ಅಂಜೂರ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು? ಸೇವಿಸುವ ಮುನ್ನ ಈ ಮಾಹಿತಿ ತಿಳಿದಿರಲಿ..

anjeer
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಡ್ರೈ ಫ್ರೂಟ್ಸ್​​ ನಿಸ್ಸಂದೇಹವಾಗಿ ದೇಹಕ್ಕೆ ಹೆಚ್ಚಿನ ಶಕ್ತಿ ಜತೆಗೆ ಖನಿಜಗಳು, ಜೀವಸತ್ವಗಳಂತಹ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದರೆ ಅಂಜೂರ ಎಂದೂ ಕರೆಯಲ್ಪಡುವ ಅಂಜೀರ್ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಇದನ್ನು ಹಲವಾರು ರೀತಿಯಲ್ಲಿ ಸೇವನೆ ಮಾಡಬಹುದಾಗಿದೆ. ಬಿಸಿಲಿನಲ್ಲಿ ಒಣಗಿಸಿ ಸೇವಿಸುವುದರ ಜತೆಗೆ ಅಂಜೂರದ ಹಣ್ಣುಗಳನ್ನು ನೆನೆಸಿ ಮತ್ತು ಗೋಡಂಬಿಯೊಂದಿಗೆ ಹಾಲಿಗೆ ಸೇರಿಸಿ ಸೇವಿಸಬಹುದಾಗಿದ್ದು ಇದರು ಪ್ರಯೋಜನಗಳು ಇಂತಿವೆ.

ಕರುಳನ್ನು ಪೋಷಿಸುವ ಮತ್ತು ಟೋನ್ ಮಾಡುವ ಸಾಮರ್ಥ್ಯಕ್ಕಾಗಿ ಅಂಜೂರವನ್ನು ಆಗಾಗ್ಗೆ ಶಿಫಾರಸು ಮಾಡಲಾಗುತ್ತದೆ. ಹೆಚ್ಚಿನ ಫೈಬರ್ ಅಂಶದಿಂದಾಗಿ, ಅವು ನೈಸರ್ಗಿಕ ದೇಹಕ್ಕೆ ಬೇಕಾದ ಪೋಷಕಾಂಶ ಒದಗಿಸುತ್ತದೆ. ಅಲ್ಲದೇ, ಇದು ಜೀರ್ಣಕ್ರಿಯೆ ಸುಧಾರಿಸಲು ಸಹಾಯಕವಾಗಿದೆ.

ವಿಶೇಷವಾಗಿ ಮಾಗಿದ ಅಂಜೂರದ ಹಣ್ಣುಗಳ್ಲಲಿನ ಸಂಯುಕ್ತಗಳು ದೇಹವನ್ನು ರಕ್ಷಿಸುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ. ಇವು ದೇಹದಲ್ಲಿನ ಜೀವಕೋಶಗಳು ಮತ್ತು ಅಂಗಾಂಶಗಳಿಗೆ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತವೆ. ಅಂಜೂರದಲ್ಲಿ ಮೂಳೆ ಸ್ನೇಹಿ ಖನಿಜಗಳಾದ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫಾಸ್ಫರಸ್ ಅಧಿಕವಾಗಿದ್ದು, ಇವುಗಳು ಮೂಳೆಯನ್ನು ಬಲಪಡಿಸುತ್ತವೆ. ಅಂಜೂರದಲ್ಲಿ ವಿಶೇಷವಾಗಿ ಕ್ಯಾಲ್ಸಿಯಂ ಅಧಿಕವಾಗಿದ್ದು, ಕೆಲವು ಅಧ್ಯಯನಗಳು ಇದು ಇತರ ಹಣ್ಣುಗಳಿಗಿಂತ ಇದು 3.2 ಪಟ್ಟು ಹೆಚ್ಚು ಕ್ಯಾಲ್ಸಿಯಂ ಹೊಂದಿದೆ ಎಂದು ಹೇಳಿವೆ.

ಅಂಜೂರಗಳಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುವುದರಿಂದ, ಹೆಚ್ಚಿನ ಉಪ್ಪು ಆಹಾರದಿಂದ ಉಂಟಾಗುವ ಕ್ಯಾಲ್ಸಿಯಂನ ಮೂತ್ರ ವಿಸರ್ಜನೆಯನ್ನು ಸರಿದೂಗಿಸಲು ಅವು ಸಹಾಯ ಮಾಡಬಹುದಾಗಿವೆ. ಅಲ್ಲದೇ, ಅಂಜೂರದ ಎಲೆಗಳ ಚಹಾವನ್ನು ಕುಡಿಯುವುದು ಮಧುಮೇಹ ರೋಗಿಗಳಿಗೆ ಪೂರಕವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.ಈ ವಿಷಯವು ಸಲಹೆ ಸೇರಿದಂತೆ ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net