

ಗ್ರೇಟರ್ ನೋಯ್ಡಾ: ಸಂಶಯ ಎಂಬ ರೋಗ ಎಂಥೆಂಥ ಉತ್ತಮ ಸ್ನೇಹ-ಸಂಬಂಧಗಳನ್ನೂ ಕೊಲ್ಲುತ್ತದೆ ಎಂಬುದಕ್ಕೆ ಇಲ್ಲೊಂದು ಸಾಕ್ಷಿ ಇದೆ..
ತನ್ನ ಹೆಂಡತಿಯೊಂದಿಗೆ ಸಂಬಂಧ ಹೊಂದಿದ್ದಾನೆಂದು ಅನುಮಾನಿಸಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ.
ಸೆಕ್ಟರ್ ಬೀಟಾ 2 ರ ನಾತ್ ಮಾಧಯ್ಯ ಪ್ರದೇಶದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮಿಲನ್ ಎಂದು ಗುರುತಿಸಲಾಗಿದೆ. ಶವದ ಗುರುತು ಸಿಗದಂತೆ ಆರೋಪಿ ಮಿಲನ್‌ನ ಮುಖವನ್ನು ಇಟ್ಟಿಗೆಯಿಂದ ವಿರೂಪಗೊಳಿಸಿದ್ದಾನೆ.
ಕೃಷ್ಣ ಮತ್ತು ಮಿಲನ್ ಪರಸ್ಪರ ಸ್ನೇಹಿತರಾಗಿದ್ದರು ಮತ್ತು ಅವರು ಪರಸ್ಪರರ ಕುಟುಂಬಗಳೊಂದಿಗೆ ಚೆನ್ನಾಗಿ ಪರಿಚಿತರಾಗಿದ್ದರು. ಮಿಲನ್ ಕೃಷ್ಣನ ಮನೆಗೆ ಯಾವಾಗಲೂ ಭೇಟಿ ನೀಡುತ್ತಿದ್ದ ಮತ್ತು ಆತನ ತಾಯಿ ಮತ್ತು ಹೆಂಡತಿಗೆ ಹತ್ತಿರವಾಗಿದ್ದ.
ಕೃಷ್ಣ ಮಿಲನ್‌ನ ಈ ನಿಕಟತೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ಮತ್ತು ಅವನ ಹೆಂಡತಿಯೊಂದಿಗೆ ಮಿಲನ್ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಗೊಂಡ. ಇದರಿಂದಾಗಿಯೇ ಆತನ ಮನೆಗೆ ಭೇಟಿ ನೀಡುವುದನ್ನು ನಿಲ್ಲಿಸುವಂತೆ ಕೃಷ್ಣ ಮಿಲನ್ಗೆ ತಿಳಿಸಿದ್ದ.
ಮಿಲನ್ ನನ್ನು ಕೊನೆಗಾಣಿಸಬೇಕೆಂದು ಕೃಷ್ಣ ತನ್ನ ಸ್ನೇಹಿತರಾದ ಅರುಣ್ ಮತ್ತು ಪಪ್ಪು ಅವರೊಂದಿಗೆ ಒಂದು ಯೋಜನೆ ರೂಪಿಸಿದ. ಇವರೆಲ್ಲರೂ ಶನಿವಾರ ರಾತ್ರಿ ಮಿಲನ್ನನ್ನು ಮೂಲೆಗೆ ತಳ್ಳಿ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ವಲಯ 3), ವಿಶಾಲ್ ಪಾಂಡೆ ತಿಳಿಸಿದ್ದಾರೆ.
ಘಟನೆ ನಡೆಯುವ ಒಂದು ರಾತ್ರಿ ಮೊದಲು ಮಿಲನ್ ಮತ್ತು ಆರೋಪಿ ಕೃಷ್ಣ ಶನಿವಾರ ವಾಗ್ವಾದ ನಡೆಸಿದ್ದಾರೆಂದು ತನಿಖೆಯಿಂದ ಪೊಲೀಸರಿಗೆ ತಿಳಿದುಬಂದಿದೆ.
ಸಾವಿಗೀಡಾದ ಮಿಲನ್, ಪಶ್ಚಿಮ ಬಂಗಾಳದ ಮಾಲ್ಡಾ ಪ್ರದೇಶದವ. ‘ಭಾನುವಾರ ಬೆಳಿಗ್ಗೆ ನಾಥ್ ಮಾಧಯ್ಯ ಸಮುದಾಯ ಭವನದ ಬಳಿ ಮಿಲನ್ ನ ಶವ ಪತ್ತೆಯಾದಾಗ ಈ ಘಟನೆ ಬೆಳಕಿಗೆ ಬಂದಿದೆ. ಕತ್ತುಹಿಸುಕುವ ಮುನ್ನ ಕೃಷ್ಣ ಮಿಲನ್ಗೆ ಇಟ್ಟಿಗೆಯಿಂದ ಹೊಡೆದಿದ್ದ.
ಪೊಲೀಸರು ವಿಚಾರಣೆ ಆರಂಭಿಸಿದ ನಂತರ ಕೃಷ್ಣನನ್ನು ಬಂಧಿಸಲಾಯಿತು.