸಿವೆ ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ದೇಬಶಿಶ್ ಪಾಂಡಾ ಪಿಟಿಐಗೆ ತಿಳಿಸಿದ್ದಾರೆ.

    ಮಾರುಕಟ್ಟೆಯಿಂದಲೇ ಸಾಕಷ್ಟು ಹಣವನ್ನು ಸಂಗ್ರಹಿಸುವುದಕ್ಕೆ ಪಿಎಸ್​ಬಿಗಳು ಸಮರ್ಥವಾಗಿವೆ. ಕಳೆದ ಕೆಲವು ತಿಂಗಳ ಅವಧಿಯಲ್ಲಿ ಪಿಎಸ್​ಬಿಗಳುಯ ಎಟಿ1 ಮತ್ತು ಟೈಯರ್ ಐಟಿ ಬಾಂಡ್​ಗಳ ಮೂಲಕ 40,000 ಕೋಟಿ ರೂಪಾಯಿ ಸಂಗ್ರಹಿಸಿವೆ. ಬ್ಯಾಂಕುಗಳು ಈ ಹಣಕಾಸು ವರ್ಷದ ಇನ್ನುಳಿದ ಮೂರು ತಿಂಗಳ ಅವಧಿಯಲ್ಲಿ ಇನ್ನೂ 20,000 ಕೋಟಿ ರೂಪಾಯಿಯಿಂದ 25,000 ಕೋಟಿ ರೂಪಾಯಿ ಸಂಗ್ರಹಿಸುವ ಚಿಂತನೆ ನಡೆಸಿವೆ.

    ಇದನ್ನೂ ಓದಿ: ನೇಪಾಳ ಸಚಿವ ಸಂಪುಟ ವಿಸರ್ಜಿಸಿದ ಪ್ರಧಾನಿ ಕೆ.ಪಿ.ಶರ್ಮಾ ಒಲಿ; ಏಪ್ರಿಲ್​ನಲ್ಲಿ ಚುನಾವಣೆ

    ಈ ತಿಂಗಳ ಆರಂಭದಲ್ಲಿ ಕೆನರಾಬ್ಯಾಂಕ್​ 2,000 ಕೋಟಿ ರೂಪಾಯಿ ಸಂಗ್ರಹಿಸಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್​ 3,788 ಕೋಟಿ ರೂಪಾಯಿಯನ್ನು ಕ್ವಾಲಿಫೈಡ್ ಇನ್​ಸ್ಟಿಟ್ಯೂಷನಲ್ ಪ್ಲೇಸ್​ಮೆಂಟ್ (ಕ್ಯೂಐಪಿ) ಮೂಲಕ ಸಂಗ್ರಹಿಸಿದೆ. ಈ ನಡುವೆ ಹಣಕಾಸು ಸಚಿವಾಲಯವು ಪಂಜಾಬ್​ ಆ್ಯಂಡ್ ಸಿಂದ್ ಬ್ಯಾಂಕ್​ಗೆ 5,500 ಕೋಟಿ ರೂಪಾಯಿ ಬಂಡವಾಳ ಮರುಪೂರಣವನ್ನು ನೀಡಿದ್ದು, ಪ್ರತಿಯಾಗಿ ಆದ್ಯತೆಯ ಈಕ್ವಿಟಿ ಷೇರುಗಳನ್ನು ಪಡೆದುಕೊಂಡಿದೆ ಎಂದು ಪಾಂಡಾ ವಿವರಿಸಿದ್ದಾರೆ. (ಏಜೆನ್ಸೀಸ್)

    ಜಗತ್ತಿನ ಅತಿದೊಡ್ಡ ಮೃಗಾಲಯ ಗುಜರಾತ್​ನ ಜಾಮ್​ನಗರದಲ್ಲಿ ತಲೆಎತ್ತಲಿದೆ: ಅಂಬಾನಿಯ ಕನಸಿನ ಪ್ರಾಜೆಕ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts