ಶಿರಿಯಾರ ಶಾಲೆಗೆ ಕ್ರೀಡಾ ಸಮವಸ್ತ್ರ ಕೊಡುಗೆ

kon
Published on

ಕೊಕ್ಕರ್ಣೆ: ಶಿರಿಯಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಕ್ರೀಡಾ ಸಮವಸ್ತ್ರ ವಿತರಣೆ ಮಾಡಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರು ಸ್ಮಾಲ್ ಹೆಲ್ಪ್ ಗ್ರೂಪ್ ಪ್ರವರ್ತಕ ದಾನಿ ರಾಮಕೃಷ್ಣ ಚೇರ್ಕಾಡಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ರತ್ನಾ, ತಾಯಂದಿರ ಸಮಿತಿ ಅಧ್ಯಕ್ಷೆ ರೂಪಾ ರಾವ್ ಉಪಸ್ಥಿತರಿದ್ದರು.

ಮಕ್ಕಳಿಗೆ 25,000 ರೂ. ಮೌಲ್ಯದ ಕ್ರೀಡಾ ಸಮವಸ್ತ್ರ ವಿತರಿಸಿದ ದಾನಿಗಳು ಶಾಲಾ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಶಿಕ್ಷಕ ಸಾಧು ಸೇರಿಗಾರ್ ಬೆನಗಲ್ ಸ್ವಾಗತಿಸಿ, ಸಹಶಿಕ್ಷಕಿ ವಾಣಿ ವಂದಿಸಿದರು. ಸಹಶಿಕ್ಷಕಿ ವೀಣಾ ಕುವಾರಿ ನಿರೂಪಿಸಿದರು. ಸಹ ಶಿಕ್ಷಕಿಯರಾದ ಜಯಂತಿ, ಶೋಭಾ ಶೆಟ್ಟಿ, ಪ್ರೀತಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net