More

    ರಾಣಿ ಎಲಿಜಬೆತ್​ ಅಂತಿಮಸಂಸ್ಕಾರದ ಭದ್ರತೆಗೆ ತಗುಲಿದ ಖರ್ಚೆಷ್ಟು ಗೊತ್ತೇ?; ಇದು ಯುಕೆ ಇತಿಹಾಸದಲ್ಲೇ ಗರಿಷ್ಠ!

    ನವದೆಹಲಿ: ಯುನೈಟೆಡ್ ಕಿಂಗ್​ಡಮ್​(ಯುಕೆ) ರಾಣಿ ಎಲಿಜಬೆತ್ II ಇತ್ತೀಚೆಗೆ ನಿಧನರಾದರು. ಅದು ದೊಡ್ಡ ಸುದ್ದಿಯಾದ ಬೆನ್ನಿಗೇ ಇದೀಗ ಅವರ ಅಂತಿಮಸಂಸ್ಕಾರದ ಭದ್ರತೆಗೆ ಖರ್ಚಾದ ಮೊತ್ತವೂ ದೊಡ್ಡ ಸುದ್ದಿ ಆಗಲಾರಂಭಿಸಿದೆ. ಯುಕೆ ಇತಿಹಾಸದಲ್ಲೇ ಇದೇ ಮೊದಲ ಸಲ ಎಂಬಂಥ ದೊಡ್ಡ ಮೊತ್ತ ಅವರ ಅಂತಿಮಸಂಸ್ಕಾರದ ಭದ್ರತೆಗೆ ವ್ಯಯವಾಗಿದೆ.

    96 ವರ್ಷವಾಗಿದ್ದ ಬ್ರಿಟನ್ ರಾಣಿ ಎಲಿಜಬೆತ್ II ಸೆ. 9ರಂದು ಕೊನೆಯುಸಿರೆಳೆದರು. ಅವರ ಅಂತಿಮಸಂಸ್ಕಾರದ ದಿನದಂದು ಭದ್ರತೆಗೆಂದೇ 7.5 ಮಿಲಿಯನ್​ ಯುಎಸ್ ಡಾಲರ್ ಅಂದರೆ ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ ಸುಮಾರು 59 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

    ಅಂತಾರಾಷ್ಟ್ರೀಯ ಮಟ್ಟದ ವಿವಿಧ ನಾಯಕರು, ಗಣ್ಯರು ಆಗಮಿಸಿದ್ದ ಈ ಅಂತಿಮಸಂಸ್ಕಾರದ ಭದ್ರತೆಗೆ ಬ್ರಿಟಿಷ್ ಎಂಐ5 ಮತ್ತು ಎಂಐ6 ಇಂಟೆಲಿಜೆನ್ಸ್ ಏಜೆನ್ಸಿಗಳು, ಲಂಡನ್​​ ಮೆಟ್ರೊಪಾಲಿಟನ್ ಪೊಲೀಸ್ ಹಾಗೂ ಇನ್ನೂ ಅನೇಕ ರಹಸ್ಯ ಸೇವೆಗಳನ್ನು ಬಳಸಿಕೊಳ್ಳಲಾಗಿತ್ತು. ಯುಕೆ ಇತಿಹಾಸದಲ್ಲಿ ಬರೀ ಭದ್ರತೆಗೆಂದೇ ಈ ಪ್ರಮಾಣದಲ್ಲಿ ಖರ್ಚು ಮಾಡಿದ್ದು ಇದೇ ಮೊದಲು ಎಂದು ಹೇಳಲಾಗಿದೆ. –ಏಜೆನ್ಸೀಸ್

    ಕೆಜಿಎಫ್​-2 ಚಿತ್ರದ ಪ್ರೇರಣೆ; 72 ಗಂಟೆಗಳಲ್ಲಿ 3 ಸೆಕ್ಯುರಿಟಿ ಗಾರ್ಡ್​ಗಳ ಕೊಲೆ: ನಿದ್ರೆಗೆಟ್ಟ ಕೈದಿಗಳು..

    ಕನ್ನಡಿಗರನ್ನು ಕೆರಳಿಸುತ್ತಿರುವ ಮರಾಠಿ ‘ಬಾಯ್ಸ್​’; ಸಿನಿಮಾವನ್ನೇ ನಿಷೇಧಿಸುವಂತೆ ಎದ್ದಿದೆ ವಾಯ್ಸ್​..

    ರೆಸಾರ್ಟ್​ನಲ್ಲಿ ‘ದೊಡ್ಡವರ’ ಮಕ್ಕಳ ರೇವ್ ಪಾರ್ಟಿ; ಹೊರಗಿನ ಯುವತಿಯರನ್ನು ಕರೆಸಿಕೊಂಡು ಮೋಜು-ಮಸ್ತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts