ಗುಜ್ಜಾಡಿಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

gan (19)
Published on

ಕುಂದಾಪುರ: ಗುಜ್ಜಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಲಯನ್ಸ್ ತ್ರಾಸಿ ಗಂಗೊಳ್ಳಿ ಸಹಯೋಗದೊಂದಿಗೆ ಗುಜ್ಜಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇಧಾ ಶಕ್ತಿ, ಆರೋಗ್ಯದ ಕುರಿತು ಮಾಹಿತಿ ಕಾರ್ಯಕ್ರಮ ಶನಿವಾರ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಡಾ.ನಾಗರಾಜ್ ಕೌಲಗಿ ಗಿಡ ಮೂಲಿಕೆ ಸಸ್ಯಗಳ ಮಹತ್ವ, ವಿದ್ಯಾರ್ಥಿಗಳ ಬುದ್ಧಿಶಕ್ತಿ ವೃದ್ಧಿಸುವ ಬಗೆ ತಿಳಿಸಿದರು. ಐಟಿ ಇಂಜಿನಿಯರ್ ರಮಾನಂದ ಕೆ. ಮಕ್ಕಳಿಗೆ ಕ್ರೀಡಾ ಪರಿಕರ ವಿತರಿಸಿದರು. ಲಯನ್ಸ್ ಕುಂದಪುರ ವಲಯ ಅಧ್ಯಕ್ಷ ಪ್ರಜ್ಞೇಶ್ ಪ್ರಭು, ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿ ಅಧ್ಯಕ್ಷ ರಾಘವೇಂದ್ರ ಪೂಜಾರಿ, ಕಾರ್ಯದರ್ಶಿ ಕಿರಣ್ ಡಿಸೋಜ, ಮುಖ್ಯಶಿಕ್ಷಕ ಗಂಗಾಧರ ಬಂಟ್, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ವಿಶ್ವನಾಥ್ ಸ್ವಾಗತಿಸಿದರು. ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಬಾರಯಪ್ಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net