ನವದೆಹಲಿ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರ ಐಪಿಎಲ್ ಭವಿಷ್ಯದ ಬಗ್ಗೆ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೊಂದಿಗೆ ಹಿಟ್‌ಮ್ಯಾನ್ ಪ್ರಯಾಣ ಮುಗಿದಿದೆ. ಈ ಬಾರಿ ಅವರು ಮೆಗಾ ಹರಾಜಿಗೆ ಪ್ರವೇಶಿಸುವ ಸಾಧ್ಯತೆಯಿದೆ. ಇಲ್ಲದಿದ್ದರೆ, ಟ್ರೇಡ್ ಮೂಲಕವೂ ಮತ್ತೊಂದು ಫ್ರಾಂಚೈಸಿಗೆ ವರ್ಗಾಯಿಸಬಹುದು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಮುಂಬೈ ತಂಡಕ್ಕೆ ರೋಹಿತ್ ಶರ್ಮ ಅವರು ಐದು ಬಾರಿ ಟ್ರೋಫಿ ಗೆದ್ದು ಕೊಟ್ಟಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಚಾಂಪಿಯನ್ ಆದ ತಂಡವೆಂಬ ಹೆಗ್ಗಳಿಕೆ ಹೊಂದಿದೆ. ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 2013, 2015, 2017, 2019 ಮತ್ತು 2020 ಆವೃತ್ತಿಗಳಲ್ಲಿ ಪ್ರಶಸ್ತಿಯನ್ನು ಗೆದ್ದಿದೆ.
ರೋಹಿತ್ ಶರ್ಮ ಇಷ್ಟೆಲ್ಲ ಕೊಡುಗೆ ನೀಡಿದರೂ ಮುಂಬೈ ಇಂಡಿಯನ್ಸ್ ಮಾತ್ರ ಅವರನ್ನು ಐಪಿಎಲ್-2024ರ ಸೀಸನ್‌ಗೂ ಮುಂಚೆಯೇ ನಾಯಕತ್ವದಿಂದ ಕೆಳಗೆ ಇಳಿಸಿತು. ರೋಹಿತ್ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಕೂರಿಸಲಾಯಿತು. ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿಸಿ ಮುಂಬೈ ಫ್ರಾಂಚೈಸಿ ನಾಯಕನನ್ನಾಗಿ ನೇಮಿಸಿತು. ಇದು ರೋಹಿತ್‌ಗೆ ಮಾಡಿದ ಅವಮಾನ ಎಂದು ಅಭಿಮಾನಿಗಳು ಅಸಮಾಧಾನ ಹೊರಹಾಕಿದರು. ಅಲ್ಲದೆ, ಪಾಂಡ್ಯ ಅವರನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು.
ತೀವ್ರ ವಿರೋಧದ ನಡುವೆ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡ ಹಾರ್ದಿಕ್ ಕಳೆದ ಸೀಸನ್ನಲ್ಲಿ ಕಳಪೆ ನಾಯಕತ್ವದಿಂದಾಗಿ ಪ್ಲೇ ಆಫ್ ಹಂತ ಪ್ರವೇಶಿಸಲಾಗದೇ ಟೂರ್ನಿಯಿಂದ ಹೊರಬಿದ್ದಿತು. ಇತ್ತ ರೋಹಿತ್, ತನ್ನ ನಾಯಕತ್ವದಿಂದ ಕೆಳಗಿಳಿಸಿ ಅಗೌರವ ತೋರಿದೆ ಎಂದು ತಂಡದ ಮ್ಯಾನೇಜ್ಮೆಂಟ್ ಮೇಲೆ ಅಸಮಾಧಾನ ಹೊಂದಿದ್ದರು. ಅಲ್ಲದೆ, ತಂಡವನ್ನು ತೊರೆಯುತ್ತಾರೆ ಎಂಬ ಮಾತುಗಳು ಬಹಳ ಹಿಂದಿನಿಂದಲೂ ಕೇಳಿಬಂದಿತು. ಐಪಿಎಲ್-2025 ಮೆಗಾ ಹರಾಜಿಗೂ ಮುನ್ನ ರೋಹಿತ್ ಮುಂಬೈ ತೊರೆಯುತ್ತಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಬೆಳವಣಿಗೆಗಳನ್ನು ಆಧರಿಸಿ, ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರೋಹಿತ್ ಮುಂಬೈ ಇಂಡಿಯನ್ಸ್‌ನಲ್ಲಿ ಮುಂದುವರಿಯುತ್ತಾರೋ ಇಲ್ಲವೋ? ಎಂಬುದು ಪ್ರಶ್ನಾರ್ಹ. ಆದಾಗ್ಯೂ, ನನ್ನ ಅಭಿಪ್ರಾಯದಲ್ಲಿ ಅವರು ಇನ್ನು ಮುಂದೆ ಫ್ರಾಂಚೈಸಿಯೊಂದಿಗೆ ಇರುವುದಿಲ್ಲ ಎನಿಸುತ್ತಿದೆ. ಮಹೇಂದ್ರ ಸಿಂಗ್ ಧೋನಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇರುವ ಸಂಬಂಧದ ರೀತಿ ಮುಂಬೈ ಮತ್ತು ರೋಹಿತ್ ನಡುವೆ ಇಲ್ಲ. ಹಾಗಾಗಿ ರೋಹಿತ್ ಹೊರ ಬರುತ್ತಾರೆ ಎನ್ನಬಹುದು. ಇತ್ತ ಮುಂಬೈ ತಂಡ ಕೂಡ ಅವರನ್ನೂ ಉಳಿಸಿಕೊಳ್ಳದೇ ಇರಬಹುದು. ಹಾಗಾಗಿ ರೋಹಿತ್ ಟ್ರೇಡ್ ವಿಂಡೋ ಮೂಲಕ ಅಥವಾ ಮೆಗಾ ಹರಾಜಿಗೆ ಪ್ರವೇಶಿಸುವ ಮೂಲಕ ಮತ್ತೊಂದು ತಂಡಕ್ಕೆ ತೆರಳುವ ಸಾಧ್ಯತೆಯಿದೆ ಎಂದು ಆಕಾಶ್ ಚೋಪ್ರಾ ಹೇಳಿದರು. (ಏಜೆನ್ಸೀಸ್)
ಡಿವೋರ್ಸ್ ಘೋಷಣೆ ಮಾಡಿದ ಬೆನ್ನಲ್ಲೇ ಜಯಂ ರವಿ ವಿರುದ್ಧ ಆಕ್ರೋಶ ಹೊರಹಾಕಿದ ಪತ್ನಿ ಆರತಿ!
ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?
ನನ್ನ ದಾಖಲೆ ಸೇಫ್… ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದ ಮುತ್ತಯ್ಯ ಮುರಳೀಧರನ್!