ಇದನ್ನು ಪ್ರತಿದಿನ ಒಂದು ಕಪ್​ ಕುಡಿದರೆ ಸಾಕು; ದೇಹದ ಕೊಬ್ಬು ಕರಗಿಸಲು ಇಲ್ಲಿದೆ ರಾಮಬಾಣ!Fat

jeera 2
Published on

Fat : ಸದ್ಯದ ಸ್ಥಿತಿಯಲ್ಲಿ ದೇಹ ದಣಿಸುವ ಕೆಲಸ ಕಡಿಮೆ ಆದ ಹಿನ್ನಲೆ ಪ್ರತಿ ಹತ್ತು ಜನರಲ್ಲಿ ಸುಮಾರು ಐದು ಜನರು ದೇಹದ ಅಧಿಕ ಒತ್ತಡದಿಂದ ಬಳಲುತ್ತಿದ್ದಾರೆ. ನಿತ್ಯ ಕೆಲಸದಿಂದ ಒತ್ತಡದ ಜೀವನ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ಹೀಗೆ ನಾನಾ ಸಮಸ್ಯೆಗಳು ಅನೇಕ ಜನರ ಆರೋಗ್ಯ ಸಮಸ್ಯೆಯ ಮೇಲೆ ಪರಿಣಾಮ ಉಂಟು ಮಾಡುತ್ತಿವೆ. ಇದರಿಂದ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆ ಇದೆ. ಆದಾಗ್ಯೂ ಇವುಗಳನ್ನು ತಡೆಗಟ್ಟಲು ಕೆಲವು ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ನಮ್ಮ ಅಡುಗೆಮನೆಯಲ್ಲಿರುವ ಜೀರಿಗೆಯಿಂದ ಈ ಎಲ್ಲಾ ಸಮಸ್ಯೆಗಳನ್ನು ಬಹಳ ಸುಲಭವಾಗಿ ಹೋಗಲಾಡಿಸಬಹುದು ಎಂದು ಹೇಳಲಾಗಿದೆ.

ಹೊಟ್ಟೆ ಕರಗಿಸುತ್ತಾ 'ಜೀರಿಗೆ'?

ಜೀರಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಇದು ದೇಹದ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀರಿಗೆಯಲ್ಲಿ ಪಾಲಿಫಿನಾಲ್‌ಗಳು ಸಮೃದ್ಧವಾಗಿದ್ದು, ಜೀರಿಗೆ ನೀರು ವಿವಿಧ ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪ್ರತಿದಿನ ಜೀರಿಗೆ ನೀರು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ.

ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಜೀರಿಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಜೀರಿಗೆ ನೀರು ಕುಡಿಯುವುದರಿಂದ ದೇಹವು ಹೊಸದಾಗಿ ಆರೋಗ್ಯಕರ ಕೋಶಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಹಾಗೂ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಾಗಿರುವಂತಹ ಅಸಿಡಿಟಿ, ಹೊಟ್ಟೆಯ ಗ್ಯಾಸ್ ಮತ್ತು ವಾಕರಿಕೆ ನಿವಾರಣೆಗೆ ಇದು ಸಹಾಯ ಮಾಡುತ್ತದೆ.

ಜೀರಿಗೆ ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮತ್ತು ಸೀರಮ್ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರಗೆ ತುಂಬಾ ಕಡಿಮೆ ಕ್ಯಾಲರಿ ಹೊಂದಿದೆ. ಇದು ಚಯಾಪಚಯವನ್ನು ಹೆಚ್ಚಿಸಿ ಕ್ಯಾಲರಿ ದಹಿಸುವಂತೆ ಹಾಗೂ ವೇಗವಾಗಿ ತೂಕ ಇಳಿಯಲು ಅವಕಾಶ ಮಾಡಿಕೊಡುತ್ತದೆ.

ಕಬ್ಬಿಣ ಮತ್ತು ನಾರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಕಾಯಿಲೆಗಳ ವಿರುದ್ಧ ಹೋರಾಡಲು ಜೀರಿಗೆ ಪ್ರಯೋಜನಕಾರಿಯಾಗಿದೆ. ಊಟದ ನಂತರ ಒಂದು ಲೋಟ ಜೀರಿಗೆ ನೀರು ಕುಡಿಯುವುದರಿಂದ ನಿಮ್ಮ ಹೊಟ್ಟೆ ಹೆಚ್ಚು ಸಮಯದವರೆಗೆ ತುಂಬಿರುತ್ತದೆ ಎಂದು ಆಯುರ್ವೇದ ತಜ್ಞರು ಅಭಿಪ್ರಯಿಸಿದ್ದಾರೆ.

ತಯಾರಿಸುವ ವಿಧಾನ

1 ಕಪ್ ನೀರು

2 ಚಮಚ ಜೀರಿಗೆ

ಮೊದಲು ಒಂದು ಲೋಟ ನೀರಿಗೆ ಸ್ವಲ್ಪ ಜೀರಿಗೆ ಹಾಕಿ ಬಿಸಿ ಮಾಡಿ, ಆ ನೀರು ಕುದಿಸಿದ ನಂತರ ನೀರನ್ನು ಒಂದು ಕಪ್​ಗೆ ಸೋಸಿ ಕುಡಿಯಬೇಕು. ಉಗುರು ಬೆಚ್ಚಗಿರುವ ನೀರಲ್ಲೂ ನೀವು ಇದನ್ನು ಕುಡಿಯಬಹುದು. ಆದರೆ ಇದು ಬಿಸಿ ಸ್ವಭಾವವನ್ನು ಹೊಂದಿರುವುದರಿಂದ ಎರಡು ಕಪ್ ಮಾತ್ರ ಕುಡಿಯುವುದು ಉತ್ತಮವೆಂದು ಹೇಳಲಾಗಿದೆ. ಇಲ್ಲದಿದ್ದರೆ ರಾತ್ರಿ ಇಡೀ ನೀರನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಎದ್ದ ನಂತರ ಯಾವುದೇ ಆಹಾರ ಸೇವನೆ ಮಾಡುವುದಕ್ಕೂ ಮೊದಲು ಹಳದಿ ಬಣ್ಣಕ್ಕೆ ತಿರುಗಿರುವ ನೀರನ್ನು ಕುಡಿಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net