ನನ್ನ ದಾಖಲೆ ಸೇಫ್​… ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದ ಮುತ್ತಯ್ಯ ಮುರಳೀಧರನ್!

Muttiah Muralitharan

ನವದೆಹಲಿ: ಶ್ರೀಲಂಕಾದ ಲೆಜೆಂಡರಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಂದುವರಿದಿದ್ದಾರೆ. ಈ ಆಫ್ ಸ್ಪಿನ್ನರ್​ ಟೆಸ್ಟ್​ ಸ್ವರೂಪದಲ್ಲಿ 800 ವಿಕೆಟ್ ಪಡೆದಿರುವುದು ವಿಶ್ವದಾಖಲೆಯಾಗಿದೆ. ಈ ದಾಖಲೆಯನ್ನು ಯಾವುದೇ ಬೌಲರ್​ನಿಂದ ಮುರಿಯಲು ಸಾಧ್ಯವಿಲ್ಲ ಎಂದಿರುವ ಮುರಳೀಧರನ್​, ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

blank

ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಮುರಳೀಧರನ್​, ಸದ್ಯ ಎಲ್ಲರೂ ಟಿ20 ಕ್ರಿಕೆಟ್‌ನತ್ತ ಗಮನ ಹರಿಸುತ್ತಿದ್ದಾರೆ. ಹಾಗಾಗಿ ನನ್ನ ದಾಖಲೆ ಸೇಫ್​ ಆಗಿದೆ. ಯಾರೂ ಕೂಡ ನನ್ನ ದಾಖಲೆ ಹತ್ತಿರ ಕೂಡ ಸುಳಿಯುವುದಿಲ್ಲ ಎಂದರು. ಹಲವು ದೇಶಗಳಲ್ಲಿ ಟೆಸ್ಟ್ ಕ್ರಿಕೆಟ್ ನೋಡುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ಇದೇ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದರು. ಟೆಸ್ಟ್​ ಪಂದ್ಯಗಳ ಸಂಖ್ಯೆ ಕಡಿಮೆಯಾಗಲಿದ್ದು, ಪ್ರತಿ ದೇಶವು ವರ್ಷದಲ್ಲಿ ಆರು ಅಥವಾ ಏಳು ಟೆಸ್ಟ್‌ಗಳನ್ನು ಮಾತ್ರ ಆಡುತ್ತವೆ ಎಂದರು.

ನಾನು ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಆಟಗಾರರ ವೃತ್ತಿಜೀವನ 20 ವರ್ಷವಾಗಿತ್ತು ಆದರೆ, ಇಂದು ಆಟಗಾರರ ವೃತ್ತಿಜೀವನ ಬಹಳ ಕಡಿಮೆಯಾಗಿದೆ. ಟೆಸ್ಟ್​ ಸ್ವರೂಪದಲ್ಲಿ 800 ವಿಕೆಟ್‌ಗಳ ನನ್ನ ದಾಖಲೆಯನ್ನು ಬೇರೆಯವರು ಮೀರಿಸುವುದು ತುಂಬಾ ಕಷ್ಟ ಎಂದು ಮುತ್ತಯ್ಯ ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.

ಮುತ್ತಯ್ಯ ಮುರಳೀಧರನ್ ಹೇಳಿದಂತೆ ಅವರ ದಾಖಲೆ ಮುರಿಯುವುದು ತುಂಬಾ ಕಷ್ಟ. ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ 530 ವಿಕೆಟ್ ಮತ್ತು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 516 ವಿಕೆಟ್ ಪಡೆದಿದ್ದಾರೆ. ಆದರೆ, ಲಿಯೋನ್​ಗೆ 36 ಮತ್ತು ಅಶ್ವಿನ್​ಗೆ 37 ವರ್ಷ. ಹೀಗಾಗಿ ಇಬ್ಬರೂ ನಿವೃತ್ತಿಯ ಸನಿಹದಲ್ಲಿದ್ದಾರೆ. ಆದ್ದರಿಂದ ಮುರಳೀಧರನ್ ಅವರ ದಾಖಲೆಯನ್ನು ಮುರಿಯುವುದು ಇಬ್ಬರಿಗೂ ತುಂಬಾ ಕಷ್ಟ.

blank

ಇನ್ನು ದಕ್ಷಿಣ ಆಫ್ರಿಕಾದ ವೇಗದ ಬೌಲರ್​ ಕಾಗಿಸೊ ರಬಾಡಾ 30 ವರ್ಷದೊಳಗಿನ ಬೌಲರ್‌ಗಳಲ್ಲಿ 299 ವಿಕೆಟ್‌ಗಳನ್ನು ಹೊಂದಿದ್ದಾರೆ. ಆದರೆ, ಗಾಯದ ಸಮಸ್ಯೆಯಿಂದ ಬಳಲದೆ ಹಲವು ವರ್ಷಗಳ ಕಾಲ ಪಂದ್ಯಗಳನ್ನು ಆಡುತ್ತಾರೆಯೇ ಎಂದು ಹೇಳುವುದು ಕಷ್ಟ. ಅದೇ ಸಮಯದಲ್ಲಿ ಟಿ20 ಕ್ರಿಕೆಟ್‌ನೊಂದಿಗೆ ಫ್ರಾಂಚೈಸಿ ಕ್ರಿಕೆಟ್ ಆಡುತ್ತಿರುವುದರಿಂದ ಆಟಗಾರರು ತಮ್ಮ ವೃತ್ತಿಜೀವನವನ್ನು ದೀರ್ಘಕಾಲ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಬಾಡಾಗೂ ಮುರಳೀಧರನ್​ ದಾಖಲೆ ಮುರಿಯುವುದು ಕಷ್ಟ. ಹಾಗಾಗಿ ಟೆಸ್ಟ್​ ಕ್ರಿಕೆಟ್​ನಲ್ಲಿ ಮುರಳೀಧರನ್​ ಎಂದೆಂದಿಗೂ ನಂಬರ್​ 1 ಬೌಲರ್​ ಆಗಿಯೇ ಇರುತ್ತಾರೆ. (ಏಜೆನ್ಸೀಸ್​)

ಮುಂಗುಸಿ ತಪ್ಪಿಸಲು ಹೋಗಿ ಕಾರು ಅಪಘಾತ: ಎದೆಗೆ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡ ನಟ ಕಿರಣ್​ ರಾಜ್​

ಆರ್ಡರ್​ ಮಾಡಿದ್ದು ಪುರುಷರ ಅಂಡರ್​ವೇರ್ ಬಂದಿದ್ದು ಮಾತ್ರ ಬಿಕಿನಿ!​ ನೋವು ತೋಡಿಕೊಂಡ ಯುವಕ

Share This Article

ಮುಖದ ಸೌಂದರ್ಯಕ್ಕೆ ಐಸ್​​ಕ್ಯೂಬ್.. ಕೂಲ್.. ಕೂಲ್! ಐಸ್‌ಕ್ಯೂಬ್‌ನಿಂದ ಸೌಂದರ್ಯದ ಆರೈಕೆ.. Ice Facial Benefits

Ice Facial Benefits:  ಮಹಿಳಯರು ಸೌಂದರ್ಯಪ್ರಿಯರು. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಾಗೂ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು  ಮಾರುಕಟ್ಟೆಯಲ್ಲಿ…

ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits

Goat Milk Health Benefits :  ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…

ಪೋಷಕರೇ ಹುಷಾರ್‌! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips

Parents Tips : ಮಕ್ಕಳಿರುವ ಮನೆ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆರು ವರ್ಷದವರೆಗೆ…